ಪುತ್ತೂರು: ಮದ್ಯದಂಗಡಿ ತೆರೆಯುವುದು ಬಿಟ್ಟು ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡಿ, ನಶ್ರೀಯಾ ಬೆಳ್ಳಾರೆ
ಪುತ್ತೂರು: ರಾಜ್ಯ ಸರಕಾರ 1 ಸಾವಿರ ಮದ್ಯಂಗಡಿ ತೆರೆಯುವ ಮೂಲಕ ಗಾಂಧಿ ತತ್ವಕ್ಕೆ ವಿರೋಧವಾಗಿ ನಡೆಯುತ್ತಿದೆ ಮತ್ತು ಮದ್ಯದಂಗಡಿ ಹೆಚ್ಚಿಸಿ ಗಾಂಧಿ ಜಯಂತಿ ಆಚರಿಸುತ್ತಿದೆ ಎಂದು ಆರೋಪಿಸಿ ಎಸ್‍ಡಿಪಿಐ ಪುತ್ತೂರು ಕ್ಷೇತ್ರ ಸಮಿತಿಯಿಂದ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಪ್ರತಿಭಟನೆ ನಡೆಯಿತು.
ವುಮೆನ್ಸ್ ಇಂಡಿಯಾ ಮೂವುಮೆಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಶ್ರೀಯಾ ಬೆಳ್ಳಾರೆ ಅವರು ಮಾತನಾಡಿ, ರಾಜ್ಯ ಸರಕಾರ ಗ್ಯಾರೆಂಟಿ ಸರಿದೂಗಿಸಲು ಮದ್ಯಪಾನ ಹೆಚ್ಚಿಸುತ್ತಿದೆ. ಇವರಿಗೆ ಗಾಂಧಿ ಜಯಂತಿ ಆಚರಣೆ ಮಾಡಲು ನೈತಿಕ ಹಕ್ಕಿಲ್ಲ. ದೇಶದಲ್ಲೇ ಅತಿ ಹೆಚ್ಚು ಮದ್ಯ ಮಾರಾಟ ಆಗುತ್ತಿರುವ ಕರ್ನಾಟಕದಲ್ಲಿ ಇದೀಗ ಸಿದ್ದರಾಮಯ್ಯ ಸರಕಾರ ಮತ್ತೆ ಗ್ರಾಮ ಮಟ್ಟದಲ್ಲಿ ಮದ್ಯದಂಗಡಿ ತೆರೆಯಲು ಯೋಜನೆ ಹಾಕಿದೆ.
ಈ ಸಂದರ್ಭ ಎಸ್‍ಡಿಪಿಐ ಪುತ್ತೂರು ವಿಧಾನಸಭಾ ಸಮಿತಿ ಅಧ್ಯಕ್ಷ ಇಬ್ರಾಹಿಂ ಸಾಗರ್,ಉಪಾಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ, ವುಮೆನ್ಸ್ ಇಂಡಿಯಾ ಮೂಮೆಂಟ್ ಪುತ್ತೂರು ಅಧ್ಯಕ್ಷ ಜಾಯಿದಾ ಸಾಗರ್, ನಗರಸಭಾ ಸದಸ್ಯೆ ಪಾತಿಮಾತ್ ಜೋರಾ ಮೊದಲಾದವರು ಭಾಗವಹಿಸಿದ್ದರು.