ರಾಜ್ಯಮಟ್ಟದ ಅಂತರ್, ವಿವಿ ಕಿರು ನಾಟಕ ಸ್ಪರ್ಧೆ
ಮೂಡುಬಿದಿರೆ: ಮಂಗಳೂರು ವಿವಿ ಮತ್ತು ಆಳ್ವಾಸ್ ಕಾಲೇಜು ಸಹಯೋಗದಲ್ಲಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸ್ಕೌಟ್ ಗೈಡ್ಸ್ ಕನ್ನಡ ಭವನದಲ್ಲಿ ಎರಡು ದಿನಗಳ ಕಾಲ ನಡೆದ ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟ ವಿಷಯಾಧಾರಿತ ರಾಜ್ಯಮಟ್ಟದ ಅಂತರ್ ವಿವಿ ಕಿರು ನಾಟಕ ಸ್ಪರ್ಧೆಯಲ್ಲಿ ಮಂಗಳೂರು: ವಿವಿಯನ್ನು ಪ್ರತಿನಿಧಿಸಿದ್ದ ಆಳ್ವಾಸ್ ಕಾಲೇಜಿನ “ಅಮರಕ್ರಾಂತಿ ಹೋರಾಟ: 1837″ನಾಟಕ ಪ್ರಥಮ ಹಾಗೂ ಮೈಸೂರು ವಿ.ವಿಯನ್ನು ಪ್ರತಿನಿಧಿಸಿದ್ಧ ಗಂಗೂಬಾಯಿ ಹಾನಗಲ್ ಸಂಗೀತ ಕಾಲೇಜಿನ ಹಲಗಲಿ ಬೇಡರು ನಾಟಕ ದ್ವಿತೀಯ ಸ್ಥಾನವನ್ನು ಪಡೆದಿದೆ.
ಮಂಗಳೂರು ವಿ.ವಿಯ ಗೋವಿಂದದಾಸ್ ಕಾಲೇಜು ತೃತೀಯ, ಎನ್.ಎಂ.ಸಿ ಸುಳ್ಯ ಹಾಗೂ ಕೊಟ್ಟೂರ ಸ್ವಾಮಿ, ಡಿ.ಎಡ್ ಕಾಲೇಜು ಬಳ್ಳಾರಿ ಸಮಾಧಾನಕರ ಬಹುಮಾನ ಪಡೆದಿವೆ. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಅಧ್ಯಕ್ಷತೆ ವಹಿಸಿದರು. ಮಂಗಳೂರು ವಿಶ್ವವಿದ್ಯಾನಿಲಯ ಕುಲಸಚಿವ ಡಾ.ಕಿಶೋರ್ ಕುಮಾರ್, ತೀರ್ಪುಗಾರರಾದ ಡಾ.ಆರ್ ನರಸಿಂಹ ಮೂರ್ತಿ, ಲಕ್ಷ್ಮಣ್ ಮಲ್ಲೂರು, ಡಾ.ಕಾತ್ಯಾಯಿನಿ ಕುಂಜಿಬೆಟ್ಟು, ಸ್ಪರ್ಧೆಯ ಪರಿವೀಕ್ಷಕ ಧನಂಜಯ ಕಾಂಬ್ಳೆ, ಉಪಸ್ಥಿತರಿದ್ದರು.