ಮಂಗಳೂರು: ಡಿ.10 ರಂದು ಕೀರ್ತಿಶೇಷ ಕುಂಬ್ಳೆ ಸುಂದರರಾವ್ ಸಂಸ್ಮರಣಾ ಕಾರ್ಯಕ್ರಮ

ಯಕ್ಷಲೋಕ ವಿಖ್ಯಾತ, ಮಾತಿನ ರಂಗದ ಮಹಾರಥಿ, ಹಿರಿಯ ಯಕ್ಷಗಾನ ಕಲಾವಿದರು, ಸುರತ್ಕಲ್ ಕ್ಷೇತ್ರದ ಶಾಸಕರು, ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರು, ಸಂಸ್ಕಾರ ಭಾರತೀಯ ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವಾರು ಪ್ರತಿಷ್ಟಿತ ಪುರಸ್ಕಾರವನ್ನು ಪಡೆದ ಕುಂಬ್ಳೆ ಸುಂದರರಾವ್‌ರವರ ಸಂಸ್ಮರಣಾ ಕಾರ್ಯಕ್ರಮವನ್ನು ಆಯೋಜಿಸಿದ್ದು, ಡಿಸೆಂಬರ್ ೧೦, ೨೦೨೩ನೇ ಆದಿತ್ಯವಾರ ಸಾಯಂಕಾಲ ೪.೦೦ರಿಂದ ದೇವಾಂಗ ಸಭಾಭವನ, ಉರ್ವಸ್ಟೋರ್, ಮಂಗಳೂರಿನಲ್ಲಿ ನಡೆಯಲಿರುವುದು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣಪ್ರಾಂತ ಸಹ ಕಾರ್ಯವಾಹರಾದ ಶ್ರೀ ಪಿ.ಎಸ್. ಪ್ರಕಾಶ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ತೆಂಕುತಿಟ್ಟಿನ ಮೇರು ಕಲಾವಿದರಾದ ಶ್ರೀ.ಕೆ.ಗೋವಿಂದ ಭಟ್ಟ್‌ರವರಿಗೆ ಕುಂಬ್ಳೆ ಸುಂದರರಾವ್ ಸಂಸ್ಮರಣಾ ಪ್ರಶಸ್ತಿ ಪ್ರಧಾನದೊಂದಿಗೆ ಗೌರವ ಧನ ರೂ.25,೦೦೦/- ನೀಡಲಾಗುವುದು.

ಎಂ. ಸಂಜೀವ ಶೆಟ್ಟಿ ಸಿಲ್ಕ್ಸ್ ಆಂಡ್ ಸಾರೀಸ್ ಇದರ ಮಾಲಕರಾದ ಶ್ರೀ ಎಂ. ಮುರಳೀಧರ್ ಶೆಟ್ಟಿ ಪ್ರಧಾನ ಅಭ್ಯಾಗತರಾಗಿ ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ಉಡುಪಿಯ ಯಕ್ಷಗಾನ ಕಲಾ ರಂಗದ ಕಾರ್ಯದರ್ಶಿ ಶ್ರೀ ಮುರಳಿ ಕಡೇಕಾರ್ ಸಂಸ್ಮರಣಾ ಹಾಗೂ ಅಭಿನಂದನಾ ಭಾಷಣವನ್ನು ಮಾಡಲಿರುವರು.

ಸಾಯಂಕಾಲ 4.00 ರಿಂದ ಜಿಲ್ಲೆಯ ಸುಪ್ರಸಿದ್ಧ ಅರ್ಥಧಾರಿಗಳಿಂದ ಭರತಾಗಮನ ಯಕ್ಷಗಾನ ತಾಳಮದ್ದಳೆಯು ನಡೆಯಲಿದ್ದು, ತದನಂತರ ಸಾಯಂಕಾಲ ಘಂಟೆ 6.00ರಿಂದ ಸಭಾ ಕಾರ್ಯಕ್ರಮ ಬಳಿಕ ರಾತ್ರಿ ಘಂಟೆ7.30ರಿಂದ ಹವ್ಯಾಸಿ ಬಳಗ ಕದ್ರಿ(ರಿ). ಮಂಗಳೂರು ಇವರಿಂದ ಸಾಯುಜ್ಯ ಸಂಗ್ರಾಮ ಎಂಬ ಪುಣ್ಯಪ್ರದ ಯಕ್ಷಗಾನ ಕಥಾನಕ ಪ್ರದರ್ಶನಗೊಳ್ಳಲಿದೆ.

Related Posts

Leave a Reply

Your email address will not be published.