ಮಂಗಳೂರು ಕಮ್ಯುನಿಟಿ ಸೆಂಟರ್ ಶುಭಾರಂಭ

ಉಳ್ಳಾಲ : ನಮ್ಮ ನಾಡ ಒಕ್ಕೂಟ ಇದರ ಆಶ್ರಯದಲ್ಲಿ ಮಂಗಳೂರು ಕಮ್ಯುನಿಟಿ ಸೆಂಟರ್ ತೊಕ್ಕೊಟ್ಟುವಿನ ಸ್ಮಾರ್ಟ್ ಸಿಟಿ ಕಟ್ಟಡದಲ್ಲಿ ಆರಂಭಗೊಂಡಿತು.

ವಿಧಾನ ಸಭಾ ಸ್ವೀಕರ್ ಯು ಟಿ ಖಾದರ್ ಫರೀದ್ ಮಂಗಳೂರು ಕಮ್ಯುನಿಟಿ ಸೆಂಟರ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಜನರಿಗೆ ಮೂಲಭೂತ ಸೌಕರ್ಯ ಗಳನ್ನು ಪಡೆಯಲು ಇಂತಹ ಸೇವೆ ಅವಶ್ಯಕತೆ ಇದೆ.ಶಿಕ್ಷಣ, ಉದ್ಯೋಗ ಮುಂತಾದ ಪ್ರಮುಖ ವಿಷಯಗಳ ಬಗ್ಗೆ ಮಾಹಿತಿ ಅಗತ್ಯ ಇರುತ್ತದೆ.ಇದನ್ನು ನಮ್ಮ ನಾಡ ಒಕ್ಕೂಟ ಉಚಿತ ವಾಗಿ ಒದಗಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಮಂಗಳೂರು ವಿವಿ ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಫ್ರೊ. ಅಬೂಬಕ್ಕರ್ ಸಿದ್ದೀಕ್ ಮಾತನಾಡಿ ಶಿಕ್ಷಣ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ಮೂಲಕ ವಿದ್ಯಾರ್ಥಿಗಳ ಬೆಳವಣಿಗೆ ನಮ್ಮಿಂದ ಆಗಬೇಕಾಗಿದೆ ಎಂದು ಸಲಹೆ ನೀಡಿದರು.

ವಕ್ಫ್ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್ ಮಾತನಾಡಿ, ಇಂತಹ ಸೇವೆ ಗಳಿಗೆ ಸಹಕಾರ ನಮ್ಮಿಂದ ಇದೆ.ಈ ಯೋಜನೆ ನಾಡಿನೆಲ್ಲೆಡೆ ತಲುಪಬೇಕು ಎಂದು ಹೇಳಿದರು.


ಹ್ಯುಮಾನಿಟಿ ಫೌಂಡೇಶನ್ ಅಧ್ಯಕ್ಷ ನಾಸೀರ್ ಅಹ್ಮದ್ ಸಾಮಣಿಗೆ ನಮ್ಮ ನಾಡ ಒಕ್ಕೂಟ ದ ಉಚಿತ ಸೇವೆ ಮತ್ತು ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಮ್ಮ ನಾಡ ಒಕ್ಕೂಟ ಇದರ ಅಧ್ಯಕ್ಷ ,ಡಾ.ಆರೀಫ್ ಮಸೂದ್ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ರಫೀಕ್ ಮಾಸ್ಟರ್, ರಾಝೀಕ್, ಹ್ಯುಮಾನಿಟಿ ಫೌಂಡೇಶನ್ ಕೋಶಾಧಿಕಾರಿ ಚಾರ್ಮಾಡಿ ಇಲ್ಯಾಸ್, ಸೈಫುಲ್ಲಾ, ಹನೀಫ್ ಕುತ್ತಾರ್, ಹಮೀದ್ ಕಣ್ಣೂರ್ ಟ್ಯಾಲೆಂಟ್, ವಕೀಲರಾದ ಜಹೀದ್ ಹುಸೈನ್, ಫೈಝಲ್, ರೋಷನ್, ಸಮದ್ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.