ವಿಶ್ವಕರ್ಮ ಸಮುದಾಯವನ್ನು ನಿರ್ಲಕ್ಷಿಸುತ್ತಿರುವ ಸರ್ಕಾರ : ಪರಿಷತ್‍ನ ರಾಜ್ಯ ಸಂಚಾಲಕ ಉದಯ ಜಿ ಆಚಾರ್ಯ

ರಾಜ್ಯ ಸರ್ಕಾರ ವಿಶ್ವಕರ್ಮ ಸಮುದಾಯವನ್ನು ನಿರ್ಲಕ್ಷಿಸುತ್ತಾ ಬಂದಿದ್ದು, ಈ ಬಾರಿಯ ಬಜೆಟ್‍ನಲ್ಲೂ ಸಮುದಾಯಕ್ಕೆ ವಿಶೇಷ ಅನುದಾನ, ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಅನುದಾನ ಘೋಷಣೆ ಮಾಡಿಲ್ಲ ಎಂದು ಅಖಿಲ ಭಾರತ ವಿಶ್ವಕರ್ಮ ಪರಿಷತ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಈ ಬಗ್ಗೆ ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಪರಿಷತ್‍ನ ರಾಜ್ಯ ಸಂಚಾಲಕ ಉದಯ ಜಿ ಆಚಾರ್ಯ ಅವರು, ಸಮುದಾಯದ ಶೇ.90ರಷ್ಟು ಜನರು ಹಿಂದುತ್ವ ಸಂಘಟನೆ, ಬಿಜೆಪಿ ಜತೆ ಗುರುತಿಸಿಕೊಂಡಿದ್ದರೂ ಸರಕಾರ ಮಲತಾಯಿ ಧೋರಣೆಯಿಂದ ಸಮಾಜಕ್ಕೆ ಬಹಳ ಬೇಸರವಾಗಿದೆ.

ವಿಶ್ವಕರ್ಮ ಸಮುದಾಯ ಸದಾ ತನ್ನ ವೋಟ್ ಬ್ಯಾಂಕ್ ಎಂಬ ಭಾವನೆ ಆಡಳಿತ ಪಕ್ಷಕ್ಕೆ ಇದ್ದಲ್ಲಿ ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುವುದಕ್ಕೆ ಸಮಾಜಕ್ಕೆ ಗೊತ್ತಿದೆ ಎಂದು ಹೇಳಿದರು.ಸುದ್ದಿಗೋಷ್ಟಿಯಲ್ಲಿ ಪ್ರಭಾಕರ್ ಆಚಾರ್ಯ ಕಟಪಾಡಿ, ಅಶೋಕ್ ಆಚಾರ್ಯ, ಹರೀಶ್ ಆಚಾರ್ಯ ಉಪಸ್ಥಿತರಿದ್ದರು.
