ಹೆಜಮಾಡಿ : ಮತ ಚಲಾಯಿಸಿದ ಕೆಲವೇ ಹೊತ್ತಲ್ಲಿ ವೃದ್ಧೆ ವಿಧಿವಶ
ತನ್ನ ಹಕ್ಕನ್ನು ಚಲಾಯಿಸಿ ಮನೆಗೆ ತೆರಳಿದ 93ರ ಹರೆಯದ ವಯೋವೃದ್ದೆಯೊರ್ವರು ಹೃದಯಾಘಾತಕ್ಕೆ ಬಲಿಯಾದ ಘಟನೆ ಹೆಜಮಾಡಿಯಲ್ಲಿ ನಡೆದಿದೆ. ಮೃತರು ಹೆಜಮಾಡಿ ನಿವಾಸಿ ಮರಿಯಮ್ಮ 94 ವರ್ಷ ಮುಂಜಾನೆ ಹೆಜಮಾಡಿಯ ಪೇಟೆ ಸಮೀಪದ ಸರ್ಕಾರಿ ಶಾಲಾ ಬೂತಲ್ಲಿ ತನ್ನವರೊಂದಿಗೆ ವೀಲ್ಹ್ ಚಯರ್ ಸಹಕಾರದಿಂದ ಮತಗಟ್ಟೆಗೆ ಹೋಗಿ ಮತ ಚಲಾಯಿಸಿದ್ದರು. ವಿಶೇಷವೆಂದರೆ ವಯೋವೃದ್ದೆಯನ್ನು ಕಂಡ ಪೊಲೀಸ್ ಅಧಿಕಾರಿಯೋರ್ವರು ಹಿರಿಯರೆಂಬ ಕರುಣೆಯಿಂದ ಅವರನ್ನು ಮಾತನಾಡಿಸಿ ನೂರಾರು ದೇವರು ನಿಮಗೆ ಆಯುಷ್ಯ ಕರುಣಿಸಲು ಎಂದು ಹಾರೈಸಿದ್ದರು. ಇದೀಗ ಅವರ ಮರಣ ವಾರ್ತೆ ಕೇಳಿದ ಅಧಿಕಾರಿ ಬಹಳ ನೋವು ವ್ಯಕ್ತ ಪಡಿಸಿದ್ದಾರೆ.