ದೆಹಲಿ: ಶೋಭಾ ಕರಂದ್ಲಾಜೆಗೆ ಹೆಚ್ಚುವರಿ ಮಂತ್ರಿಗಿರಿ
ವಿಧಾನ ಸಭೆಗೆ ಆಯ್ಕೆಯಾದ ಕಾರಣ ರಾಜೀನಾಮೆ ನೀಡಿದ ಕೇಂದ್ರ ಮಂತ್ರಿಗಳಾದ ನರೇಂದ್ರ ಸಿಂಗ್ ತೋಮರ್, ಪ್ರಹ್ಲಾದಸಿಂಗ್ ಪಟೇಲ್, ರೇಣುಕಾ ಸಿಂಗ್ ಅವರು ಹೊಂದಿದ್ದ ಸಚಿವ ಖಾತೆಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೆಚ್ಚುವರಿಯಾಗಿ ನಾಲ್ವರು ಮಂತ್ರಿಗಳಿಗೆ ಹಂಚಿದ್ದಕ್ಕೆ ಅಂಕಿತ ಹಾಕಿದರು.
ಮಂತ್ರಿ ಅರ್ಜುನ್ ಮುಂಡಾರಿಗೆ ಹೆಚ್ಚುವರಿಯಾಗಿ ಕೃಷಿ ಮತ್ತು ರೈತರ ಕಲ್ಯಾಣ, ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಹೆಚ್ಚುವರಿಯಾಗಿ ಆಹಾರ ಸಂಸ್ಕರಣಾ ಉದ್ಯಮಗಳು, ಸಚಿವ ರಾಜೀವ ಚಂದ್ರಶೇಖರರಿಗೆ ಹೆಚ್ಚುವರಿಯಾಗಿ ಜಲಶಕ್ತಿ, ಮಂತ್ರಿ ಭಾರತಿ ಪ್ರವೀಣ್ ಪವಾರ್‍ರಿಗೆ ಹೆಚ್ಚುವರಿಯಾಗಿ ಬುಡಕಟ್ಟು ಕಲ್ಯಾಣ ಖಾತೆಗಳನ್ನು ವಹಿಸಲಾಗಿದೆ.ಸಂವಿಧಾನದ 75ನೇ ವಿಧಿಯ 2ನೇ ನಿಯಮದಂತೆ ರಾಷ್ಟ್ರಪತಿಗಳು ಕೂಡಲೇ ಕ್ರಮ ಕೈಗೊಳ್ಳುವಂತೆ ಪ್ರಧಾನಿಗೆ ಸೂಚಿಸಿ ಅದರಂತೆ ಹೊಸ ವ್ಯವಸ್ಥೆ ಸಾಧ್ಯವಾಗಿಸಿದ್ದಾರೆ.