ಬೆಂಗಳೂರು: ಸ್ಪೀಕರ್ ಯು.ಟಿ ಖಾದರ್ ಫರೀದ್ ಅವರಿಗೆ ತೆಕ್ಕಿಲ್ ಎಕ್ಸಲೆನ್ಸ್ ಅವಾರ್ಡ್ ಪ್ರದಾನ
ತೆಕ್ಕಿಲ್ ಗ್ರಾಮೀಣಭಿವೃದ್ಧಿ ಪ್ರತಿಷ್ಠಾನ(ರಿ) ಅರಂತೋಡು ಸುಳ್ಯ ಸಂಸ್ಥೆಯ ವತಿಯಿಂದ ಬೆಂಗಳೂರಿನಲ್ಲಿ ವಿವಿಧ ಕ್ಷೇತ್ರದಲ್ಲಿ ದುಡಿಯುತ್ತಿರುವರಿಗೆ ಸಮಾಜ ಸುಧಾರಕ ಜಾತ್ಯತೀತ ತತ್ವದ ಪ್ರತಿಪಾದಕ ದಿವಂಗತ ತೆಕ್ಕಿಲ್ ಮೊಹಮದ್ ಹಾಜಿ ಸ್ಮಾರಕವಾಗಿ ನೀಡುವ “ತೆಕ್ಕಿಲ್ ಎಕ್ಸಲೆನ್ಸ್ ಅವಾರ್ಡ್ 2021” ನ್ನು ಕರ್ನಾಟಕ ಸರಕಾರದ ವಿಧಾನಸಭಾ ಅಧ್ಯಕ್ಷರಾದ ಯು ಟಿ ಖಾದರ್ ಫರೀದ್ ರವರಿಗೆ ತೆಕ್ಕಿಲ್ ಗ್ರಾಮೀಣಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಟಿ.ಎಂ ಶಾಹಿದ್ ತೆಕ್ಕಿಲ್ ರವರು ನೀಡಿ ಗೌರವಿಸಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ತೆಕ್ಕಿಲ್ ಕುಟುಂಬದ ಹಿರಿಯ ಸದಸ್ಯೆಯಾದ ರಾಷ್ಟ್ರಪತಿ ಪದಕ ವಿಜೇತ ಉಪ ಪೊಲೀಸ್ ಆಯುಕ್ತರಾಗಿದ್ದ ಹಿರಿಯ ಪೊಲೀಸ್ ಅಧಿಕಾರಿ ದಿವಂಗತ ಸಿ ಮೊಹಮ್ಮದ್ ಇಕ್ಬಾಲ್ ರವರ ಪತ್ನಿ ಜೈಬುನ್ನಿಸ ಇಕ್ಬಾಲ್ ಕರ್ನಾಟಕ ಉಚ್ಚ ನ್ಯಾಯಾಲಯದ ಸರಕಾರಿ ವಕೀಲರಾದ ವಹಿದ ಹಾರಿಸ್ ತೆಕ್ಕಿಲ್, ಹಿಂದುಸ್ತಾನ್ ಆರೋನಾಟಿಕಲ್‌ನಲ್ಲಿ ಇಂಜಿನಿಯರ್ ಆದ ಹಂಸ ತೆಕ್ಕಿಲ್, ಉದ್ಯಮಿ ಮೋಹಿದೀನ್ ಕುಂಞಿ ತೆಕ್ಕಿಲ್, ಫಾರ್ಮೆಡ್ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕರಾದ ಆರಿಸ್ ತೆಕ್ಕಿಲ್, ವಿಪ್ರೋ ಸಾಫ್ಟ್ವೇರ್ ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್ ಅಮೀರ್ ಪೇರಡ್ಕ ತೆಕ್ಕಿಲ್, ಅಫ್ತಾಬ್ ಮನಂಬ ತೆಕ್ಕಿಲ್, ಶ್ರೀಮತಿ ಶಮೀಮ ಅಬ್ದುಲ್ ರಹಿಮಾನ್ ಸಂಕೇಶ್, ಬೆಂಗಳೂರಿನ ಉದ್ಯಮಿಗಳಾದ ಸಲೀಂ ಟರ್ಲಿ ತೆಕ್ಕಿಲ್, ಆರಿಫ್ ತೆಕ್ಕಿಲ್, ತೆಕ್ಕಿಲ್ ಕುಟುಂಬ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಶ್ರಫ್ ಟರ್ಲಿ ತೆಕ್ಕಿಲ್ ಅಲ್ಲದೆ ಬೆಂಗಳೂರಿನಲ್ಲಿ ವಾಸ್ತವ್ಯ ಇರುವ ತೆಕ್ಕಿಲ್ ಕುಟುಂಬದ ಸುಮಾರು 30ರಷ್ಟು ಸದಸ್ಯರು ಮತ್ತು ಕೆಪಿಸಿಸಿ ಕಾರ್ಯಧ್ಯಕ್ಷರಾದ ವಯನಾಡಿನ ಶಾಸಕ ಟಿ ಸಿದ್ದೀಕ್ ಉಪಸ್ಥಿತರಿದ್ದರು. ಅಶ್ರಫ್ ಟರ್ಲಿ ತೆಕ್ಕಿಲ್ ಸ್ವಾಗತಿಸಿ ಹಾರಿಸ್ ತೆಕ್ಕಿಲ್ ವಂದಿಸಿದರು.