ಜ.6 ಮತ್ತು 7ರಂದು ಕೇರಳ ಸಾಹಿತ್ಯ ಬಹುಭಾಷಾ ಸಮ್ಮೇಳನ
ಮಂಜೇಶ್ವರ: ಮಂಜೇಶ್ವರ ದ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕದಲ್ಲಿ ಜನವರಿ 6 ಮತ್ತು 7ರಂದು ನಡೆಯಲಿರುವ ಕೇರಳ ಸಾಹಿತ್ಯ ಬಹುಭಾಷಾ ಸಮ್ಮೇಳನದ ಭಾಗವಾಗಿರುವ ಚಿತ್ರಪ್ರದರ್ಶನದ ಸಿದ್ಧತೆಗಳು ಪ್ರಗತಿಯಲ್ಲಿದೆ.
ಕಾಸರಗೋಡಿನ ಮಾನವ ಸ್ವಭಾವ, ಸಾಂಸ್ಕೃತಿಕ ಇತಿಹಾಸ ಮತ್ತು ಭೌಗೋಳಿಕತೆಯನ್ನು ಮರುಶೋಧಿಸುವ ಚಿತ್ರಗಳನ್ನು ರಚಿಸಲಾಗುತ್ತಿದೆ.ಕಲೆ, ಜೀವನ, ಭಾಷೆ, ಕಲ್ಪನೆ, ಪ್ರಕೃತಿ ಗಳ ಬಗ್ಗೆ ಹಾಗೂ ಗಡಿನಾಡಿನ ಗ್ರಾಮಗಳಲ್ಲಿರು ಕಟ್ಟಡಗಳ ಚಿತ್ರಗಳು ಕೂಡಾ ಪುದರ್ಶನಕ್ಕೆ ಸಿದ್ದವಾಗುತ್ತಿದೆ. ಕಲಾವಿದರಾದ ಪ್ರಕಾಶ್ ಕುಂಪಲ, ವಿಶ್ವಾಸ್ ಮಂಜೇಶ್ವರ, ಸತೀಶ್ ಪೆಡ್ರೆ, ಶಿವನ್ ಉಪ್ಪಳ, ಸಂತೋಷ್ ಪಳ್ಳಿಕ್ಕರ, ಶ್ಯಾಮ್ ಶಶಿ, ರಮೇಶ್, ಗಿರೀಶ್ ನೀಲೇಶ್ವರ ಮತ್ತು ಬಿಜು ಕಾಞಂಗಾಡ್ ಚಿತ್ರ ರಚನೆಯಲ್ಲಿ ಭಾಗಿಯಾದರು.