Home Archive by category Fresh News (Page 751)

ದುಬೈನಲ್ಲಿ ಈ-ಮಣ್ಣು ಚಲನಚಿತ್ರ ಪ್ರದರ್ಶನ

ಈ-ಮಣ್ಣು ಚಲನ ಚಿತ್ರವನ್ನು ದುಬೈನ ಗಲೇರಿಯಾ ಚಿತ್ರಮಂದಿರದಲ್ಲಿ ವಿಶೇಷ ಅತಿಥಿಗಳನ್ನು ಆಹ್ವಾನಿಸಿ ಪ್ರದರ್ಶಿಸಿದ್ದು, ಯು.ಎ.ಇ.ಕನ್ನಡಿಗರಲ್ಲಿ ಸಡಗರ ಮೂಡಿಸಿತ್ತು. ಹೃದಯ ಸ್ವರ್ಶಿ ಮತ್ತು ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡುವ ಈ ಚಲನಚಿತ್ರವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಶಿವಧ್ವಜ್ ಶೆಟ್ಟಿ ನಿರ್ದೇಶಿಸಿದ್ದು, ದುಬೈನ ಅನಿವಾಸಿ ಕನ್ನಡಿಗ

ರಾಷ್ಟ್ರೀಯ ಶಿಕ್ಷಣ ನೀತಿಯಿಂದ ರಾಷ್ಟ್ರೀಯತೆಯ ಅರಿವು ಮೂಡಲು ಸಾಧ್ಯ : ಶಾಸಕ ಉಮಾನಾಥ ಕೋಟ್ಯಾನ್

ಮೂಡುಬಿದಿರೆ : ಪ್ರತಿಯೊಬ್ಬ ಮಗುವಿನಲ್ಲೂ ಅದರದ್ದೇ ಆದ ಪ್ರತಿಭೆ ಇರುತ್ತದೆ ಅದನ್ನು ಗುರುತಿಸಿ ಹೊರಗೆಳೆಯುವ ಪ್ರಯತ್ನವನ್ನು ಶಿಕ್ಷಕರು ಮಾಡಬೇಕಾಗಿದೆ. ನಮ್ಮ ಉಸಿರು ಇರುವವರೆಗೆ ನಾವು ವಿದ್ಯಾರ್ಥಿಗಳೇ. ಹಾಗಾಗಿ ನಾವು ನಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಿದಾಗ ಸಮಾಜಕ್ಕೆ ಉತ್ತಮವಾದ ಕೊಡುಗೆಯನ್ನು ನೀಡಿದಂತ್ತಾಗುತ್ತದೆ. ಅಲ್ಲದೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದಿಂದ ರಾಷ್ಟ್ರೀಯತೆಯ ಅರಿವು ಮೂಡಲು ಸಾಧ್ಯ ಎಂದು ಶಾಸಕ ಉಮಾನಾಥ ಎ. ಕೋಟ್ಯಾನ್

ಕರಾಟೆ, ಜೂಡೋ, ಸಿಲಂಬಂನಂತಹ ಸಮರ ಕಲೆಗಳ ಜೊತೆಗೆ ಭರತನಾಟ್ಯದಲ್ಲೂ ಸೈ ಎನಿಸಿಕೊಂಡ ವೆನಿಲ್ಲಾ

ಬಂಟ್ವಾಳ: ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಪ್ರತಿಭೆಗಳು ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದು ಬಲು ವಿರಳ. ಕರಾಟೆ, ಜೂಡೋ, ಸಿಲಂಬಂನಂತಹ ಸಮರ ಕಲೆಗಳ ಜೊತೆ ಜೊತೆಗೆ ಭರತನಾಟ್ಯದಲ್ಲೂ ಪ್ರವೀಣ್ಯತೆ ಪಡೆದುಕೊಂಡ ಅಪರೂಪದ ಬಹುಮುಖ ಪ್ರತಿಭೆ ವೆನಿಲ್ಲಾ ಮಣಿಕಂಠ. ಜೂಡೋದಲ್ಲಿ ಬ್ಲಾಕ್‍ಬೆಲ್ಟ್ ಪಡೆದು ರಾಷ್ಟ್ರೀಯ ಮಟ್ಟದ ಮಾರ್ಷಲ್ ಆರ್ಟ್ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದುಕೊಂಡಿರುವ ಬಂಟ್ವಾಳದ ಈ ಪ್ರತಿಭೆ ಭರತನಾಟ್ಯದಲ್ಲೂ

ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ – ಬೆಳ್ಳಂಬೆಳಗ್ಗೆ ಸುಳ್ಯ, ಪುತ್ತೂರಿನ 32 ಸ್ಥಳಗಳಿಗೆ ಎನ್. ಐ. ಎ.‌ ದಾಳಿ.

ಜುಲೈ 26ರಂದು ರಾತ್ರಿ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವ ಮುಂದಾಳು ಪ್ರವೀಣ್ ನೆಟ್ಟಾರು(34ವ)ರವರ ಹತ್ಯೆ ಪ್ರಕರಣದ ತನಿಖೆಗೆ‌ ಇಳಿದಿರುವ ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಸೆ.6ರಂದು ಬೆಳ್ಳಂಬೆಳಗ್ಗೆ ಪುತ್ತೂರು ಮತ್ತು ಸುಳ್ಯದಲ್ಲಿ 32 ಕಡೆ ಮನೆ, ಕಟ್ಟಡಗಳಿಗೆ ದಾಳಿ ನಡೆಸಿ ಆರೋಪಿಗಳು ಮತ್ತು ಆರೋಪಿಗಳಿಗೆ ಸಹಕರಿಸಿದವರ ವಿಚಾರಣೆ ನಡೆಸಿರುವುದಾಗಿ ತಿಳಿದು ಬಂದಿದೆ. ಎನ್.ಐ.ಎ.ಅಧಿಕಾರಿಗಳಿಗೆ ಕರ್ನಾಟಕ ಪೊಲೀಸರು ಸಹಕಾರ ನೀಡಿದ್ದಾರೆ.

ಉಡುಪಿ:ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ ವತಿಯಿಂದ ಶಿಕ್ಷಕರಿಗೆ ಗೌರವ ಪುರಸ್ಕಾರ

ಉಡುಪಿ:ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಉಡುಪಿ ಜಿಲ್ಲೆಯ 5 ಹಿರಿಯ ಸಾಧಕ ಶಿಕ್ಷಕರಿಗೆ ಗೌರವ ಪುರಸ್ಕಾರ 2022 ನೀಡಿ ಗೌರವಿಸಲಾಯಿತು. ಸೆಪ್ಟೆಂಬರ್ 5 ರಂದು ಉಡುಪಿಯ ಮಲಬಾರ್ ಅಂಡ್ ಗೋಲ್ಡ್ ಡೈಮಂಡ್ಸ್ ಶಾಖೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಕ್ಷ್ಮೀನಾರಾಯಣ ಭಟ್ (ಶಿಕ್ಷಣ ಹಾಗೂ ರಂಗಭೂಮಿ) , ರಾಜೇಂದ್ರ ಭಟ್ ಕೆ (ಶಿಕ್ಷಣ ಹಾಗೂ ನಿರೂಪಣೆ ) , ಪ್ರೊ. ನಾರಾಯಣ ಎಂ.

ಆದಿವಾಸಿ‌ ಯುವಕನೊಬ್ಬನ ದಾರುಣ ಕತೆ

ಇದು ಶ್ರೀನಿವಾಸ್ ಗೌಡ್ಲು (ಮಲೆಕುಡಿಯ) ಎಂಬ ಆದಿವಾಸಿ‌ ಯುವಕನೊಬ್ಬನ ದಾರುಣ ಕತೆ ಮಾತ್ರ ಅಲ್ಲ. ಆರೋಗ್ಯ ಕ್ಷೇತ್ರ ವ್ಯಾಪಾರೀಕರಣ ಗೊಂಡಿರುವ‌ ಸಂದರ್ಭದಲ್ಲಿ‌ ಬಡವರು, ಆರ್ಥಿಕವಾಗಿ ಸಬಲರಲ್ಲ ಎಲ್ಲರ ವ್ಯಥೆ. ಶ್ರೀನಿವಾಸ ಗೌಡ್ಲು ಎಂಬ ಆದಿವಾಸಿ ಮಲೆಕುಡಿಯ ಸಮುದಾಯಕ್ಕೆ ಸೇರಿದ ಶೃಂಗೇರಿ ಸಮೀಪದ ಹೊರನಾಡು ನಿವಾಸಿ ತೋಟಗಳಲ್ಲಿ‌ ದುಡಿಯುವ ಕೂಲಿಯಾಳು. 34 ವರ್ಷದ ಇವರು ಕುಟುಂಬದ ಸಂಕಷ್ಟಗಳ ಕಾರಣಕ್ಕಾಗಿ ಇನ್ನೂ ಮದುವೆಯಾಗಿಲ್ಲ.ಮನೆಯಲ್ಲಿ ಕೂಲಿ ಕೆಲಸ ಮಾಡುವ ವೃದ್ದ

ಉಡುಪಿ “ಕಾಶ್ಮೀರ್ ಡೈರಿ” ಕೃತಿಯ ಲೋಕಾರ್ಪಣೆ ಕಾರ್ಯಕ್ರಮ

ಸುಹಾಸಂ ಉಡುಪಿ, ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕ ಮತ್ತು ಧಾತ್ರಿ ಪ್ರಕಾಶನ ಇವರ ಜಂಟಿ ಆಶ್ರಯದಲ್ಲಿ, ಸೆಪ್ಟೆಂಬರ್ 03, 2022 ರ ಶನಿವಾರದಂದು ಉಡುಪಿಯ ಕಿದಿಯೂರು ಹೋಟೆಲ್‍ನ ಅನಂತ ಶಯನ ಹಾಲ್‍ನಲ್ಲಿ, ಲೇಖಕ ಎಸ್. ಉಮೇಶ್ ರವರ “ಕಾಶ್ಮೀರ್ ಡೈರಿ” ಕೃತಿಯ ಲೋಕಾರ್ಪಣೆ ಕಾರ್ಯಕ್ರಮ ಜರುಗಿತ್ತು. ಈ ಸಮಾರಂಭದಲ್ಲಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇದರ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ರವರು ಕೃತಿಯನ್ನು

ಉಡುಪಿ ಆದರ್ಶ ಆಸ್ಪತ್ರೆ ಸೂಪರ್ ಸ್ಪೆಷಾಲಿಟಿ ಸೆಂಟರ್ : ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆ

ಉಡುಪಿ ಆದರ್ಶ ಆಸ್ಪತ್ರೆ ಸೂಪರ್ ಸ್ಪೆಷಾಲಿಟಿ ಸೆಂಟರ್ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಡಾ| ಸರ್ವೆಪಲ್ಲಿ ರಾಧಾಕೃಷ್ಣನ್‍ರವರ ಜನ್ಮಜಯಂತಿ ಹಾಗೂ ಉಡುಪಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಶಿಕ್ಷಕರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಹಾಗೂ ಶಿಕ್ಷಕರು ಮತ್ತು ಅವರ ಕುಟುಂಬದವರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭ

ಆಯುರ್ವೇದ ಚಿಕಿತ್ಸೆ ಸೇವೆಯಲ್ಲಿ ಮುಂಚೂಣಿಯಲ್ಲಿದೆ ಪದವಿನಂಗಡಿಯ”ಪುನರ್ವಸು” ಆಯುರ್ವೇದ ಕ್ಲಿನಿಕ್

ಮಂಗಳೂರಿನ ಪದವಿನಂಗಡಿಯಲ್ಲಿರುವ ಕೊಟ್ಟಕ್ಕಲ್ ಆರ್ಯ ವೈದ್ಯ ಶಾಲಾ ಔಷಧ ಮಳಿಗೆ ಹಾಗೂ ಪುನರ್ವಸು ಆಯುರ್ವೇದ ಕ್ಲೀನಿಕ್ ರೋಗಿಗಳ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು, ಬೆಳಗ್ಗೆ 10ರಿಂದ ಸಾಯಂಕಾಲ 7ರ ವರೆಗೆ ಕಾರ್ಯ ನಿರ್ವಹಿಸುತ್ತದೆ. ವೈದ್ಯಕೀಯ ಸಲಹೆ ಹಾಗೂ ಸಮಾಲೋಚನೆಗೆ ವೈದ್ಯೆ ಡಾ ಸೌಮ್ಯಶ್ರೀ ಕೆ. ಎಂ ಇವರು ಲಭ್ಯರಿರುತ್ತಾರೆ. ಅಲರ್ಜಿ, ಥೈರಾಯಿಡ್, ಮಧುಮೇಹ, ಕೊಲೆಸ್ಟ್ರಾಲ್, ಬೊಜ್ಜು, ಬಂಜೆತನ, ಸ್ತ್ರೀ ರೋಗಗಳು, ಡಿಸ್ಕ್‍ನ ಸಮಸ್ಯೆ, ವಾತ ರೋಗಗಳು,

ಇಲಿಜ್ವರ : ಉಡುಪಿ ಜಿಲ್ಲೆಯಲ್ಲಿ 112 ಮಂದಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 305 ಮಂದಿ

ಹವಾಮಾನ ವೈಪರೀತ್ಯದಿಂದಾಗಿ ಕರಾವಳಿಯಲ್ಲಿ ಸಾಂಕ್ರಾಮಿಕ ರೋಗಗಳ ಸಂಖ್ಯೆಯಲ್ಲಿ ಮತ್ತೆ ಹೆಚ್ಚಳವಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಶೀತ, ಜ್ವರ, ಗಂಟಲು ನೋವು, ವಾಂತಿ, ಅಲರ್ಜಿಯಿಂದ ವೈದ್ಯರನ್ನು ಸಂಪರ್ಕಿಸುವವರ ಸಂಖ್ಯೆ ಏರಿಕೆಯಾಗುತ್ತಿದೆ. ಇದರ ನಡುವೆ ಸದ್ದಿಲ್ಲದೇ ಇಲಿ ಜ್ವರವೂ ತನ್ನ ಕಬಂಧ ಬಾಹುವನ್ನು ಚಾಚುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ ಮಳೆಗಾಲದಲ್ಲಿ 112 ಮಂದಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 305 ಮಂದಿ ಇಲಿಜ್ವರ ಬಾಧಿತರಾಗಿದ್ದಾರೆ.