ಶ್ರೀ ರಾಜಶೇಖರಾನಂದ ಸ್ವಾಮೀಜಿಯವರ ಚಾತುರ್ಮಾಸ್ಯ ಸಂಪನ್ನ

ಪರಮಪೂಜ್ಯ ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರ 24ನೇ ಚಾತುರ್ಮಾಸ್ಯವು ಶ್ರೀವಜ್ರದೇಹಿ ಮಠದಲ್ಲಿ ಸಂಪನ್ನಗೊಂಡಿತು. ಪೂಜ್ಯ ಶ್ರೀಗಳು ಮೃತ್ತಿಕಾ ಪೂಜೆಯನ್ನು ನೆರವೇರಿಸಿದರು. ವ್ಯಾಸ ಪೂಜೆ ಮತ್ತು ಪಟ್ಟದ ದೇವರ ಮಹಾ ಪೂಜೆಯನ್ನು ನೆರವೇರಿಸಿದರು. ಅನಂತರ ಭಕ್ತರು ಈ ಸತ್ಕರ್ಮದಲ್ಲಿ ಪಾಲ್ಗೊಂಡಿದ್ದರು.