ಮೂಡುಬಿದಿರೆ: ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ
ಮೂಡುಬಿದಿರೆ: ನಿಟ್ಟೆಯ ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆ ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಆಲಂಗಾರಿನಲ್ಲಿ ಭಾನುವಾರ ನಡೆದಿದೆ.
ಪುರಸಭಾ ವ್ಯಾಪ್ತಿಯ ಅಲಂಗಾರು ಆಶ್ರಯ ಕಾಲನಿಯ ನಿವಾಸಿ ಸುರೇಶ್ ಭಂಡಾರಿ ಅವರ ಪುತ್ರ, ನಿಟ್ಟೆಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಸಾತ್ವಿಕ್ (೨೧) ಆತ್ಮಹತ್ಯೆ ಮಾಡಿಕೊಂಡಾತ.
ಹೆತ್ತವರು ಮನೆಯಲ್ಲಿ ಚನ್ನಾಗಿ ಓದುವಂತೆ ಬುದ್ಧಿಮಾತು ಹೇಳಿದ್ದು, ಅದರಂತೆ ಸಾತ್ವಿಕ್ ಕೂಡಾ ಹೆಚ್ಚಾಗಿ ಓದುವತ್ತ ಗಮನ ಹರಿಸುತ್ತಿದ್ದ ಆದರೆ ಎಕ್ಸಾಂನಲ್ಲಿ ಕಡಿಮೆ ಅಂಕ ಬಂದಿದ್ದು, ಈ ಬಗ್ಗೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಿಳಿದು ಬಂದಿದೆ.
ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.