ಸುರತ್ಕಲ್ ಠಾಣೆಗೆ ಹಾಜರಾಗಿ ಆಯಿಷಾ ಅಲ್ಲ ಅಕ್ಷತಾ ಎಂದು ಹೇಳಿಕೆ
ವಾರದ ಹಿಂದೆ ಓಡಿ ಹೋಗಿದ್ದ, ಆಮೇಲೆ ಮದುವೆಯ ಸುದ್ದಿಯನ್ನು ಹಂಚಿಕೊಂಡ ಆಯಿಷಾ ಮತ್ತು ಅಕ್ಷತಾ ದಂಪತಿ ಇಂದು ಸುರತ್ಕಲ್ ಪೋಲೀಸು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದರು. ಆಯಿಷಾಳ ಹೆತ್ತವರು ಆಕೆ ಡಿಸೆಂಬರ್ 1ರಿಂದ ನಾಪತ್ತೆಯಾಗಿದ್ದುದರ ಬಗೆಗೆ ಸುರತ್ಕಲ್ ಪೋಲೀಸು ಠಾಣೆಯಲ್ಲಿ ದೂರು ನೀಡಿದ್ದರು.
ಆದ್ದರಿಂದ ಅವರು ಸದರಿ ಠಾಣೆಗೆ ಭೇಟಿ ನೀಡುವುದು ಅನಿವಾರ್ಯವಾಗಿತ್ತು. ಮೂರು ವರುಷದಿಂದ ಪ್ರೀತಿಸುತ್ತಿದ್ದೆವು. ಅನ್ಯ ಧರ್ಮೀಯರಾದ್ದರಿಂದ ಮದುವೆಗೆ ಒಪ್ಪಿಗೆ ಸಿಗುವ ಸಂಭವ ಇರಲಿಲ್ಲವಾದ್ದರಿಂದ ಓಡಿ ಹೋಗಿ ಮದುವೆಯಾದೆವು. ನಾನು ಈಗ ಅಕ್ಷತಾ ಆಗಿದ್ದೇನೆ ಎಂದೂ ತರುಣಿ ಹೇಳಿಕೆ ನೀಡಿದ್ದಾಳೆ.