ಉಳ್ಳಾಲ: ಇರಾ ಯುವಕ ಮಂಡಲ ಮತ್ತು ಸುವರ್ಣ ಮಹೋತ್ಸವ ಸಮಿತಿಯಿಂದ ಸ್ವಚ್ಛತೆ
ಸುವರ್ಣ ಮಹೋತ್ಸ ಸಮಿತಿ ಯುವಕ ಮಂಡಲ ಇರಾ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಂಡರು. ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದಿಂದ ಇರಾ ಸಂಪಿಲದ ಬಿಲ್ಲವ ಭವನದ ವರೆಗೆ ಪ್ಲಾಸ್ಟಿಕ್, ಕಸಗಳನ್ನು ಹೆಕ್ಕಿ ಸ್ವಚ್ಛಗೊಳಿಸಿದರು.
ಈ ಸಂದರ್ಭದಲ್ಲಿ ಇರಾ ಗ್ರಾಮ ಪಂಚಾಯತ್ ಸದಸ್ಯರಾದ ಎಮ್.ಡಿ. ಉಮ್ಮರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಕಾಂತ್, ಪಂಚಾಯತ್ ಕಾರ್ಯದರ್ಶಿ ದಿನೇಶ್, ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಜಯರಾಮ್ ಪೂಜಾರಿ ಸೂತ್ರಬೈಲ್, ಉಪಾಧ್ಯಕ್ಷರಾದ ಯತಿರಾಜ್ ಶೆಟ್ಟಿ ಸಂಪಿಲ,
ಯುವಕ ಮಂಡಲ ಅಧ್ಯಕ್ಷರಾದ ಗಣೇಶ್ ಕೊಟ್ಟಾರಿ ಸಂಪಿಲ, ಇರಾ ಪಂಚಾಯತ್ ಸದಸ್ಯರಾದ ರಮೇಶ್ ಪೂಜಾರಿ ಸಂಪಿಲ, ಪ್ರತಾಪ್ ಚಂದ್ರ ಮೊದಲಾದವರು ಪಾಲ್ಗೊಂಡಿದ್ದರು.