ಮಂಗಳೂರು : “ದಾಸ ನಮನ”- ಸಂಗೀತ ಕಾರ್ಯಾಗಾರ
ಮಂಗಳೂರು: ಧ್ಯಾನಸಂಗೀತ ಅಕಾಡೆಮಿ ಕಲಾ ಟ್ರಸ್ಟಿನ ವತಿಯಿಂದ ಸಂಗೀತ ವಿದ್ಯಾರ್ಥಿಗಳಿಗಾಗಿ ಮತ್ತು ಸಂಗೀತಾಸಕ್ತರಿಗಾಗಿ “ದಾಸ ನಮನ” ಸಂಗೀತ ಕಾರ್ಯಾಗಾರವು ಮಂಗಳೂರು ವಿಟಿ ರಸ್ತೆಯ ಶ್ರೀ ಕೃಷ್ಣ ಮಂದಿರ ಸಭಾಂಗಣದಲ್ಲಿ ನಡೆಯಿತು. ಕಲಾವಿದರಾದ ಹುಬ್ಬಳ್ಳಿಯ ಪಂಡಿತ್ ಮಲ್ಲಿಕಾರ್ಜುನ ಸಂಶಿ ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗದರ್ಶನ ಮಾಡಿದರು. ದಾಸಪರಂಪರೆಯಲ್ಲಿ ಬಂದ ಅಪರೂಪದ ಹಾಡುಗಳಿಗೆ ಹಿಂದೂಸ್ತಾನಿ ರಾಗ ಆಧಾರಿತ ಸ್ವರಸಂಯೋಜನೆ ಮತ್ತು ಕಲಿಕಾ ವಿಧಾನದ ಬಗ್ಗೆ ಮಾಹಿತಿ ನೀಡಿದರು. ಕೀರ್ತನ್ ನಾಯ್ಗ ತಬಲಾದಲ್ಲಿ ಮತ್ತು ಪ್ರಧಯ್ ಶೆಣೈ ಸಹಗಾಯನದಲ್ಲಿ ಸಹಕರಿಸಿದರು. ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಲೋಲಾಕ್ಷಿ, ಸಂಸ್ಥಾಪಕ ಕಾರ್ಯದರ್ಶಿ ಅಮಿತ್ ಕುಮಾರ್ ಬೆಂಗ್ರೆ ಉಪಸ್ಥಿತರಿದ್ದರು. ಸಂದೇಶ್ ಕಾಮತ್ ನಿರ್ವಹಿಸಿದರು.