ದೇರಳಕಟ್ಟೆ: ಕಣಚೂರು ಸಮೂಹ ಸಂಸ್ಥೆ ವತಿಯಿಂದ ಗಣರಾಜ್ಯೋತ್ಸವ ಆಚರಣೆ
ಕಣಚೂರು ಸಮೂಹ ಸಂಸ್ಥೆಯ ವತಿಯಿಂದ 75ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.
ಕಣಚೂರು ಸಮೂಹ ಸಂಸ್ಥೆಯ ಸ್ಥಾಪಕಾಧ್ಯಕ್ಷ ಡಾ. ಹಾಜಿ ಯು.ಕೆ.ಮೋನುರವರು ಧ್ವಜಾರೋಹಣವನ್ನು ನೆರವೇರಿಸಿದರು. ಬಳಿಕ ಗಣರಾಜ್ಯೋತ್ಸವ ದಿನದ ಸಂದೇಶ ನೀಡಿದರು.
ಕಣಚೂರು ಪಬ್ಲಿಕ್ ಸ್ಕೂಲ್‌ನ ೮ನೇ ತರಗತಿಯ ವಿದ್ಯಾರ್ಥಿನಿಯಾದ ಫಾತಿಮ ಶರ್ಮಿನ್ ಸಂವಿಧಾನದ ಕರಡು ಸಮಿತಿಯ ರಚನೆ ಮತ್ತು ಪ್ರಜಾಪ್ರಭುತ್ವದ ಅಸ್ಥಿತ್ವದ ಕುರಿತು ಮಾತನಾಡಿದರು.
ಕಣಚೂರು ಇನ್ಸ್ಟಿಟ್ಯೂಟ್ ಆಫ್ ಅಲೈಯ್ಡ್ ಹೆಲ್ತ್ ಸೈನ್ಸ್ ಇದರ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಯನ್ನು ಹಾಡಿದರು.
ವೇದಿಕೆಯಲ್ಲಿ ಕಣಚೂರು ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಸಂಸ್ಥೆಯ ಸಂಚಾಲಕರು, ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಇದರ ಡೀನ್ ಡಾ. ರತ್ನಾಕರ ಯು.ಪಿ, ಕಣಚೂರು ಅಲೈಯ್ಡ್ ಹೆಲ್ತ್ ಸೈನ್ಸ್ ವಿಭಾಗದ ಪ್ರಾಂಶುಪಾಲೆ ಡಾ. ಶಮೀಮ, ಫಾರೆನ್ಸಿಕ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಡಾ. ಶಾನುವಾಝ್, ಕಣಚೂರು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ರೋಹನ್ ಮೋನಿಸ್ ಹಾಗೂ ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆಂಡ್ ಸೈನ್ಸ್ ಇದರ ಪ್ರಾಂಶುಪಾಲ್ ಪೊ?ರಫೆಸರ್ ಇಕ್ಬಾಲ್ ಅಹಮದ್ ಯು.ಟಿ, ಕಣಚೂರು ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶಾಹಿದಾ ಕಲ್ಲಾಜೆ, ಕಣಚೂರ್ ಪಬ್ಲಿಕ್ ಸ್ಕೂಲಿನ ಪ್ರಾಂಶುಪಾಲೆ ಕ್ಯಾರೆನ್ ಟ್ರೆಸ್ಸಿಲ್ಲಾ ಡಿಸೋಜ, ಕಣಚೂರು ಪ್ರೀ ಸ್ಕೂಲ್‌ನ ಪ್ರಾಂಶುಪಾಲೆ ಲಿನೆಟ್ ಡಿಸೋಜ ಹಾಗೂ ಕಣಚೂರು ಅಲೈಡ್ ಹೆಲ್ತ್ ಸೈನ್ಸ್ ನ ಪ್ರಾಂಶುಪಾಲೆ ಡಾ. ಶಮೀಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಹಿದಾ ಕಲ್ಲಾಜೆ ಅವರು ಅತಿಥಿಗಳನ್ನು ಸ್ವಾಗತಿಸಿ, ಕ್ಯಾರೆನ್ ಟ್ರೆಸ್ಸಿಲ್ಲಾ ಡಿಸೋಜ ವಂದಿಸಿದರು ಹಾಗೂ ಕಣಚೂರು ಪಬ್ಲಿಕ್ ಸ್ಕೂಲ್‌ನ ಪ್ರೌಢಶಾಲಾ ವಿಭಾಗದ ಶಿಕ್ಷಕಿ ಸೌಮ್ಯ ಸುವರ್ಣ ಕಾರ್ಯಕ್ರಮವನ್ನು ನಿರೂಪಿಸಿದರು.