ಸೆ.24ರಂದು ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬಯಲು ರಂಗಮಂದಿರದಲ್ಲಿ ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್-4
ಉಳ್ಳಾಲ: ಜಿಲ್ಲೆಯ ಪ್ರತಿಷ್ಠಿತ ಸುದ್ದಿವಾಹಿನಿ ವಿ4 ನ್ಯೂಸ್ ಹಾಗೂ ಇರಾ ಯುವಕ ಮಂಡಲದ ಸುವರ್ಣ ಮಹೋತ್ಸವ ಸಮಿತಿ ಸಹಯೋಗದಲ್ಲಿ ಸನ್ ಪ್ರೀಮಿಯಮ್ ರಿಫೈಂಡ್ ಸನ್ ಫ್ಲವರ್ ಆಯಿಲ್ ಪ್ರೆಸೆಂಟ್ಸ್ ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್ -4ರ ಪ್ರದರ್ಶನವು ಸೆ.24ರಂದು ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬಯಲು ರಂಗಮಂದಿರದಲ್ಲಿ ಅದ್ಧೂರಿಯಾಗಿ ನಡೆಯಲಿದೆ.
ಒಟ್ಟು 12 ತಂಡಗಳು ಕಾಮಿಡಿ ಪ್ರದರ್ಶನ ನೀಡಲಿದೆ. ಎಸ್ಸೆನ್ ಕುಡ್ಲ ಕುಸಾಲ್, ಕ್ಲಿಂಗ್ ಕೃಷ್ಣ ಕೆಪೆ ಜೈಮಾತಾ, ನ್ಯೂಟ್ರಿಮಿಕ್ಸ್ ತೆಲಿಕೆದ ತೆನಾಲಿ, ಕಾರ್ ಡೆಕೋರ್ ಹರಿಣಿ ಕಲಾವಿದೆರ್, ವೆಸ್ಟ್ ಕೋಸ್ಟ್ ಬಂಗಾರ್ ಬಂಟ್ವಾಳ್, ವಾಗ್ಮಿ ಕಲಾಶ್ರೀ ಕುಡ್ಲ, ಹೆವೆನ್ ರೋಸ್ ವೈಷ್ಣವಿ ಕಲಾವಿದೆರ್, ವಿನ್‍ಸಮ್ ರಾಜಶ್ರೀ ಕುಡ್ಲ, ಎಸ್ ಎಲ್ ಶೇಟ್ ಹಂಪನಕಟ್ಟೆ ಗೋಲ್ಡನ್ ಪೋಪಿ, ಕ್ಯಾಲ್ಗರಿ ತಾಂಬೂಲ ಕಲಾವಿದೆರ್, ಹೈಲೈಟ್ಸ್ ಲೈಟಿಂಗ್ ಸ್ಟುಡಿಯೋ ಕುಸಾಲ್ದ ಕಲಾವಿದೆರ್, ಬಿಡಿಜಿ ಪೈ ವಿಧಾತ್ರಿ ಕಲಾವಿದೆರ್ ತಂಡಗಳಿಂದ ಭರ್ಜರಿ ಕಾಮಿಡಿ ಪ್ರದರ್ಶನ ನಡೆಯಲಿದೆ.
ತೀರ್ಪುಗಾರರಾಗಿ ಮೈಮ್‍ರಾಮ್‍ದಾಸ್, ಶಶಿರಾಜ್ ರಾವ್ ಕಾವೂರು, ಚೈತ್ರಾ ಶೆಟ್ಟಿ ಅವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮವು ವಿ.ಜೆ ವಿನೀತ್ ನಿರೂಪಣೆಯಲ್ಲಿ ಮೂಡಿಬರಲಿದೆ.
ವಿ4 ನ್ಯೂಸ್ 24×7ನ ಪ್ರಸ್ತುತಿಯಲ್ಲಿ ಸನ್‍ಪ್ರೀಮಿಯಮ್ ರಿಫೈನ್ಡ್ ಸನ್‍ಫ್ಲವರ್ ಆಯಿಲ್ ಮುಖ್ಯ ಪ್ರಾಯೋಜಕತ್ವದಲ್ಲಿ, ಸಿಪಿಎಲ್ ಸೀಸನ್-4 ಮೂಡಿ ಬರುತ್ತಿದ್ದು, ಪವರ್ಡ್ ಬೈ ಪಾರ್ಟ್‍ನರ್ ಆಗಿ ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಆ್ಯಂಡ್ ಡೆವÀಲಪರ್ಸ್ ಮತ್ತು ಅರುಣಾ ಮಸಾಲ ಸಹಯೋಗ ನೀಡಲಿದ್ದಾರೆ. ಹಾಸ್ಪಿಟಾಲಿಟಿ ಪಾರ್ಟ್‍ನರ್ ಆಗಿ ದಿ ಓಶಿಯನ್ ಫರ್ಲ್ ಹೊಟೇಲ್, ಆಟೋ ಮೊಬೈಲ್ ಪಾರ್ಟ್‍ನರ್ ಆಗಿ ಪೋಕ್ಸ್‍ವ್ಯಾಗನ್, ಸಹಪ್ರಾಯೋಜಕರಾಗಿ ಪ್ರೆಸ್ಟಿಜ್ ಗ್ರೂಫ್ ವಿ4ನ್ಯೂಸ್ ಜೊತೆಗಿದೆ.