ಅ.4: ದಸರಾ ಬಹುಭಾಷಾ ಕವಿಗೋಷ್ಠಿ

ಮಂಗಳೂರು : ತುಳು ಪರಿಷತ್, ಮಯೂರಿ ಫೌಂಡೇಶನ್, ಕರ್ನಾಟಕ ಥಿಯೋಲಾಜಿಕಲ್ ಕಾಲೇಜು, ಕರಾವಳಿ ಲೇಖಕಿಯರ-ವಾಚಕಿಯರ ಸಂಘ ಹಾಗೂ ಸಾಮರಸ್ಯ ಮಂಗಳೂರು ಜಂಟಿ ಆಶ್ರಯದಲ್ಲಿ ಅ.4 ರಂದು ಮಧ್ಯಾಹ್ನ 2.30ಕ್ಕೆ ಮಂಗಳೂರು ಬಲ್ಮಠದ ಸಹೋದಯ ಸಭಾಂಗಣದಲ್ಲಿ ದಸರಾ ಬಹುಭಾಷಾ ಕವಿಗೋಷ್ಠಿ ನಡೆಯಲಿದೆ.
ದಸರಾ ಬಹುಭಾಷಾ ಕವಿಗೋಷ್ಠಿಯನ್ನು ಮುಂಬಯಿಯ ಹಿರಿಯ ಕವಿ ಹಾಗೂ ಮಯೂರಿ ಫೌಂಡೇಶನ್ ಅಧ್ಯಕ್ಷ ಜಯ ಕೆ.ಶೆಟ್ಟಿ ಅವರು ಉದ್ಘಾಟಿಸುವರು, ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಅಧ್ಯಕ್ಷೆ ಡಾ.ಜ್ಯೋತಿ ಚೇಳ್ಯಾರು ಅವರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸುವರು. ಕವಿತೆಗಳಲ್ಲಿ ಪ್ರಕಟಗೊಂಡ ಬಹುಭಾಷಿಕತೆ ಬಗ್ಗೆ ಮುಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಡಾ.ವಾಸುದೇವ ಬೆಳ್ಳೆ ಅವರು ಮಾತನಾಡುವರು.
ದಸರಾ ಬಹುಭಾಷಾ ಕವಿಗೋಷ್ಠಿಯಲ್ಲಿ ತುಳು , ಕೊರಗ ಭಾಷೆ , ಕನ್ನಡ , ಕೊಂಕಣಿ, ಕುಂದಾಪುರ ಕನ್ನಡ , ಹವ್ಯಕ ಕನ್ನಡ, ಬ್ಯಾರಿ , ಶಿವಳ್ಳಿ ತುಳು, ಅರೆ ಭಾಷೆ , ಮಲಯಾಳಂ ಭಾಷೆಯ ಕವಿತೆಗಳನ್ನು ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ ಕವಿಗಳು ವಾಚಿಸಲಿರುವರು. ರತ್ನಾವತಿ ಬೈಕಾಡಿ ಬಳಗದವರಿಂದ ಭಾವಗಾನ ನಡೆಯಲಿದೆ ಎಂದು ತುಳು ಪರಿಷತ್ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕವಿಗಳಾದ ಚಂದ್ರಹಾಸ ಕಣಂತೂರು, ವಿಜಯ ಶೆಟ್ಟಿ ಸಾಲೆತ್ತೂರು, ಶಾರದಾ ಶೆಟ್ಟಿ , ಬಾಬು ಕೊರಗ ಪಾಂಗಾಳ, ರಾಧಕೃಷ್ಣ ಉಳಿಯತ್ತಡ್ಕ, ರಾಜವರ್ಮ ವಿಟ್ಲ , ವಿನೋದ್ ಪಿಂಟೋ ತಾಕೋಡೆ, ತಾರಾ ಲವಿನಾ ಗಂಜೀಮಠ, ವೆಂಕಟೇಶ್ ನಾಯಕ್ , ಪೂರ್ಣಿಮಾ ಕಮಲಶಿಲೆ, ಶಾಂತಾ ಕುಂಠಿನಿ, ಗೋಪಾಲಕೃಷ್ಣ ಶಾಸ್ತ್ರಿ, ಮಹಮ್ಮದ್ ಬಡ್ಡೂರು , ಮಿಸ್ರಿಯಾ ಐ.ಪಜೀರ್ , ಚಂದ್ರಹಾಸನ್ ನಂಬಿಯಾರ್ ಎಂ.ಕೆ.ಕಾಸರಗೋಡು , ಸೌಮ್ಯ ಗೋಪಾಲ್ , ಯೋಗಿಶ್ ಹೊಸೊಳಿಕೆ ಅವರು ಕವಿತೆಗಳನ್ನು ವಾಚಿಸುವರು.