ಕಾಪು: ಜೆಡಿಎಸ್ ಅಭ್ಯರ್ಥಿ ಸಬೀನ ಸಮದ್ ನಾಮಪತ್ರ ಸಲ್ಲಿಕೆ

ಕಾಪು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಬೀನ ಸಮದ್ ಕಾರ್ಯಕರ್ತರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ. ಸ್ಥಳೀಯ ದೈವಸ್ಥಾನ, ದೇವಸ್ಥಾನ, ಮಸೀದಿ, ಚರ್ಚ್ ಗಳಿಗೆ ತೆರಳಿ ಪ್ರಾರ್ಥಿಸಿ ಬಳಿಕ ಕಾಪು ತಾಲೂಕು ಆಢಳಿತ ಸೌದಕ್ಕೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.

ಈ ಸಂದರ್ಭ ಮಾತನಾಡಿದ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಯೋಗೀಶ್ ಶೆಟ್ಟಿ, ರಾಜ್ಯದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರಾಜ್ಯದ ಸರ್ವೋತೋಮುಖ ಅಭಿವೃದ್ಧಿಗೆ “ಜನತಾ ಪರ್ವ” ಕಾರ್ಯಕ್ರಮ ರೂಪಿಸಿದ್ದು, ಜನತಾ ಪರ್ವ ಕಾರ್ಯಕ್ರಮದಡಿ ಜನತಾ ಜಲಧಾರೆ, ಜನತಾ ಮಿಶ್ರ ಮತ್ತು ಪಂಚರತ್ನ ಯೋಜನೆಗಳನ್ನು ರೂಪಿಸಿದ್ದಾರೆ. ಈ ಬಾರಿಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತಗಳಿಸುವ ದಿಕ್ಕಿನಲ್ಲಿ ಕುಮಾರಣ್ಣನವರ ಮಿಷನ್ -123 ಅಂದರೆ, ಜಾತ್ಯತೀತ ಜನತಾ ದಳದಳಕ್ಕೆ ಬಹುಮತ ನೀಡಿದ್ದಲ್ಲಿ ಸಮಾಜದ ಎಲ್ಲಾ ವರ್ಗ ಮತ್ತು ಸಮುದಾಯದವರ ಏಳಿಗೆಗೆ ಜನತಾ ಪರ್ವ ದಡಿಯಲ್ಲಿ, ಜನತಾ ಜಲಧಾರೆ, ಜನತಾ ಮಿತ್ರ, ಪಂಚರತ್ನ ಯೋಜನೆ ಹೀಗೆ ಹತ್ತಾರು ಯೋಜನೆಗಳನ್ನು ಜನರಿಗೆ ತಲುಪಿಸುವ ಸಂಕಲ್ಪವನ್ನು ಮಾಡಿದ್ದಾರೆ ಎಂದರು. ಅಭ್ಯರ್ಥಿ ಸಬೀನ ಸಮದ್, ಸುಧಾಕರ್ ಶೆಟ್ಟಿ, ವಾಸುದೇವ ರಾವ್, ಜಯರಾಮ್ ಆಚಾರ್ಯ ಉಪಸ್ಥಿತರಿದ್ದರು.

Related Posts

Leave a Reply

Your email address will not be published.