ಮಂಗಳೂರು – ಡಿ.10ರಂದು ಅಂತರ್ ಧರ್ಮೀಯ ಸೌಹಾರ್ದ ಕ್ರೀಡಾ ಕೂಟ
ಕಥೋಲಿಕ್ ಸಭಾ ಮಂಗಳೂರು ಪ್ರದೇಶ, ಆಂಜೆಲೊರ್ ಘಟಕ ಮತ್ತು ಅಂತರ್ ಧರ್ಮೀಯ ಸಂವಾದ ಆಯೋಗ, ಆಂಜೆಲೊರ್ ಚರ್ಚ್ ವತಿಯಿಂದ ಪುರುಷರಿಗೆ ವಾಲಿಬಾಲ್ ಹಾಗೂ ಮಹಿಳೆಯರಿಗೆ ತ್ರೋಬಾಲ್ ಪಂದ್ಯಾವಳಿಯನ್ನು ಡಿ.10 ನಗರದ ಕಪಿತಾನಿಯೊ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಆಂಜೆಲೊರ್ ಚರ್ಚ್‍ನ ಅಂತರ್ ಧರ್ಮೀಯ ಆಯೋಗದ ಸಂಚಾಲಕರಾಧ ಫೆಲಿಕ್ಸ್ ಮೊರಾಸ್ ತಿಳಿಸಿದರು. ನಗರದ ಪ್ರೆಸ್ ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಆಂಜೆಲೊರ್ ಘಟಕದ ಕಥೊಲಿಕ್ ಸಭಾದ ಅಧ್ಯಕ್ಷರಾದ ರೋಶನ್ ಪತ್ರವೊ, ಆಂಜೆಲೊರ್ ಚರ್ಚ್‍ನ ಧರ್ಮಗುರುಗಳಾದ ವಂ.ವಿಲಿಯಂ ಮಿನೇಜಸ್, ಮಂಗಳೂರು ಧರ್ಮಪ್ರಾಂತ್ಯದ ಅಂತರ್ ಧರ್ಮೀಯ ಆಯೋಗದ ಸಂಚಾಲಕರಾಧ ರೋಯ್ ಕ್ಯಾಸ್ಟಲಿನೊ, ಅಂತರ್ ಧರ್ಮೀಯ ಆಯೋಗ್ ಕಾರ್ಯದರ್ಶಿ ರಾಜೇಶ್ ಮಿಸ್ಕಿತ್, ಪಾಲನಾ ಮಂಡಳಿಯ ಕಾಯದರ್ಶಿ ಲೊಲಿನಾ ಡಿಸೋಜಾ ಉಪಸ್ಥಿತರಿದ್ದರು.