ಮಂಗಳೂರು – ಮಹಿಳೆಯರಿಗಾಗಿ ವಿಶೇಷ ಆಟೋಟ ಸ್ಪರ್ಧೆ ಉದ್ಘಾಟನಾ ಸಮಾರಂಭ
ಮಂಗಳೂರು ನಗರದ ಪಚ್ಚನಾಡಿ ದೇವಿನಗರದಲ್ಲಿ ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ ಸಹಕಾರದಲ್ಲಿ ಶ್ರೀ ದೇವಿ ಮಾತೃ ಮಂಡಳಿ ಹಾಗೂ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಪಚ್ಚನಾಡಿ ಇವರ ವತಿಯಿಂದ ಪಚ್ಚನಾಡಿ ದೇವಿನಗರದ ಕೇಂದ್ರ ಮೈದಾನದಲ್ಲಿ ಮಹಿಳೆಯರಿಗಾಗಿ ನಡೆದ ವಿಶೇಷ ಆಟೋಟ ಸ್ಪರ್ಧೆಯ ಉದ್ಘಾಟನಾ ಸಮಾರಂಭ ನಡೆಯಿತು.
ಕುಮಾರಿ ತನಿಷ್ಕ ಆರ್ ಕುಲಾಲ್ ಹಾಗೂ ಸಾನ್ವಿ ಎಮ್ ಇವರು ಶ್ರೀ ಗಣೇಶನ ಸ್ತುತಿಃ ಮಾಡಿದರು. ಶ್ರೀಮತಿ ಭವ್ಯಾ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಆತಿಥಿ ಗಣ್ಯರು ಥ್ರೋಬಾಲ್ ಎಸೆಯುವ ಮೂಲಕ ಆಟೋಟ ಸ್ಪರ್ಧೆಗೆ ಚಾಲನೆ ನೀಡಿದರು. ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಮ್ಯೂಸಿಕಲ್ ಚೇರ್, ಸ್ಟೇಷನ್ ಬಾಕ್ಸ್, ಬಲೂನ್ ಒಡೆಯುವ ಸ್ಪರ್ಧೆ, ಗ್ರಾಮೀಣ ಆಟಗಳಾದ ಕೆರೆದಡ, ಲಿಂಬೆ ಚಮಚದ ಜೊತೆಗೆ ಓಟ, ಕುಂಟುಕಾಲು ಓಟ, ಕಪ್ಪೆ ಜಿಗಿತ ಓಟ ಮೊದಲಾದ ಆಟಗಳೆಲ್ಲ ನಡೆಯಿತು.
ವೇದಿಕೆಯಲ್ಲಿ ಅತಿಥಿಗಳಾಗಿ ಶ್ರೀಮತಿ ಭವ್ಯಾ, ಮೇಲ್ವಿಚಾರಕಿಯರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶ್ರೀಮತಿ ದಿವ್ಯಾ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಶಕ್ತಿನಗರ, ಶ್ರೀ ಮೋಹನ್ ಪಚ್ಚನಾಡಿ, ಗೌರವಾಧ್ಯಕ್ಷರು ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್, ಶ್ರೀ ಸೆಲ್ವ ಕುಮಾರ್ ಸೇವಾ ಪ್ರತಿನಿಧಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶ್ರೀ ರಾಜೇಶ್ ಅಧ್ಯಕ್ಷರು ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್, ಶ್ರೀ ಜಯಕರ ಅಧ್ಯಕ್ಷರು ಸತ್ಯಸಾರಮಣಿ ಸಮಿತಿ ಬಸವಲಿಂಗಪ್ಪನಗರ ಉಪಸ್ಥಿತರಿದ್ದರು.