ನ್ಯಾಯಾಲಯದಿಂದ ಸ್ಟೇ ತಂದರೂ ಜೆಸಿಬಿಯಲ್ಲಿ ಅಗೆದು ಕೃಷಿಗೆ ಹಾನಿ : ಹಿಂದುಳಿದ ವರ್ಗಗಳ ಆಯೋಗದ ಸಹಾಯವಾಣಿ ಮೂಲಕ ಹೋರಾಟ

ಸುಮಾರು ಮೂರು ಎಕ್ರೆ ಜಾಗ ಹೊಂದಿರುವ ನನ್ನ ವರ್ಗ ಜಾಗದಲ್ಲಿ ಕಾಮಗಾರಿ ಮಾಡಲು ನ್ಯಾಯಾಲಯದಿಂದ ಸ್ಟೇ ತಂದರೂ ಕೆಲವೊಂದು ವ್ಯಕ್ತಿಗಳು ಈ ಜಾಗದಲ್ಲಿ ಜೆಸಿಬಿಯಿಂದ ಅಗೆದು ತನ್ನ ಕೃಷಿ ಭೂಮಿಯನ್ನು ಹಾಳು ಮಾಡುತ್ತಿದ್ದಾರೆ. ಈ ಕುರಿತು ಮಹಿಳಾ ಆಯೋಗ, ಹಿಂದುಳಿದ ವರ್ಗಗಳ ಆಯೋಗ ಸಹಾಯವಾಣಿಯ ಮೂಲಕ ಹೋರಾಟ ಮುಂದುವರಿಸಲಾಗುವುದು ಎಂದು ಮುಂಡೂರು ಗ್ರಾಮದ ರವೀಂದ್ರ ಎಂ. ಮುಳಾರು ಮನೆ ಎಂಬವರು ತಿಳಿಸಿದ್ದಾರೆ.
ಅವರು ಪುತ್ತೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ನಾನು ಮುಂಡೂರು ಮುಳಾರು ಎಂಬಲ್ಲಿ ಕೃಷಿಯ ಜತೆ ಹೈನುಗಾರಿಕೆ ಮಾಡುತ್ತಿದ್ದು, ತನ್ನ ಮನೆಗೆ ತಾಗಿಕೊಂಡಿರುವ ಉದಯಗಿರಿ ಶ್ರೀ ವಿಷ್ಣುಮೂರ್ತಿ ಕ್ಷೇತ್ರದ ನೇಮ ಉತ್ಸವಾದಿಗಳನ್ನು ನನ್ನ ದೊಡ್ಡಪ್ಪ ಕಾಳಪ್ಪ ಪೂಜಾರಿ ಕಳೆದ 16 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಇದೀಗ ಒತ್ತೆಕೋಲ ಸಮಿತಿಯಲ್ಲಿ ಹಿಂದಾರು ಭಾಸ್ಕರ ಆಚಾರ್ ಎಂಬವರು ಸೇರಿಕೊಂಡು ತನ್ನ ವರ್ಗ ಕೃಷಿ ಭೂಮಿಯನ್ನು ನ್ಯಾಯಾಲಯದಿಂದ ಇಂಜಕ್ಷನ್ ಆದೇಶವಿದ್ದರೂ ವಿಸ್ತರಣೆ ಮಾಡುವ ಮೂಲಕ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
