ಡ್ರೀಮ್ ಕ್ಯಾಚರ್ಸ್ ವತಿಯಿಂದ ಮ್ಯಾಂಗಲೂರ್ಸ್ ಗಾಟ್ ಟ್ಯಾಲೆಂಟ್ ಸೀಸನ್-3 ಆಡಿಷನ್ ಪ್ರಕ್ರಿಯೆ
ಡ್ರೀಮ್ ಕ್ಯಾಚರ್ಸ್ ಈವೆಂಟ್ಸ್ ವತಿಯಿಂದ ಫಿಜಾ ಬೈ ನೆಕ್ಸಸ್ ಮಾಲ್ ಸಹಯೋಗದೊಂದಿಗೆ ಮ್ಯಾಂಗಲೂರ್ಸ್ ಗಾಟ್ ಟ್ಯಾಲೆಂಟ್ ಸೀಸನ್-3 ನಡೆಯಲಿದ್ದು, ಅದಕ್ಕಾಗಿ ಮೊದಲ ಹಂತದ ಆಡಿಷನ್ ಪ್ರಕ್ರಿಯೆಯು ನಗರದ ಫಿಜಾ ಬೈ ನೆಕ್ಸಸ್ ಮಾಲ್ ನಡೆಯಿತು.
16 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸ್ಪರ್ಧಿಸುವ ಅವಕಾಶವನ್ನು ಕಲ್ಪಿಸಿದ್ದರು. ಗ್ರೂಪ್ ಮತ್ತು ವೈಯಕ್ತಿಕವಾಗಿ ಮತ್ತು ವಿವಿಧ ತಂಡಗಳಾಗಿ ಭಾಗವಹಿಸಲು ಅವಕಾಶವಿತ್ತು. ಕರ್ನಾಟಕದ 60ಕ್ಕಿಂತಲೂ ಹೆಚ್ಚಿನ ಸ್ಪರ್ಧಿಗಳು ಭಾಗವಹಿಸಿ, ವಿವಿಧ ರೀತಿಯ ಪ್ರತಿಭೆಗಳನ್ನು ಪ್ರದರ್ಶಿಸಿದ್ದಾರೆ. ತೀರ್ಪುಗಾರರಾಗಿ ಭರತನಾಟ್ಯ ಕಲಾವಿದೆ ಪೂರ್ಣಸಾ ಕಾಮತ್, ಉದ್ಯಮಿ ಅನುರಾಧ ಅವರು ಸಹಕರಿಸಿದರು.ಸಂಘಟಕರಾದ ಪೃಥ್ವಿ ಗಣೇಶ್ ಕಾಮತ್ ಭಾಗವಹಿಸಿದ್ದರು.
ಮ್ಯಾಂಗಲೂರ್ಸ್ ಗಾಟ್ ಟ್ಯಾಲೆಂಟ್ ಸೀಸನ್-3ಗೆ ಮೀಡಿಯಾ ಪಾರ್ಟ್‍ನರ್ ಆಗಿ ವಿ4 ನ್ಯೂಸ್ , ಸೋಶಿಯಲ್ ಮೀಡಿಯಾ ಪಾರ್ಟ್‍ನರ್ ಆಗಿ ಮ್ಯಾಂಗಲೂರ್ ಮೇರಿ ಜಾನ್ ಸಹಕಾರ ನೀಡಲಿದ್ದಾರೆ.
ಈಗಾಗಲೇ ಆಡಿಶನ್‍ನಲ್ಲಿ 25 ಮಂದಿ ಪ್ರತಿಭೆಗಳನ್ನು ಆಯ್ಕೆ ಮಾಡಲಾಗಿದ್ದು, ಆಫ್‍ಲೈನ್ ಆಡಿಶನ್‍ನಲ್ಲಿ ಭಾಗವಹಿಸಲು ಸಾಧ್ಯವಗದವರಿಗೆ ಆನ್‍ಲೈನ್ ಆಡಿಶನ್‍ಗಳಲ್ಲಿ ಭಾಗವಹಿಸಲು ಅವಕಾಶ ನೀಡಿದ್ದಾರೆ. ಆನ್‍ಲೈನ್ ಆಡಿಶನ್‍ನಲ್ಲಿ ಭಾಗವಹಿಸಲು ಹೆಸರನ್ನು ನೋಂದಾಯಿಸಲು 8884410414 ನಂಬರಗೆ ಸಂಪರ್ಕಿಸಬಹುದು.