CITU ಸದಸ್ಯರಾದ ಉಮೇಶ್ ಪೂಜಾರಿ ನಿಧನ

ನಿಟ್ಟೆ ಲೆಮಿನಾ ಫೌಂಡ್ರಿ ಸಂಸ್ಥೆಯ ಕಾರ್ಮಿಕರೂ,CITU ಸದಸ್ಯರಾದ ಉಮೇಶ್ ಪೂಜಾರಿಯವರು ತಾ.17-07-2023ರಂದು ರಾತ್ರಿ ಪಾಳಯದಲ್ಲಿ ಕಂಪೆನಿಯಲ್ಲಿ ದುಡಿಯುತ್ತಿದ್ದಾಗ,ಅವಘಡ ಸಂಭವಿಸಿದ್ದು,ಕೂಡಲೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಕೊಡಿಸಲಾಯಿತು.

ಬಳಿಕ ಮನೆಗೆ ತೆರಳಿದ ಉಮೇಶ್ ರವರು ಮಂಗಳವಾರ ದಿನವಿಡೀ ಮನೆಯಲ್ಲಿ ವಿಶ್ರಾಂತಿ ಪಡೆದು ಬುಧವಾರ ಮತ್ತೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಮನೆಗೆ ವಾಪಸಾಗುತ್ತಾರೆ.ಕಾಲಿಗೆ ಸಂಪೂರ್ಣವಾಗಿ ಬ್ಯಾಂಡೇಜ್ ಹಾಕಿದ್ದರಿಂದ ಟಾಯ್ಲೆಟ್ ಹೋಗಲು ಕಷ್ಟ ಅಂತ ತಿಳಿದು ಹತ್ತಿರದ ತೋಟಕ್ಕೆ ಹೋಗುತ್ತಾರೆ.ಅಲ್ಲಿ ಕೇವಲ 10 ನಿಮಿಷಗಳ ಅಂತರದಲ್ಲಿ ಕುಸಿದು ಬಿದ್ದು ಪ್ರಾಣ ಕಳೆದುಕೊಳ್ಳುತ್ತಾರೆ.

ಹೀಗೆ ಅಕಾಲಿಕ ಮರಣವನ್ನಪ್ಪಿದ ಉಮೇಶ್ ಪೂಜಾರಿಯವರು ಕಂಪೆನಿಯಲ್ಲಿ ಅತ್ಯಂತ ನಿಷ್ಟಾವಂತ ಕಾರ್ಮಿಕನಾಗಿದ್ದು, ಎಲ್ಲರ ಪ್ರೀತಿಪಾತ್ರರಾಗಿದ್ದರು. ಇತ್ತೀಚಿಗಷ್ಟೇ ಮದುವೆಯಾಗಿದ್ದ ಉಮೇಶ್ ರವರು ಮನೆಯಲ್ಲೂ ಆಧಾರಸ್ತಂಭವಾಗಿದ್ದರು. ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದ ಉಮೇಶ್ ರವರು ಎಲ್ಲರೊಂದಿಗೆ ಬೆರೆತು ಬಾಳುವ ಗುಣವನ್ನು ಸಂಪಾದಿಸಿದ್ದರು.ಅವರ ಅಕಾಲಿಕ ಮರಣವು ಕುಟುಂಬಕ್ಕೆ, ಕಾರ್ಮಿಕರಿಗೆ, ಸಂಸ್ಥೆಗೆ ತುಂಬಲಾರದ ನಷ್ಟವಾಗಿದೆ ಎಂದು ಇಂದು ನಿಟ್ಟೆ ಲೆಮಿನಾ ಸಂಸ್ಥೆಯ ಹೊರಾಂಗಣದಲ್ಲಿ ಜರುಗಿದ ಶ್ರದ್ಧಾಂಜಲಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಸಭೆಯಲ್ಲಿ ಸಂಸ್ಥೆಯ ಮುಖ್ಯಸ್ಥರು,ಅಧಿಕಾರಿಗಳು, ಸಿಬ್ಬಂದಿಗಳು, ಕಾರ್ಮಿಕರು, ಕಾರ್ಮಿಕ ಸಂಘದ ಮುಖಂಡರು ಉಪಸ್ಥಿತರಿದ್ದರು .