ಮಂಗಳೂರು: ನೇಕ್ಸಾ ಕಾರು ಶೋರೂಂನಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಆನ್ಲೈನ್ ಮುದ್ದು ಕೃಷ್ಣ ಫೋಟೋ ಸ್ಪರ್ಧೆ
ಮಂಗಳೂರಿನ ಮೆರಿಹಿಲ್‍ನಲ್ಲಿರುವ ನೇಕ್ಸಾ ಕಾರು ಶೋರೂಂನಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ 5 ವರ್ಷದೊಳಗಿನ ಮಕ್ಕಳಿಗಾಗಿ ಆನ್ಲೈನ್ ಮುದ್ದು ಕೃಷ್ಣ ಫೋಟೋ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಕಾರು ಮಾರಾಟ ಕ್ಷೇತ್ರದಲ್ಲಿ ಹೆಸರು ಪಡೆದುಕೊಂಡಿರುವ ನೆಕ್ಸಾ ಕಾರು ಶೋರೂಂ ದಾಖಲೆ ಮಟ್ಟದಲ್ಲಿ ಕಾರುಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿರುವ ಜೊತೆಗೆ ಸಮಾಜಮುಖಿ ಕೆಲಸವನ್ನು ಮಾಡುವ ಮೂಲಕ ಜನರ ಮೆಚ್ಚುಗೆ ಪಾತ್ರವಾಗಿದೆ. ಇದೀಗ ಮಕ್ಕಳಿಗಾಗಿ ಆನ್ಲೈನ್ ಮುದ್ದು ಕೃಷ್ಣ ಫೋಟೋ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, 5 ವರ್ಷದೊಳಗಿನ ದಕ್ಷಿಣ ಕನ್ನಡ ಜಿಲ್ಲೆಯ ಮಕ್ಕಳಿಗೆ ಮುಕ್ತ ಅವಕಾಶವನ್ನು ನೀಡಲಾಗಿದೆ.
ಕೃಷ್ಣ ವೇಷಧಾರಿಯಾದ ಮಗುವಿನ ಛಾಯಾಚಿತ್ರಗಳು ಹಾಗೂ ಮಗುವಿನ ಪೂರ್ಣ ಹೆಸರು, ಆಧಾರ್ ಕಾರ್ಡ್ ಅಥವಾ ವಯಸ್ಸಿನ ದಾಖಲೆ, ವಿಳಾಸವನ್ನು ಸೆ.10 ರ ಸಂಜೆ 6 ಗಂಟೆಯ ಓಳಗಾಗಿ 7338298767 ಸಂಖ್ಯೆಗೆ ವಾಟ್ಸಾಪ್ ಮೂಲಕ ಕಳುಹಿಸಬೇಕು. ನಂತರ ಬಂದ ಫೋಟೋವನ್ನು ಸ್ಪರ್ಧೆಗೆ ಅನರ್ಹಗೊಳಿಸಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸಿದ 3 ಮಕ್ಕಳ ಛಾಯಾಚಿತ್ರವನ್ನು ವಿಜೇತರೆಂದು ತೀರ್ಪುಗಾರರು ಆಯ್ಕೆ ಮಾಡಲಿದ್ದಾರೆ. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಮಕ್ಕಳ ಫೋಟೋವನ್ನು ಸಂಸ್ಥೆಯ ಫೇಸ್‍ಬುಕ್ ಮತ್ತು ಇನ್ಟಾಗ್ರಾನಲ್ಲಿ ಹಾಕಲಾಗುತ್ತದೆ.
ಸ್ಫರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಥಮ ಬಹುಮಾನವಾಗಿ 5 ಸಾವಿರ ರೂ ಮೌಲ್ಯದ ಗಿಫ್ಟ್ ವೋಚರ್, ದ್ವಿತೀಯ ಬಹುಮಾನವಾಗಿ 3 ಸಾವಿರ ರೂ ಮೌಲ್ಯದ ಗಿಫ್ಟ್ ವೋಚರ್, ತೃತೀಯ ಬಹುಮಾನವಾಗಿ 2 ಸಾವಿರ ರೂ ಮೌಲ್ಯದ ಗಿಫ್ಟ್ ವೋಚರ್ ಪಡೆಯುವ ಅವಕಾಶವಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 7338298767
ಅಥವಾ
ನೆಕ್ಸಾ, ಮಾಂಡೋವಿ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್, ಏರ್‍ಪೆÇೀರ್ಟ್ ರೋಡ್, ಸಮಿತ್ ಅಪಾರ್ಟಮೆಂಟ್ ಬಿಲ್ಡಿಂಗ್, ಮೆರಿಹಿಲ್, ಮಂಗಳೂರು. ಇಲ್ಲಿ ಸಂಪರ್ಕಿಸಬಹುದಾಗಿದೆ.