ಕಡಬ: ನನ್ನ ಮಣ್ಣು ನನ್ನ ದೇಶ ಅಮೃತ ಕಲಶ ಯಾತ್ರೆ ಜಾಥಾಕ್ಕೆ ಚಾಲನೆ

ದೇಶದ ರಕ್ಷಣೆಯೊಂದಿಗೆ ನಮ್ಮಲ್ಲರ ರಕ್ಷಣೆ ಮಾಡುವ ಯೋಧರಿಗೆ ಸ್ಮಾರಕ ನಿರ್ಮಾಣ ಮಾಡುವ ಕಾರ್ಯಕ್ಕೆ ಇಳಿದಿರುವ ಪ್ರಧಾನಿ ನರೇಂದ್ರ ಮೋದಿಯವರು ಯೋಧರಿಗೆ ಅತ್ಯತ ಹೆಚ್ಚು ಗೌರವ ನೀಡುವ ಕಾರ್ಯ ಮಾಡುತ್ತಿದ್ದಾರೆ ಎಂದು ಸುಳ್ಯ ಕ್ಷೇತ್ರ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.

ಅವರು ಕಡಬದಲ್ಲಿ ನೆಹರು ಯುವ ಕೇಂದ್ರ ಮಂಗಳೂರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ ಸ,ಪ.ಪೂ.ಕಾಲೇಜು ಕಡಬ ,ತಾಲೂಕು ಯುವಜನ ಒಕ್ಕೂಟ ಕಡಬ, ತಾ.ಪಂ.ಕಡಬ ,ಪಟ್ಟಣ ಪಂಚಾಯಿತಿ ಕಡಬ ಹಾಗೂ ತಾಲೂಕು ಆಡಳಿತ ಸೌಧ ಇವುಗಳ ಜಂಟಿ ಆಶ್ರಯದಲ್ಲಿ ನಡೆದ ನನ್ನ ಮಣ್ಣು ನನ್ನ ದೇಶ ಅಭಿಯಾನದ ಅಮೃತ ಕಲಶ ಯಾತ್ರೆಯ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಚಳಿ ಮಳೆ ಬಿಸಿಲನ್ನು ಲೆಕ್ಕಿಸದೆ ನಮ್ಮ ದೇಶವವನ್ನು ರಕ್ಷಣೆ ಮಾಡುವ ಯೋಧರ ಸ್ಮಾರಕವನ್ನು ನವದೆಹಲಿಯಲ್ಲಿ ನಿರ್ಮಾಣ ಮಾಡಲು ನಮ್ಮ ಪ್ರಧಾನಿಯವರು ಉದ್ಧೇಶಿಸಿದ್ದಾರೆ. ಈ ಸ್ಮಾರಕ ಅಲ್ಲಿಯ ಮಣ್ಣಿನಲ್ಲಿ ಮಾತ್ರ ಸ್ಮಾರಕವಾಗಬಾರದು, ನಮ್ಮ ಊರಿನ ಯೋಧರ ಕೂಡಾ ದೇಶಕ್ಕಾಗಿ ಬಲಿದಾನ ಗೈದಿದ್ದಾರೆ. ಅವರ ನೆನಪಿಗೊಸ್ಕರ ನಮ್ಮ ಊರಿನ ಮಣ್ಣು ಕೂಡಾ ಅಲ್ಲಿ ತಲುಪಿ ನಾವು ಅಲ್ಲಿ ಹೋಗುವಾಗ ನಮ್ಮ ಮಣ್ಣು ಹಾಗೂ ಯೋಧರನ್ನು ನೆನಪಿಸಿಕೊಳ್ಬೇಕು ಎನ್ನುವ ಉದ್ಧೇಶದಿಂದ ಅದ್ಧೂರಿ ಕಾರ್ಯಕ್ರಮವನ್ನು ದೇಶಾಧ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಕಡಬ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಎನ್ ಕಾರ್ಯಕ್ರಮದ ಬಗ್ಗೆ ವಿವರ ನೀಡಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಕೀರ ಮೂಲ್ಯ ಪ್ರತಿಜ್ಞಾವಿಧಿ ಭೋಧಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಮಂಗಳೂರು ನೆಹರು ಯುವಕೇಂದ್ರ ಆಡಳಿತಾಧಿಕಾರಿ ಜಗದೀಶ್, ತಾಲೂಕು ಪಂಚಾಯಿತಿ ಸಹಾಯಕ ನಿರ್ದೆಶಕ ಚೆನ್ನಪ್ಪ ಗೌಡ ಕಜೆಮೂಲೆ, ಕಡಬ ಉಪತಹಸೀಲ್ದಾರ್ ಗೋಪಾಲ ಕಲ್ಲುಗುಡ್ಡೆ, ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಕಡಬ ಪದವಿಪೂರ್ವ ಕಾಲೇಜಿನ ಎನ್ ಎಸ್ ಎಸ್ ಘಟಕದ ಯೋಜನಾಧಿಕಾರಿ ಸಲಿನ್ ಕೆ.ಪಿ, ಪ್ರಮುಖರಾದ ಸುರೇಶ್ ದೇಂತಾರು, ಪ್ರಕಾಶ್ ಎನ್.ಕೆ, ಗಿರೀಶ್ ಎ.ಪಿ ಮತ್ತಿತರರು ಉಪಸ್ಥಿತರಿದ್ದರು.

ಕಡಬ ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಶಿವಪ್ರಸಾದ್ ರೈ ಮೈಲೇರಿ ಸ್ವಾಗತಿಸಿ, ವಂದಿಸಿದರು. ಪಟ್ಟಣ ಪಂಚಾಯಿತಿ ಸಿಬ್ಬಂದಿ ಹರೀಶ್ ಬೆದ್ರಾಜೆ ಕಾರ್ಯಕ್ರಮ ನಿರೂಪಿಸಿದರು. ಕಡಬ ಮಿನಿ ವಿಧಾನ ಸೌಧದ ಬಳಿಯಿಂದ ಕಡಬ ಪಟ್ಟಣ ಪಂಚಾಯಿತಿ ವರೆಗೆ ಆಕರ್ಷಕ ಮೆರವಣಿಗೆ ನಡೆಯಿತು.

Related Posts

Leave a Reply

Your email address will not be published.