ಮಂಗಳೂರು : ಹಿರಿಯ ಪತ್ರಕರ್ತರಿಗೆ ಪ್ರೆಸ್‌ಕ್ಲಬ್ ಗೌರವ ಸನ್ಮಾನ ಪುರಸ್ಕಾರ

ಮಂಗಳೂರು ಪ್ರೆಸ್‌ಕ್ಲಬ್ ದಿನಾಚರಣೆಯ ಸಂಭ್ರಮದ ಕಾರ್ಯಕ್ರಮವು ಮರವೂರು ದಿ ಗ್ರ್ಯಾಂಡ್ ಬೇ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ವಿ4 ನ್ಯೂಸ್‌ನ ವರದಿಗಾರ ಶರತ್ ಸಾಲ್ಯಾನ್ ಸೇರಿದಂತೆ 9 ಮಂದಿ ಹಿರಿಯ ಪತ್ರಕರ್ತರಿಗೆ ಪ್ರೆಸ್‌ಕ್ಲಬ್ ಗೌರವ ಸನ್ಮಾನ ಪುರಸ್ಕಾರ ನೀಡಲಾಯಿತು.

ಕಾರ್ಯಕ್ರಮವನ್ನು ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸಮಾಜದಲ್ಲಿ ತರೆ ಮರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರ ಸಾಧನೆಯನ್ನು ಗುರುತಿಸಿ ಗೌರವಿಸುವ ಮೂಲಕ ಅವರ ಸಾಧನೆಗೆ ಮತ್ತು ಅವರಿಗೆ ಬೆಂಬಲ ನೀಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಮಂಗಳೂರು ಪ್ರೆಸ್ ಕ್ಲಬ್ ಹೈನುಗಾರಿಕೆಯ ಮೂಲಕ ಸಾಧನೆ ಮಾಡಿದ ಮೈಮೂನಾ ಮತ್ತು ಮರ್ಝಿನಾ ರನ್ನು ಗುರುತಿಸಿ ಪ್ರೆಸ್ ಕ್ಲಬ್ ಪ್ರಶಸ್ತಿ ನೀಡಿರುವುದು ಹಿರಿಯ ಪತ್ರಕರ್ತರನ್ನು ಗುರಿತಿಸಿ ಗೌರವಿಸುತ್ತಿ ರುವುದು ಶ್ಲಾಘನೀಯ. ಪತ್ರಕರ್ತರು ತಮ್ಮ ಒತ್ತಡಗಳ ನಡುವೆ ಪ್ರೆಸ್ ನಂತಹ ದಿನಾಚರಣೆಯ ಮೂಲಕ ಒಂದುಗೂಡಿ ಕಾರ್ಯ ಕ್ರಮ ಹಮ್ಮಿಕೊಂಡಿರುವುದು ಉತ್ತಮ ಮಾದರಿ ಎಂದು ಶಾಸಕ ಭರತ್ ಶೆಟ್ಟಿ ಶುಭ ಹಾರೈಸಿದರು.

ಚಲನಚಿತ್ರ ನಟ ನಿರ್ದೇಶಕ, ನಿರ್ಮಾಪಕ ಡಾ. ದೇವದಾಸ್ ಕಾಪಿಕಾಡ್ ಅವರು ಮಾತನಾಡಿ, ಸಮಾಜದಲ್ಲಿ ಮಾಧ್ಯಮರಂಗ ಮಹತ್ವದ ಸ್ಥಾನವನ್ನು ಪಡೆದಿದೆ. ಇಂದು ನಾವು ಆಡುವ ಪ್ರತಿ ಮಾತುಗಳನ್ನು ಎಚ್ಚರಿಕೆ ಆಡಬೇಕಾಗಿದೆ ಇಂತಹ ಸನ್ನಿವೇಶ ದಲ್ಲಿ ಮಾಧ್ಯಮ ಗಳ ಪ್ರತಿನಿಧಿ ಗಳು ಹಲವು ಕಹಿ ಘಟನೆಗಳನ್ನು ಅನುಭವಿಸಿರುವುದನ್ನು ಗಮನಿಸಿದ್ದೇನೆ ಮಾಧ್ಯಮ ಪ್ರತಿನಿಧಿಗಳ ಬಗ್ಗೆ ಸಹನೆ ಕಳೆದುಕೊಂಡು ವರ್ತಿಸು ವುದು ಸಮಂಜಸವಲ್ಲ ಎಂದು ದೇವದಾಸ್ ಕಾಪಿಕಾಡ್ ಪ್ರಶಸ್ತಿ ವಿಜೇತರಿಗೆ ಶುಭ ಹಾರೈಸಿದರು.

ಸಮಾರಂಭದಲ್ಲಿ ಹಿರಿಯಪತ್ರಕರ್ತರಾದ ವಿ4 ನ್ಯೂಸ್‌ನ ವರದಿಗಾರ ಶರತ್ ಸಾಲ್ಯಾನ್, ಸೇರಿದಂತೆ ಅನ್ನು ಮಂಗಳೂರು, ರಾಘವೇಂದ್ರ ಭಟ್, ಪ್ರಕಾಶ್ ಮಜೇಶ್ವರ, ಕೃಷ್ಣ ಕೋಲ್ಚಾರ್, ರವಿ ಪೊಸವಣಿಕೆ, ರವೀಂದ್ರ ಶೆಟ್ಟಿ ಕುತ್ತೆತ್ತೂರು, ರಾಜೇಶ್ ಕಿಣಿ, ಅಶೋಕ್. ಶೆಟ್ಟಿ ಬಿ.ಎನ್.ಇವರುಗಳಿಗೆ ಪ್ರೆಸ್‌ಕ್ಲಬ್ ಗೌರವ ಸನ್ಮಾನ ಪುರಸ್ಕಾರ ನೀಡಲಾಯಿತು. ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಢಯಿತು.

ಪ್ರೆಸ್ ಕ್ಲಬ್ ಪ್ರಶಸ್ತಿ ವಿಜೇತರಾದ ಮೈಮೂನಾ-ಮತ್ತು ಮರ್ಝೀನಾರಿಗೆ ಶಾಸಕ ಭರತ್ ಶೆಟ್ಟಿ ಪ್ರಶಸ್ತಿ ವಿತರಿಸಿದರು.

ಪ್ರೆಸ್ ಕ್ಲಬ್ ಸಿಬ್ಬಂದಿ ಚಂಚಲಾಕ್ಷಿಯವರಿಗೆ, ಪ್ರೆಸ್ ಕ್ಲಬ್ ಪ್ರಶಸ್ತಿ ತೀರ್ಪು ಗಾರರಾದ ಎಸ್ ಡಿಎಂ ಕಾಲೇಜಿನ ಉಪನ್ಯಾಸಕ ಪುಷ್ಪರಾಜ್ ಮತ್ತು ವಿಶ್ರಾಂತ ಪತ್ರಕರ್ತ ಕುಮಾರ್ ನಾಥ್ ರವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಇದೇ ಸಂದರ್ಭ ಮತದಾನದ ಪ್ರತಿಜ್ಞಾ ವಿಧಿಯನ್ನು ಹರೀಶ್ ಮೋಟುಕಾನ ನೆರವೇರಿಸಿದರು. ಈ ಸಂದರ್ಭ ನಿಖಿಲ್ ಶೆಟ್ಟಿ ಮನೋರಂಜನಾ ಕ್ರೀಡಾ ಕಾರ್ಯಕ್ರಮ ವನ್ನು ನಿರ್ವಹಿಸಿದರು.

ಸಮಾರಂಭದಲ್ಲಿ ಮಾಜಿ ಮೇಯರ್ ಶಶಿಧರ ಹೆಗ್ಡೆ, ಭಾಸ್ಕರ ಕೆ, ಮನಪಾ ಸದಸ್ಯ ನವೀನ್ ಡಿ ಸೋಜ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಖಾದರ್ ಶಾ, ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ, ಕರ್ನಾಟಕ ಕಾರ್ಯ ನಿರತ ಪತ್ರ ಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಪ್ರೆಸ್ ಕ್ಲಬ್ ಪೂರ್ವಾಧ್ಯಕ್ಷ ಅನ್ನು ಮಂಗಳೂರು, ರವೀಂದ್ರ ಶೆಟ್ಟಿ, ಹಿರಿಯ ಪತ್ರಕರ್ತರಾದ ವಾಲ್ಟರ್ ನಂದಳಿಕೆ ಉಪಸ್ಥಿತರಿದ್ದರು.

ಸತೀಶ್ ಇರಾ ಪ್ರಾರ್ಥಿಸಿದರು, ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷ ತೆ ವಹಿಸಿ ಸ್ವಾಗತಿಸಿದರು. ಪ್ರದಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಕಾರ್ಯದರ್ಶಿ ಪುಷ್ಪರಾಜ್ ಬಿ.ಎನ್ ಕಾರ್ಯ ಕ್ರಮ ನಿರೂಪಿಸಿದರು.

Nippon

Related Posts

Leave a Reply

Your email address will not be published.