ಮಂಗಳೂರು ; ಅಪಾಯಕ್ಕೆ ಆಹ್ವಾನ ನೀಡುವಂತಿದ್ದ, ತ್ರಿಶೂಲ ರೀತಿಯಲ್ಲಿದ್ದ ಕಬ್ಬಿಣದ ಸರಳುಗಳ ಕತ್ತರಿಸುವ ಕಾರ್ಯ
ಖಾಸಗಿ ಸಂಸ್ಥೆಯೊಂದು ಮಂಗಳೂರಿನ ನಾರಾಯಣ ಗುರು ವೃತ್ತದಿಂದ ಉರ್ವಾ ಸ್ಟೋರ್‍ಗಳ ನಡುವೆ ಡಿವೈಡರ್‍ಗೆ ಕಬ್ಬಿಣದ ಚೂಪಾದ ಸರಳುಗಳನ್ನು ಅಳವಡಿಸಲಾಗಿದ್ದು, ಅದರಲ್ಲಿ ತ್ರಿಶೂಲ ರೀತಿಯ ಚೂಪಾದ ಕಬ್ಬಿಣದ ಸರಳುಗಳಿದ್ದು ಇದು ಅಪಾಯವನ್ನ ಆಹ್ವಾನಿಸುವಂತಿತ್ತು. ಯಾವುದೇ ಅಪಘಾತಗಳು ನಡೆದಾಗ ಆ ಡಿವೈಡರ್ ಮೇಲೆ ಬಿದ್ದರೆ ಜೀವಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗುವಂತಿದೆ.
ಈ ಬಗ್ಗೆ ಸಾಮಾಜಿಕ ಕಾರ್ಯಕರ್ತರಾದ ಯತೀಶ್ ಬೈಕಂಪಾಡಿ ಅವರು ಸಂಬಂಧ ಪಟ್ಟ ಅಧಿಕಾರಿಗಳ ಮನಮುಟ್ಟುವಂತೆ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದ್ದರು. ಇದೀಗ ಎಚ್ಚೆತ್ತ ಅಧಿಕಾರಿಗಳು ತ್ರಿಶೂಲ ರೀತಿಯಲ್ಲಿದ್ದ ಕಬ್ಬಿಣದ ಸರಳುಗಳನ್ನು ಕತ್ತರಿಸಿ ತೆಗೆಯುವ ಮೂಲಕ ಸಾರ್ವಜನಿಕರಲ್ಲಿದ್ದ ಆತಂಕ ದೂರಮಾಡಿದ್ದಾರೆ.