ಮಂಜೇಶ್ವರ : ಆಟೋ ರಿಕ್ಷಾ, ಟ್ಯಾಕ್ಸಿ, ಬಸ್ ನಿರೀಕ್ಷಣಾ ಕೇಂದ್ರ ಬದಲಾಯಿಸಲು ಕ್ರಮ
ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಮುಗಿದ ನಂತರ ನಷ್ಟವಾಗುತ್ತಿರುವ ಆಟೋರಿಕ್ಷಾ, ಟ್ಯಾಕ್ಸಿ ನಿಲ್ದಾಣ ಹಾಗೂ ಬಸ್ ನಿರೀಕ್ಷಣಾ ಕೇಂದ್ರಗಳನ್ನು ಬದಲಾಯಿಸಲು ಅಧಿಕಾರಿಗಳು ಕ್ರಮಕೈಗೊಳ್ಳುವಂತೆ ಕಾಸರಗೋಡು ಜಿಲ್ಲಾ ಮೋಟಾರು ಮತ್ತು ಇಂಜಿನಿಯರಿಂಗ್ ಕಾರ್ಮಿಕರ ಸಂಘ ಎಐಟಿಯುಸಿ ಜಿಲ್ಲಾ ಸಮಿತಿ ಅಧಿಕಾರಿಗಳನ್ನು ಒತ್ತಾಯಿಸಿದೆ.
ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಕೆ.ವಿ.ಕೃಷ್ಣನ್ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಮುಸ್ತಫಾ ಕಡಂಬಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಪಿ.ವಿಜಯಕುಮಾರ್ ಚಟುವಟಿಕೆ ವರದಿ ಹಾಗೂ ಖಜಾಂಚಿ ಎಂ.ವಿ.ಚಂದ್ರನ್ ಆದಾಯ ಮತ್ತು ವೆಚ್ಚದ ಲೆಕ್ಕಪತ್ರ ಮಂಡಿಸಿದರು. ಅಸ್ಕರ್ ಕಡವತ್ ಹುತಾತ್ಮ ನಿರ್ಣಯ ಹಾಗೂ ಬಿಜೀಶ್ ಸಂತಾಪ ಸೂಚಕ ನಿರ್ಣಯ ಮಂಡಿಸಿದರು. ಪ್ರವಾಸಿ ವಾಹನಗಳಿಗೆ ಅಳವಡಿಸಿರುವ ಜಿಪಿಎಸ್ ನ ರೀಚಾರ್ಜ್ ಮೊತ್ತವನ್ನು ಕಡಿತಗೊಳಿಸಬೇಕು ಮತ್ತು ಟ್ಯಾಕ್ಸಿ ವಲಯವನ್ನು ನಾಶಪಡಿಸುತ್ತಿರುವ ನಕಲಿ ಟ್ಯಾಕ್ಸಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.ವಾಹನಗಳ ಸೇವಾ ಅವಧಿಯನ್ನು 15 ವರ್ಷದಿಂದ 18 ವರ್ಷಕ್ಕೆ ಹೆಚ್ಚಿಸಬೇಕು ಎಂದು ಸಭೆ ಒತ್ತಾಯಿಸಿತು.
ಸ್ವಾಗತ ಸಮಿತಿ ಅಧ್ಯಕ್ಷ ಬಿ.ವಿ.ರಾಜನ್, ಎಐಟಿಯುಸಿ ಮಂಜೇಶ್ವರ ಮಂಡಲ ಕಾರ್ಯದರ್ಶಿ ಎಸ್.ರಾಮಚಂದ್ರ, ಸಿಪಿಐ ಮಂಜೇಶ್ವರ ಮಂಡಲ ಕಾರ್ಯದರ್ಶಿ ಜಯರಾಮ ಬಲ್ಲಂಗುಡೇಲ್ , ಗಂಗಾಧರ ಕೊಡ್ಡೆ, ಎಂ.ವಿಜಯನ್, ವಿನೀಶ್ ಎಂ.ಪಿ., ಅಬ್ದುಲ್ ಹಮೀದ್, ದಯಾನಂದ ಪಂಡಿತ್, ಅಬ್ದುಲ್ ಹಮೀದ್, ಹಕೀಂ ಹೊಸಂಗಡಿ, ದಯಾಕರ ಮಾಡ,ಮೊಹಮ್ಮದ್ ಅಶ್ರಫ್ ಮೊದಲಾದವರು ಉಪಸ್ಥಿತರಿದ್ದರು.