ಬೆಸೆಂಟ್ ಮಹಿಳಾ ಕಾಲೇಜಿನ ಗ್ರಂಥಪಾಲಕ ಲೋಕರಾಜ್ ವಿಟ್ಲ ಅವರಿಗೆ ಡಾಕ್ಟರೇಟ್ ಪದವಿ
ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ಲೋಕರಾಜ್ ವಿಟ್ಲ ಅವರು ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿಯನ್ನು ನೀಡಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಗ್ರಂಥಪಾಲಕ ಡಾ. ಪುರುಷೋತ್ತಮ ಗೌಡ ಅವರ ಮಾರ್ಗದರ್ಶನದಲ್ಲಿ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗದಲ್ಲಿ ಮಂಡಿಸಿದ ಕಮ್ಯೂನಿಟಿ ಇನ್ಪಾರ್ಮೇಶನ್ ಸರ್ವೀಸಸ್ ಟು ದ ರೂರಲ್ ಪಾಪ್ಯುಲೇಸ್ ವಿದ್ ರೆಫರೆನ್ಸ್ ಟು ದಕ್ಷಿಣ ಕನ್ನಡ ಆಂಡ್ ಉಡುಪಿ ಡಿಸ್ಟಿಕ್ ಎನ್ನುವ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿಯನ್ನು ನೀಡಿದೆ.
ಲೋಕರಾಜ್ ಅವರು ಪ್ರಸ್ತುತ ದೇರೆಬೈಲ್ ಕೊಂಚಾಡಿಯ ನಿವಾಸಿಯಾಗಿದ್ದು, ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಲೋಕರಾಜ್ ಅವರು ವಿಟ್ಲ ಯುವಕ ಮಂಡಲ, ವೀರಭದ್ರ ಮಹಾಮ್ಮಾಯಿ ದೇವಸ್ಥಾನ, ಬಂಗ್ರಮಂಜೇಶ್ವರ ಹಾಗೂ ಪದ್ಮಶಾಲಿ ಸಮಾಜದ ವಿವಿಧ ಸಂಘಟನೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿ ಈಜುಕೊಳದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿ ವನ್ ಅಕ್ವಾ ಸೆಂಟರ್‍ನಲ್ಲಿ ಈಜು ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಹಲವಾರು ರಾಷ್ಟ್ರಮಟ್ಟದ ಈಜುಪಟುಗಳಿಗೆ ಕ್ರೀಡಾ ಈಜು ತರಬೇತಿಯನ್ನು ನೀಡುತ್ತಿದ್ದಾರೆ. ಲೋಕರಾಜ್ ಅವರು ದಿ. ವಿ ಸುಬ್ರಾಯ ಶೆಟ್ಟಿಗಾರ್ ಹಾಗೂ ಕಲ್ಯಾಣಿ ವಿ. ಶೆಟ್ಟಿಗಾರ್ ದಂಪತಿಗಳ ಪುತ್ರ.