ಮಂಗಳೂರು: ಅಪ್ಸರಾ ಐಸ್ ಕ್ರೀಂನ 2ನೇ ಶಾಖೆ ಶುಭಾರಂಭ
ಈಗಾಗಲೇ ಜನಪ್ರಸಿದ್ಧಿಯನ್ನು ಪಡೆದಿರುವ ಕಾಮಾಕ್ಷಿ ವೇಂಚರ್ಸ್‌ನ ಅಪ್ಸರಾ ಐಸ್‌ಕ್ರೀಂ ಮತ್ತೊಂದು ಶಾಖೆ ನಗರದ ಮಣ್ಣಗುಡ್ಡದ ಲೋಟಸ್ ಧಾಮ್ ನಲ್ಲಿ ಶುಭಾರಂಭಗೊಂಡಿತು.
1971 ರಿಂದ ಮುಂಬೈನ ರತ್ನವಾಗಿರುವ ಅಪ್ಸರಾ ಐಸ್ ಕ್ರೀಮ್ಸ್, ಮಂಗಳೂರಿನಲ್ಲಿ ಮಣ್ಣಗುಡ್ಡದಲ್ಲಿ ತನ್ನ ಎರಡನೇ ಮಳಿಗೆಯನ್ನು ತೆರೆದಿದೆ. ಈಗಾಗಲೇ ಮಂಗಳೂರಿನ ಕದ್ರಿಯಲ್ಲಿ ಅಪ್ಸರಾ ಐಸ್ ಕ್ರೀಮ್ಸ್ ತನ್ನ ಮೊದಲ ಮಳಿಗೆಯನ್ನು ತೆರೆದು ಯಶಸ್ಸನ್ನು ಕಂಡಿದೆ.
ಮಣ್ಣಗುಡ್ಡದ ಗಾಂಧಿ ಪಾರ್ಕ್ ನ ಪ್ರಶಾಂತತೆಯಲ್ಲಿ ನೆಲೆಸಿರುವ ಲೋಟಸ್ ಧಾಮ್ ನ ಆಕರ್ಷಕ ವಾತಾವರಣದ ನಡುವೆ, ಅಪ್ಸರಾ ಐಸ್ ಕ್ರೀಮ್ಸ್ ನ ಹೊಸ ಭವ್ಯವಾದ ಮಳಿಗೆ ಉದ್ಘಾಟನೆ ಗೊಂಡಿದೆ. ಈ ಮಳಿಗೆಯನ್ನು ಭಾರತ್ ಆಟೋ ಕಾರ್ಸ್ ಪ್ರೈ.ಲೀ ಚೇರ್ ಮಾನ್ ಹಾಗೂ ಭಾರತ್ ಬೀಡಿ ವರ್ಕ್ಸ್ ಪ್ರೈ.ಲೀ ಕಾರ್ಯನಿರ್ವಾಹಕರಾದ ಸುಬ್ರಯಾ ಎಂ ಪೈ ಇವರು ಉದ್ಘಾಟಿಸಿದ್ದಾರೆ. ನಂತರ ಮಾತನಾಡಿದ ಅವರು, ನೂತನ ಶಾಖೆಗೆ ಶುಭ ಹಾರೈಸಿದರು.
ಇದೇ ವೇಳೆ ಕಾಮಾಕ್ಷಿ ಗ್ರೂಪ್‌ನ ಪಾರ್ಟನರ್ ಶ್ರೀಕಾಂತ್ ನಾಯಕ್ ಅವರು ಮಾತನಾಡಿ, ಅಪ್ಸರಾ ಐಸ್‌ಕ್ರೀಂನ ನೂತನ ಶಾಖೆ ಮಂಗಳೂರಿನಲ್ಲಿ ಉದ್ಘಾಟನೆಗೊಂಡಿದೆ. ಉದ್ಘಾಟನಾ ಪ್ರಯುಕ್ತ ಮೂರು ದಿನಗಳ ಕಾಲ ಶೇ.50ರಷ್ಟು ವಿಶೇಷ ಆಫರ್ ಲಭ್ಯವಿದೆ ಎಂದರು.
ಅಪ್ಸರಾ ಐಸ್ ಕ್ರೀಮ್ಸ್ 1971ರಲ್ಲಿ ದಕ್ಷಿಣ ಮುಂಬೈನ ವಾಲ್ಕೇಶ್ವರದಲ್ಲಿ ಪ್ರಾರಂಭವಾಗಿತ್ತು. ಇಲ್ಲಿ ಪ್ರಮುಖ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ. ಬಳಿಕ ಹಲವು ವರ್ಷಗಳ ಕಾಲ ಅಂಗಡಿಗಳಿಗೆ ಅಪ್ಸರಾ ಐಸ್ ಕ್ರೀಮ್ಸ್ ಮಾರಾಟ ಮಾಡುತ್ತ, ಮದುವೆಗಳು, ಇತರ ಕಾರ್ಯಕ್ರಮಗಳಿಗೆ ಸಾಕಷ್ಟು ತಮ್ಮ ಮಾರಾಟವನ್ನು ಪೂರೈಸಿತು. ಬಳಿಕ ತನ್ನ ವಾಣಿಜ್ಯ ವ್ಯಾಪ್ತಿ ವಿಸ್ತರಿಸುತ್ತದ್ದಂತೆ 2014ರ ಬಳಿಕ ಮುಂಬೈನ ಪ್ರಮುಖ ಸ್ಥಳಗಳಾದ ಪೊವಾಯಿ, ಅಂಧೇರಿ, ಲೋಖಂಡ್ವಾಲಾ ಮತ್ತು ಕಿಂಗ್ ಸರ್ಕಲ್ನಲ್ಲಿ ನಾಲ್ಕು ಹೊಸ ಮಳಿಗೆಗಳನ್ನು ಪ್ರಾರಂಭಿಸುವ ಮೂಲಕ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದರು.
ಉದ್ಘಾಟನಾ ಪ್ರಯುಕ್ತ ಶೇ.50ರಷ್ಟು ರಿಯಾಯಿತಿಯನ್ನು ಘೋಷಿಸಿದ್ದಾರೆ. ಈ ಆಫರ್ ಮಾರ್ಚ್ 11ರಿಂದ 13ರ ವರೆಗೆ ಲಭ್ಯವಿದೆ. ಅಪ್ಸರಾ ಐಸ್‌ಕ್ರೀಂ 25ಕ್ಕೂ ಹೆಚ್ಚು ಸಿಟಿಗಳಲ್ಲಿ 50ಕ್ಕೂ ಅಧಿಕ ಫ್ಲೇವರ್ಸ್ಸ್‌ಗಳಲ್ಲಿ 100ಕ್ಕೂ ಅಧಿಕ ಔಟ್‌ಲೆಟ್‌ಗಳನ್ನು ಹೊಂದಿದೆ.