ಡೀಮ್ಡ್ ಫಾರೆಸ್ಟ್ ಸಮಸ್ಯೆ ಇತ್ಯರ್ಥವಾಗದೆ ಹಕ್ಕು ಪತ್ರ ನೀಡುವುದು ಎಷ್ಟು ಸರಿ : ಕಾರ್ಕಳ ಮತ್ತು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಮುಖಂಡರ ಪ್ರಶ್ನೆ

ಡೀಮ್ಸ್ ಫಾರೇಸ್ಟ್ ಸಮಸ್ಯೆಯನ್ನು ಪರಿಹರಿಸಿ ಹಕ್ಕು ಪತ್ರವನ್ನು ವಿತರಿಸಿದ್ದೇವೆ ಎಂದು ಸಚಿವ ಸುನೀಲ್ ಕುಮಾರ್ ಹೇಳಿದ್ದರು. ಆದರೆ ಇತ್ತೀಚಿನ ವರದಿ ಪ್ರಕಾರ ಸುಪ್ರೀಂ ಕೋರ್ಟಿನ ಹಸಿರು ನ್ಯಾಯ ಪೀಠದ ತೀರ್ಪೆ ಅಂತಿಮ. ಸರಕಾರ ಸಲ್ಲಿಸಿರುವ ಅಫಿದಾವಿತ್ ತಿರಸ್ಕರಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಸುಪ್ರೀಂ ಕೋರ್ಟ್‍ನಲ್ಲಿ ಸಮಸ್ಯೆ ಇತ್ಯರ್ಥವಾಗದೆ ಇರುವಾಗ ಹಕ್ಕು ಪತ್ರ ನೀಡುವುದು ಎಷ್ಟು ಸರಿ? ಎಂದು ಕಾರ್ಕಳದಲ್ಲಿ ಕಾಂಗ್ರೆಸ್ ಮುಖಂಡರು ಪ್ರಶ್ನಿಸಿದ್ದಾರೆ.

ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ ಅವರು ಮಾತನಾಡಿ, ಈವರೆಗೆ ಡೀಮ್ಸ್ ಎಂದು ಗುರುತಿಸಲ್ಪಟ್ಟ ಎಲ್ಲಾ ಸರಕಾರಿ ಜಮೀನು 1 ಎಕರೆ ಪ್ರದೇಶದಲ್ಲಿ 20 ಮರಗಳಿಗಿಂತ ಜಾಸ್ತಿ ಇದ್ದರೆ ಅದು ಡೀಮ್ಸ್ ಎಂದು 2008ರ ಯಡಿಯೂರಪ್ಪ ಸರಕಾರ ತರಾತುರಿಯಲ್ಲಿ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಕಚೇರಿಗಳಲ್ಲಿ ಕುಳಿತು ಸರಕಾರಕ್ಕೆ ವರದಿ ಕೊಟ್ಟ ಪರಿಣಾಮ ಈ ಸಮಸ್ಯೆ ಎದುರಾಗಿದ್ದು, ಆದರೆ ಅದನ್ನು ಪರಿಹರಿಸಿದ್ದೇವೆ ಇನ್ನು ಆ ಸಮಸ್ಯೆ ಇಲ್ಲ ಎನ್ನುವ ಸುಳ್ಳು ಹೇಳಿಕೆಯನ್ನು ಕೊಟ್ಟು ಹಕ್ಕು ಪತ್ರಕ್ಕಾಗಿ ಕಾಯುತ್ತಿರುವ ಸಾವಿರಾರು ಕುಟುಂಬಗಳನ್ನು ವಂಚಿಸುವ ಬದಲು ಎಲ್ಲಾರಿಗೂ ಹಕ್ಕುಪತ್ರ ಕೊಡಲಿ. ಬಿ.ಜೆ.ಪಿ ಸರಕಾರದಲ್ಲಿ 25 ಜನ ಕರ್ನಾಟಕದ ಸಂಸದರಿದ್ದಾರೆ ಕೇಂದ್ರ ಮತ್ತು ರಾಜ್ಯದಲ್ಲಿ ಪೂರ್ಣ ಬಹುಮತವಿರುವ ಸರಕಾರ ಇದೆ. ಇಚ್ಚಾಶಕ್ತಿಯಿದ್ದರೆ 6 ತಿಂಗಳಲ್ಲಿ ಈ ಸಮಸ್ಯೆ ಪರಿಹರಿಸಬಹುದು ಎಂದರು.

ಕಾಂಗ್ರೆಸ್ ಜನಪರವಾಗಿ ನಿಲ್ಲುವ ಪಕ್ಷ ಭೂ ಸುಧಾರಣೆ, ಆಕ್ರಮ-ಸಕ್ರಮ, ಅರಣ್ಯ ಹಕ್ಕು ಕಾಯಿದೆ. ಆಹಾರ ಹಕ್ಕು ಕಾಯಿದೆ, 94ಸಿ, 94ಸಿಸಿ ಅಲ್ಲದೆ ಜನರ ಬದುಕಿಗೆ ಏನು ಬೇಕೋ ಅದೆಲ್ಲವನ್ನು ಕಾಂಗ್ರೆಸ್ ಪಕ್ಷ ಮಾಡಿದೆ. ಜನತೆಗೆ ಇಂದು ಕಾಂಗ್ರೆಸ್ ಬೇಕಾಗಿದೆ. ಇದೇ ರೀತಿ ನಿಮ್ಮ ಭ್ರಷ್ಟಚಾರದ ಆಡಳಿತ ಸಹಿಸಿಕೊಳ್ಳುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಜನತೆ ತಕ್ಕ ಉತ್ತರ ಕೊಡುತ್ತಾರೆ. ಈ ಬಗ್ಗೆ ಸ್ಪಷ್ಟನೆ ಕೊಡಬೇಕೆಂದು ಕಾರ್ಕಳ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಆಗ್ರಹಿಸುತ್ತದೆ

ಸುದ್ದಿಗೋಷ್ಠಿಯಲಿ ಜಿಲ್ಲಾ ಕೆಪಿಸಿಸಿ ವಕ್ತಾರ ಬಿಪಿನ್ ಚಂದ್ರ ಪಾಲ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.