ರಾಜ್ಯ ಗುಪ್ತವಾರ್ತೆ ಹೆಡ್ ಕಾನ್ ಸ್ಟೇಬಲ್ ಅಸೌಖ್ಯದಿಂದ ಸಾವು

ಮಂಗಳೂರು : ಕದ್ರಿ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿದ್ದುಕೊಂಡು ಜಿಲ್ಲೆಯ ಗುಪ್ತವಾರ್ತೆ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾಸರಗೋಡು ಅಡೂರು ನಿವಾಸಿ ಚಂದ್ರ ಕೆ. (48) ತೀವ್ರ ಅಸೌಖ್ಯದಿಂದ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾದರು.
1996 ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದ ಇವರಿಗೆ ಸದ್ಯದಲ್ಲೇ ಎಎಸ್ ಐ ಹುದ್ದೆಗೆ ಭಡ್ತಿಯಾಗುವವರಿದ್ದರು. ಸಿಸಿಬಿ, ಪಾಂಡೇಶ್ವರ, ಸಿಸಿಅರ್ ಬಿ, ಡಿಸಿಐಬಿ, ಸೆನ್, ಕದ್ರಿ ಠಾಣೆ ಹಾಗೂ ಸದ್ಯ ರಾಜ್ಯ ಗುಪ್ತವಾರ್ತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಕಳೆದೆರಡು ದಿನಗಳಿಂದ ತೀವ್ರ ಅಸೌಖ್ಯಕ್ಕೀಡಾಗಿದ್ದ ಚಂದ್ರ ಕೆ. ಅವರು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರ

