ಮಂಜೇಶ್ವರ : ವ್ಯಕ್ತಿಯೋರ್ವ ವಿದ್ಯುತ್ ಕಂಬಕ್ಕೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ
ಮಂಜೇಶ್ವರ : ಅಜ್ಞಾತ ಮಧ್ಯ ವಯಸ್ಕನೊಬ್ಬ ರೈಲ್ವೇ ಹಳಿಯ ಬದಿಯಲ್ಲಿರುವ ವಿದ್ಯುತ್ ಕಂಬಕ್ಕೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಸುಮಾರು 55 ವರ್ಷ ಪ್ರಾಯವಿರುವ ಈತ ಎರಡು ದಿವಸಕ್ಕೆ ಮೊದಲು ಗಡಿ ಪ್ರದೇಶವಾದ ತಲಪಾಡಿಯಲ್ಲಿ ಮಲಯಾಳ ಭಾಷೆಯಲ್ಲಿ ಮಾನಸಿಕವಾಗಿ ಅಸ್ವಸ್ಥಗೊಂಡ ರೀತಿಯಲ್ಲಿ ಮಾತನಾಡುತ್ತಿದ್ದನೆಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಈತನ ಕ್ರೆಯಲ್ಲಿ ಮನೋಹರ್ ಎಂದು ಬರೆಯಲಾಗಿದೆ. ಮಾಹಿತಿ ಅರಿತು ಸ್ಥಳಕ್ಕೆ ಸಮಾಜ ಸೇವಕರಾದ ಅಶ್ರಫ್ ಬಡಾಜೆ, ಅಸ್ಲಂ, ಖಲೀಲ್, ಸಮದ್, ತುಳಸಿ ಮಂಜೇಶ್ವರ ಹಾಗೂ ಮಂಜೇಶ್ವರ ಸರ್ಕಲ್ ರಿತೀಶ್, ಎಸ್ಸೈ ಗಳಾದ ನಿಖಿಲ್ ಹಾಗೂ ಸುಮೇಶ್ ತಲುಪಿ ಪಂಚೆನಾಮೆ ನಡೆಸಿದ ಬಳಿಕ ಶವವನ್ನು ಮಂಗಲ್ಪಾಡಿ ಶವಗಾರಕ್ಕೆ ಕೊಂಡೊಯ್ಯಲಾಗಿದೆ.