ಮುಂಡ್ಕೂರು: ಮನೆಗೆ ನುಗ್ಗಿ ಬರಿಗೈಯಲ್ಲಿ ವಾಪಸ್ಸಾದ ಕಳ್ಳರು..!!
ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಜಾರಿಗೆಕಟ್ಟೆಯ ಅಲಂಗಾರು ಗುಡ್ಡೆ ಎಂಬಲ್ಲಿ ಮನೆಯ ಬಾಗಿಲ ಚಿಲಕ ಮುರಿದು ಒಳ ನುಗ್ಗಿದ ಕಳ್ಳರು ಬರಿಗೈಯಲ್ಲೇ ವಾಪಾಸ್ಸಾಗಿದ್ದರೆ. ಅಲಂಗಾರು ಗುಡ್ಡೆಯ ಹೆಲೆನ್ ಸೆರಾವೊ ಎಂಬುವವರು ಮನೆಯಲ್ಲಿ ಇಲ್ಲದ ವೇಳೆ ಈ ಘಟನೆ ನಡೆದಿದ್ದು,
ಇಂದು ಬೆಳಿಗ್ಗೆ ಮನೆಗೆ ಬಂದು ನೋಡುವಾಗ ಬಾಗಿಲು ತೆರೆದಿದ್ದು, ಒಳ ರೂಮಿನಲ್ಲಿದ್ದ ಕಪಾಟುಗಳನ್ನು ಕಳ್ಳರು ಜಾಲಾಡಿಸಿ ಹೋಗಿದ್ದಾರೆ. ಆದರೆ ಮನೆಯಲ್ಲಿ ನಗ-ನಗದು ಇಲ್ಲದ ಕಾರಣ ಬರಿಗೈಯಲ್ಲೇ ವಾಪಾಸ್ಸಾಗಿದ್ದಾರೆ. ಈ ಬಗ್ಗೆ ಹೆಲೆನ್ ಸೆರಾವೊ ಅವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.