ಕೊರಗಜ್ಜನ ಆರಾಧಕ ಖಾಸಿಂ ಸಾಹೇಬ್(66) ನಿಧನ
ಮಂಗಳೂರು: ಕಳೆದ 20 ವರ್ಷಗಳಿಂದ ಕೊರಗಜ್ಜನ ಆರಾಧಕರಾಗಿ ಗುರುತಿಸಿಕೊಂಡಿದ್ದ ಖಾಸಿಂ ಸಾಹೇಬ್(66) ಅವರು ಹೃದಯಾಘಾತದಿಂದಾಗಿ ಮಾ. 5ರಂದು ಮುಂಜಾನೆ ನಿಧನರಾಗಿದ್ದಾರೆ.
ಖಾಸಿಂ ಅವರು ಮೂಲತಃ ಕೇರಳದ ಪಾಲಕ್ಕಾಡ್ ಜಿಲ್ಲೆಯವರಾಗಿದ್ದು, ಕೇರಳದಿಂದ 35 ವರ್ಷದ ಹಿಂದೆ ಬಂದು ಸದ್ಯ ಮಂಗಳೂರು ಹೊರವಲಯದ ಮುಲ್ಕಿ ಬಳ್ಕುಂಜೆಯಲ್ಲಿ ನೆಲೆಸಿದ್ದರು. ಇವರು ದೈವಗಳಿಗೆ ಗುಡಿ ನಿರ್ಮಿಸಿ ಪ್ರತಿದಿನ ಪೂಜಿಸುತ್ತಿದ್ದರು.