ಸುರತ್ಕಲ್ ಟೋಲ್ ಗೇಟ್ ಹೋರಾಟಗಾರರ ಮನೆಗಳಿಗೆ ಪೊಲೀಸರು ಭೇಟಿ ನೀಡಿ ನೋಟಿಸ್ ನೀಡಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಬಿ.ಕೆ. ಇಮ್ತಿಯಾಝ್, ಪ್ರತಿಭಾ ಕುಳಾಯಿ, ರಾಘವೇಂದ್ರ ರಾವ್ ಸೇರಿದಂತೆ ಹಲವು ಮುಖಂಡರಿಗೆ ಸುರತ್ಕಲ್ ಪೊಲೀಸರು ನೋಟಿಸ್ ನೀಡಿದ್ದಾರೆ. ನೋಟಿಸ್‌ನಲ್ಲಿ ಈಗಾಗಲೇ ಸಭೆ ನಡೆಸಿ ಹೋರಾಟ ಹಿಂಪಡೆಯುವಂತೆ
ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಬಾಣಾವರ ಹೋಬಳಿಯ ಹಳ್ಳಿಕೆರೆ ಗ್ರಾಮದ ಬಳಿ ಕಳೆದ ತಡರಾತ್ರಿ ಭೀಕರ ಅಪಘಾತ ಸಂಭವಿಸಿದ್ದು ಒಂದೇ ಕುಟುಂಬದ 9 ಮಂದಿ ಸ್ಥಳದಲ್ಲಿಯೇ ದುರ್ಮರಣಕ್ಕೀಡಾಗಿರುವ ದಾರುಣ ಘಟನೆ ನಡೆದಿದೆ. ಸರ್ಕಾರಿ ಬಸ್ಸು, ಹಾಲಿನ ಟ್ಯಾಂಕರ್ ಮತ್ತು ಟೆಂಪೋ ಟ್ರಾವೆಲರ್ ಮಧ್ಯೆ ಸರಣಿ ಅಪಘಾತ ಸಂಭವಿಸಿ ಈ ದುರ್ಘಟನೆ ನಡೆದಿದೆ. ಅಪಘಾತದಲ್ಲಿ ಮೃತಪಟ್ಟವರು 50 ವರ್ಷದ ಲೀಲಾವತಿ, 33 ವರ್ಷದ ಚೈತ್ರಾ, 10 ವರ್ಷದ ಸಮರ್ಥ್, 12 ವರ್ಷದ ದೀಪ್ತಿ, 10 ವರ್ಷದ
ಉಳ್ಳಾಲ: ಪದ್ಮಶ್ರೀ ಪುರಸ್ಕೃತ 102 ರ ಹರೆಯದ ಸಾಲುಮರದ ತಿಮ್ಮಕ್ಕ ಇಂದು ಕುತ್ತಾರು ಕೊರಗಜ್ಜ ಆದಿಸ್ಥಳ ಹಾಗೂ ರಕ್ತೇಶ್ವರಿ ಹಾಗೂ ಎಳ್ವೆರ್ ಸಿರಿಕುಲು ಆದಿಸ್ಥಳಗಳಿಗೆ ಕುಟುಂಬ ಸಮೇತರಾಗಿ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಎಲ್ಲರಿಗೂ ಒಳಿತನ್ನು ದೈವಶಕ್ತಿಗಳು ಕರುಣಿಸಲಿ. ದೇಶಕ್ಕೆ ಬಾಧಿಸಿರುವ ಸಾಂಕ್ರಾಮಿಕ ದೂರವಾಗಲಿ. ಎಲ್ಲರೂ ಪರಿಸರದೊಂದಿಗಿನ ಕಾಳಜಿಯ ಜೊತೆಗೆ ಸುಖಕರ ಜೀವನ ನಡೆಸಲಿ. ಪ್ರಕೃತಿ ಆರಾಧನೆಯೇ ದೈವಾರಾಧನೆ ಎಂದರು.
ಮೂಡುಬಿದಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್ (ರಿ), ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಪಿ.ಟ್ರಸ್ಟ್ (ರಿ), ಮೂಡುಸಿದಿರೆ ಇವುಗಳ ವತಿಯಿಂದ ತಾಲೂಕಿನ ೮೦ ಕೇಂದ್ರಗಳಲ್ಲಿ 7 ದಿನಗಳ ಕಾಲ ಏಕಕಾಲದಲ್ಲಿ ಅನುಭವಿ ಯೋಗ ಶಿಕ್ಷಕರಿಂದ ನಡೆದ ಯೋಗ ಶಿಬಿರ ದಸರಾ ಯೋಗೋತ್ಸವ’ವು ಪಾಲಡ್ಕ, ಬ್ರಹ್ಮಶ್ರೀ ನಾರಾಯಣಗುರು ಜಿಲ್ಲವ ಸಂಘದಲ್ಲಿ ಶನಿವಾರ ಸಮಾಪನಗೊಂಡಿತು.
ವಿಟ್ಲ: ರೈಲ್ವೆ ಬ್ರಿಡ್ಜ್ ಸೇಫ್ಟಿ ಗಾರ್ಡ್ ಗೆ ಕಂಟೈನರ್ ಡಿಕ್ಕಿ ಹೊಡೆದ ಘಟನೆ ಮುಂಜಾನೆ ಮಿತ್ತೂರಿನಲ್ಲಿ ನಡೆದಿದೆ. ಮಿತ್ತೂರು ರೈಲ್ವೆ ಬ್ರಿಡ್ಜ್ ಸೇಫ್ಟಿ ಗಾರ್ಡ್ ಗೆ ಕಾರು ಕೊಂಡೊಯ್ಯುವ ಕಂಟೈನರ್ ಡಿಕ್ಕಿ ಹೊಡೆದಿದ್ದು, ಘಟನೆಯಿಂದಾಗಿ ರೈಲ್ವೆ ಬ್ರಿಡ್ಜ್ ಸೇಫ್ಟಿ ಗಾರ್ಡ್ ಹಾನಿಗೊಳಗಾಗಿದೆ. ಮಂಗಳೂರಿನಿಂದ ಬೆಂಗಳೂರಿಗೆ ಕಾರು ಕೊಂಡೊಯ್ಯುತ್ತಿದ್ದ ಕಂಟೈನರ್ ಮಾಣಿ ಬಳಿ ದಾರಿ ತಪ್ಪಿ ಪುತ್ತೂರು ರಸ್ತೆಯಲ್ಲಿ ಬಂದಿದ್ದು, ಈ ವೇಳೆ ಮಿತ್ತೂರಿನಲ್ಲಿ ರೈಲ್ವೆ
ಮೂಡುಬಿದಿರೆ: ಇಲ್ಲಿನ ತಾಲೂಕು ತಹಶೀಲ್ದಾರ್ ತಾಲೂಕು ಸತ್ಯಪ್ಪ ಸಚ್ಚಿದಾನಂದ ಕುಚನೂರು ಅವರು ಬೆಳುವಾಯಿ ಗ್ರಾಮ ಪಂಚಾಯತ್‌ನಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಪಂಚಾಯತ್ ಸಭಾಂಗಣದಲ್ಲಿ ಗ್ರಾಮ ವಾಸ್ತವ್ಯ ಹೂಡಿದರು. ಪಂಚಾಯತ್ ಅಧ್ಯಕ್ಷೆ ಸುಶೀಲಾ ಅವರು ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಪಂಚಾಯತ್‌ನ ಮಾಜಿ ಅಧ್ಯಕ್ಷ ರಾಘು ಪೂಜಾರಿ ಮಾತನಾಡಿ, ಮನೆಗಳ ಬಳಿ ಮರಗಳಿಲ್ಲದಿದ್ದರೂ ಡೀಮ್ಸ್ ಫಾರೆಸ್ಟ್ ಎಂದು ಪಟ್ಟಿಯನ್ನು ಕೊಟ್ಟಿದ್ದಾರೆ, ಇದಲ್ಲದೇ
ಮಂಗಳೂರು: ನಗರದ ವೆಂಕಟ್ರಮಣ ದೇವಸ್ಥಾನದಲ್ಲಿ ಚಾತುರ್ಮಾಸ ವೃತದಲ್ಲಿರುವ ಕಾಶೀಮಠ ಸಂಸ್ಥಾನದ ಮಠಾಧೀಶರಾದ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿಗ್ವಿಜಯ ಮಹೋತ್ಸವ ಕಾರ್ಯಕ್ರಮ ಶನಿವಾರ ವೈಭವದಿಂದ ನಡೆಯಿತು. ಈ ಅಪೂರ್ವ ಕ್ಷಣಕ್ಕೆ ದೇಶದ ನಾನಾ ಕಡೆಯಿಂದ ಆಗಮಿಸಿದ ಸಹಸ್ರ ಸಹಸ್ರ ಸಂಖ್ಯೆಯ ಭಕ್ತಾದಿಗಳು ಸಾಕ್ಷಿಯಾದರು. ರಥಬೀದಿ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ಚಾತುರ್ಮಾಸ್ಯ ಮೆರವಣಿಗೆ ಆರಂಭಗೊಂಡು ಮಹಾಮ್ಮಾಯ ದೇವಸ್ಥಾನ ರಸ್ತೆ, ಗದ್ದೆಕೇರಿ, ಮಂಜೇಶ್ವರ ಗೋವಿಂದ
ಸುಳ್ಯ: ಸುಳ್ಯದಲ್ಲಿ ಕಳೆದ 6 ಬಾರಿ ಶಾಸಕರಾಗಿ ಸಚಿವರಾಗಿರುವ ಅಂಗಾರರ ವಿರುದ್ಧ ಸುಳ್ಯದ ಕಾಂಗ್ರೆಸಿಗರಿಗೆ ಕಳೆದ 30 ವರ್ಷಗಳಿಂದ ಯಾವುದೇ ಸರ್ಕಸ್ ಮಾಡಿದರೂ ಗೆಲ್ಲಲು ಸಾಧ್ಯವಾಗಿಲ್ಲ. ಮುಂದೆಯೂ ಗೆಲ್ಲಲು ಸಾಧ್ಯವಿಲ್ಲ ಎಂದು ಸುಳ್ಯ ಬಿಜೆಪಿ ನಗರ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಜಿನ್ನಪ್ಪ ಪೂಜಾರಿ ಮತ್ತು ಸಿಎ ಬ್ಯಾಂಕ್ ಅಧ್ಯಕ್ಷ ಬಾಲಗೋಪಾಲ ಸೇರ್ಕಜೆ ಹೇಳಿದರು. ಅವರು ಸುಳ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, “ಸುಳ್ಯದ ಜನತೆ ಅಂಗಾರರನ್ನು
ಪುತ್ತೂರು : ಆಟೋ ರಿಕ್ಷಾವೊಂದು ಡಿವೈಡರ್ ಗೆ ಡಿಕ್ಜಿಯಾಗಿ ಪಲ್ಟಿಯಾದ ಘಟನೆ ಪುತ್ತೂರು ಉಪ್ಪಿನಂಗಡಿಯ ಪಡೀಲ್ ನಲ್ಲಿ ನಡೆದಿದ್ದು, ಘಟನೆಯಲ್ಲಿ ಗಾಯಗೊಂಡ ಮಹಿಳೆ ಮತ್ತು ಚಾಲಕನನ್ನು ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಪಿ.ಎಸ್.ಐ ಸೇಸಮ್ಮ ಮತ್ತು ಎ.ಎಸ್.ಐ ರಾಧಾಕೃಷ್ಣ ಅವರು ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಚಾಲಕ ಅಬ್ದುಲ್ ಎಂಬವರ ಆಟೋ ಡಿವೈಡರ್‍ಗೆ ಬಡಿದ ಹಿನ್ನಲೆಯಲ್ಲಿ ಮಹಿಳೆ ಕುಸುಮಾವತಿಯವರಿಗೆ ಗಾಯವಾಗಿತ್ತು. ಈ ವೇಳೆ ಜನರು
ಮಂಜೇಶ್ವರ : ಕಿಡ್ನಿ ವೈಫಲ್ಯಕ್ಕೊಳಗಾಗಿ ಚಿಕಿತ್ಸೆಯಲ್ಲಿರುವ ಮಂಜೇಶ್ವರದ ಕಾಂಗ್ರೆಸ್ ಕಾರ್ಯಕರ್ತ ಬಶೀರ್ ರವರಿಗೆ ಹರ್ಷಾದ್ ವರ್ಕಾಡಿಯವರ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಸಂಗ್ರಹಿಸಿದ ಚಿಕಿತ್ಸಾ ಸಹಾಯ ಮೊತ್ತವನ್ನು ಹಸ್ತಾಂತರಿಸಲಾಯಿತು. ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಕಮಲಾಕ್ಷಿ. ಕೆ. ಅವರು 40,000 ರೂ. ಮೊತ್ತವನ್ನು ಬಶೀರ್ ರವರಿಗೆ ಹಸ್ತಾಂತರಿಸಿದರು. ಮಾಜಿ ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಮಂಜೇಶ್ವರ ಬ್ಲಾಕ್




























