ಮೂಡುಬಿದಿರೆ: ಮೊದಲ ಮತ ಚಲಾಯಿಸಲಿರುವ ನೂತನ ಮತದಾರರಿಗೆ ಮತದಾನದ ಜಾಗೃತಿ ಕಾರ್ಯಕ್ರಮ
ಮೂಡುಬಿದಿರೆ: ಭಾರತ ಚುನಾವಣಾ ಆಯೋಗ, ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್‌ಸಮಿತಿ ಹಾಗೂ ಸಾರ್ವತ್ರಿಕ ಲೋಕಸಭಾ ಚುನಾವಣೆ -2024 ಮೂಡುಬಿದಿರೆ ಸ್ವೀಪ್ ಸಮಿತಿ ವತಿಯಿಂದ ಮೂಡುಬಿದಿರೆ ತಾಲೂಕಿನ ಮಹಾವೀರ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಮತದಾನದ ಮಹತ್ವ ಹಾಗೂ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮವು ಸೋಮವಾರ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟಚಲಪತಿ ಅವರು ಯುವ ವಿದ್ಯಾರ್ಥಿಗಳಿಗೆ ಮತದಾನ ತಮ್ಮಜೀವನದಲ್ಲಿ ಎಷ್ಟು ಮುಖ್ಯ ಹಾಗೂ ಅದು ನಮ್ಮ ಹಕ್ಕು ಎಂದು ತಿಳಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿಗಳು ಎಪ್ರಿಲ್ 26 ರಂದು ಮತಗಟ್ಟೆ ತೆರಳಿ ತಮ್ಮ ಜವಾಬ್ದಾರಿಯಂತೆ ಮತ ಚಲಾಯಿಸಿ ಎಂದರು.
ಮೂಡುಬಿದಿರೆ TLMT ರಂಜಿತಾ ಶೆಟ್ಟಿ ಅವರು ಮತದಾನದ ಮಹತ್ವ, ರಾಷ್ಟ್ರದ ಭವಿಷ್ಯ ನಿರ್ಧರಿಸುವಲ್ಲಿ ಯುವ ಮತದಾರರ ಪಾತ್ರ ಮತ್ತು ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ನಿರ್ಧಾರದ ಬಲದ ಬಗೆಗೆ ಉಪಯುಕ್ತ ಮಾಹಿತಿ ನೀಡಿದರು.
ಮುಲ್ಕಿ ಹೋಬಳಿ TLMT ಚಿತ್ರಾಶ್ರೀ ಕೆ.ಎಸ್ ಅವರು ಮತದಾರರಿಗೆ ಚುನಾವಣಾ ಆಯೋಗ ಬಳಕೆಗೆ ತಂದಿರುವ ಉಪಯುಕ್ತ ಆಪ್ ಗಳು ಹಾಗೂ ಕ್ಷೇತ್ರದ ಮತದಾನದ ಪ್ರಮಾಣ ಹೆಚ್ಚಿಸುವಲ್ಲಿ ಯುವ ಮತದಾರರ ಪಾತ್ರದ ಬಗೆಗೆ ಸಕಾಲಿಕ ಮಾಹಿತಿ ಒದಗಿಸಿದರು. ಬಳಿಕ ಮತದಾನ ಮಹತ್ವ ತಿಳಿಸಲು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು.
ಹಾಗೂ ಮತದಾನಕ್ಕೆ ಜಾಗೃತಿ ಗೀತೆಯನ್ನು ವೀಕ್ಷಿಸಲಾಯಿತು.
ಈ ಸಂದರ್ಭದಲ್ಲಿ ಪದವಿ ಕಾಲೇಜು ಪ್ರಾಂಶುಪಾಲ ಹರೀಶ್(ಪ್ರಭಾರ), ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಮೇಶ್‌ಭಟ್ ಉಪಸ್ಥಿತರಿದ್ದರು.
ರಾಜ್ಯಶಾಸ್ತ್ರ ಉಪನ್ಯಾಸಕಿ ಪೂರ್ಣಿಮಾ ಅವರು ಕಾರ್ಯಕ್ರಮ ನಿರೂಪಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕ ಪ್ರವೀಣ್ ಸ್ವಾಗತಿಸಿದರು.