ಮಹಾರಾಷ್ಟ್ರ: ಏಕನಾಥರದೇ ನಿಜವಾದ ಶಿವಸೇನೆ: ಸ್ಪೀಕರ್ ನಾರ್ವೇಕರ್‌ರ ವಿವಾದ ತೆರೆದ ತೀರ್ಪು

ಮಹಾರಾಷ್ಟ್ರ ವಿಧಾನ ಸಭೆಯ ಸಭಾಪತಿ ರಾಹುಲ್ ನಾರ್ವೇಕರ್ ಅವರು ಮುಖ್ಯಮಂತ್ರಿ ಏಕನಾಥ ಶಿಂಧೆಯವರ ಬಣವೇ ನಿಜವಾದ ಶಿವಸೇನೆ ಎಂದು ತೀರ್ಪು ನೀಡಿದರು.

ಇದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಮಾಜೀ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರು ಹೇಳಿದರು. ಬಿಜೆಪಿ ಪರ ಶಿವಸೇನೆಯನ್ನು ಒಡೆದು ಏಕನಾಥ ಶಿಂಧೆ ಮುಖ್ಯಮಂತ್ರಿ ಆದವರು. ಆಗ ಮಹಾ ಅಘಾಡಿ ಮೈತ್ರಿ ಸರಕಾರವನ್ನು ಬೀಳಿಸಲಾಗಿತ್ತು. ಉದ್ಧವ್ ಠಾಕ್ರೆಯವರ ಬಣ ಪಕ್ಷ ಬಿಟ್ಟ ಶಾಸಕರನ್ನು ಅನರ್ಹ ಗೊಳಿಸುವಂತೆ ಕೋರಿತ್ತು. ಈ ಸಂಬಂಧ ಸುಪ್ರೀಂ ಕೋರ್ಟು 10ರೊಳಗೆ ತೀರ್ಮಾನ ತೆಗೆದುಕೊಳ್ಳುವಂತೆ ಸ್ಪೀಕರ್‌ಗೆ ಸೂಚಿಸಿತ್ತು. ಅದರಂತೆ ಸ್ಪೀಕರ್ ಕತ್ತಲಾಗುವ ವರೆಗೆ ಕಾದು ಏಕನಾಥರ ಬಣ ನಿಜ ಶಿವಸೇನೆ ಎಂದಿದ್ದಾರೆ. ಸ್ಪೀಕರ್ ಆಯ್ಕೆ ಆ ಬಣದಿಂದಲೆ ಆಗಿತ್ತು. ಅಲ್ಲದೆ ನಾರ್ವೇಕರ್ ಎರಡು ಬಾರಿ ಕಾನೂನು ಬಾಹಿರವಾಗಿ ಮುಖ್ಯಮಂತ್ರಿಯನ್ನು ಭೇಟಿಯಾದ ವಿಷಯ ಕೂಡ ವಿವಾದವಾಗಿದೆ. ನ್ಯಾಯಾಧೀಶರು ಕಳ್ಳನನ್ನು ಭೇಟಿ ಮಾಡಿದಂತಾಗಿದೆ ಎಂದು ಉದ್ಧವ್ ಠಾಕ್ರೆಯವರು ಆರೋಪ ಮಾಡಿದ್ದರು.

Related Posts

Leave a Reply

Your email address will not be published.