ಮಂಗಳೂರು ; ಶವ ಕೊಳೆಸಿದ ಮಂಗಳೂರಿನ ಆಸ್ಪತ್ರೆಗೆ ಗ್ರಾಹಕರ ನ್ಯಾಯಾಲಯದಿಂದ ದಂಡ ಪ್ರಯೋಗ
ಹಣ ಪಡೆದು ಶವಾಗಾರದಲ್ಲಿ ಶವ ಇಟ್ಟು ಕೊಳೆಸಿದ ಕಾರಣಕ್ಕೆ ಮಂಗಳೂರು ನಗರದ ಆಸ್ಪತ್ರೆ ಒಂದಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ನ್ಯಾಯಾಲಯವು ವಾರಸುದಾರರಿಗೆ ರೂ. 5 ಲಕ್ಷ ಪರಿಹಾರ ನೀಡುವಂತೆ ಸೂಚಿಸಿದೆ. ತಿಂಗಳೊಳಗೆ ಪರಿಹಾರ ನೀಡಲು ವಿಫಲರಾದಲ್ಲಿ 8% ಬಡ್ಡಿ ಸೇರಿಸಿ ನೀಡುವಂತೆಯೂ ಸೂಚಿಸಲಾಗಿದೆ.
2019ರ ಅಕ್ಟೋಬರ್ 25ರಂದು ವಿಲ್ಸನ್ ಆಲನ್ ಫೆರ್ನಾಂಡೀಸ್ ಸಾವಿಗೀಡಾದರು. ವಿದೇಶದ ಬಂಧು ಬರಲಿ ಎಂದು ಮಂಗಳೂರಿನ ಒಂದು ಆಸ್ಪತ್ರೆಗೆ ಹಣ ನೀಡಿ ಅಲ್ಲಿನ ಶವಾಗಾರದಲ್ಲಿ ದೇಹ ಇಡಲಾಗಿತ್ತು. ಆದರೆ ಅಕ್ಟೋಬರ್ 27ರಂದು ಶವ ಕೊಳೆತಿತ್ತು. ವಿದ್ಯುತ್ ಇಲ್ಲದ ಕಾರಣವನ್ನು ಆಸ್ಪತ್ರೆ ನೀಡಿತ್ತು. ಇದರ ವಿರುದ್ಧ ಮೃತರ ಸಹೋದರ ಪೆರ್ಮನ್ನೂರಿನ ನೆಲ್ಸನ್ ಫೆರ್ನಾಂಡೀಸ್ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿದ್ದರು.