ಮಂಜೇಶ್ವರ: ವಿದ್ಯುತ್ ಶಾಕ್ ತಗುಲಿ ಯುವಕನ ದಾರುಣ ಅಂತ್ಯ
ಮಂಜೇಶ್ವರ: ವಿದ್ಯುತ್ ಶಾಕ್ ತಗುಲಿ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿದ್ದಾನೆ.
ಹೊಸಂಗಡಿ ಸಮೀಪದ ಅಂಗಡಿಪದವು ನಿವಾಸಿ ದಿವಂಗತ ಅಶೋಕ್ – ಕಲಾವತಿ ದಂಪತಿಯ ಪುತ್ರ ಪ್ರಜ್ವಲ್ (19) ಸಾವನ್ನಪ್ಪಿದ ದುರ್ದೈವಿ.
ಅಂಗಡಿಪದವಿನ ಅಂಗಡಿಯೊಂದರ ಮುಂಭಾಗದಲ್ಲಿ ವಿದ್ಯುತ್ ಹರಿಯುತ್ತಿದ್ದ ಕಬ್ಬಿಣದ ಗೇಟ್ ನ್ನು ತಿಳಿಯದೆ ಸ್ಪರ್ಶಿಸಿದಾಗ ವಿದ್ಯುತ್ ಶಾಕ್ ತಗುಲಿದ್ದು, ಬೊಬ್ಬೆ ಕೇಳಿದ ಸ್ಥಳೀಯರು ವಿದ್ಯುತ್ ವಯರ್ ನ್ನು ವಿಚ್ಚೆದಿಸಿ, ಕೂಡಲೇ ಉಪ್ಪಳದ ಖಾಸಗಿ ಆಸ್ಪತ್ರೆಗೆ ದಾಖಲಿಸುವ ದಾರಿ ಮಧ್ಯೆ ಪ್ರಜ್ವಲ್ ಕೊನೆಯುಸಿರೆಳೆದಿದ್ದಾನೆ.