ಬಿಷಪ್ ಪೋಳಿಕಾರ್ಪೋಸ್ ಕಿಂಡರ್ ಗಾರ್ಡನ್ ಪುಟಾಣಿಗಳ ಪದವಿ ಪ್ರಧಾನ ಸಮಾರಂಭ
ನೆಲ್ಯಾಡಿ :ಉದನೆ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಗಳು ಉದನೆ,ಇದರ ಕಿಂಡರ್ ಗಾರ್ಡನ್ ಪುಟಾಣಿಗಳ ಪದವಿ ಪ್ರಧಾನ ಸಮಾರಂಭ ಇತ್ತೀಚೆಗೆ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ರೆ.ಸಿಸ್ಟರ್ ಲಿಸ್ಸ್ ಮ್ಯಾಥ್ಯೂ , ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಎಲ್ಲಾ ಪುಟಾಣಿಗಳಿಗೆ ಶುಭ ಹಾರೈಸಿ ಪೋಷಕರಿಗೆ ಕಿವಿ ಮಾತನ್ನು ಹೇಳಿದರು.ಇನ್ನೊರ್ವ ಅತಿಥಿ ರೆ.ಸಿಸ್ಟರ್ ಎಲಿಝೆಟ್ ಮ್ಯಾಥ್ಯೂ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.ಸಂಚಾಲಕರಾದ ರೆ.ಫಾ ಹನಿ ಹನಿ ಜೇಕಬ್ ಎಲ್ಲಾ ಪುಟಾಣಿಗಳಿಗೆ ಪ್ರಮಾಣ ಪತ್ರ ಹಾಗೂ ಪದಕ ನೀಡಿ ಅಭಿನಂದಿಸಿದರು.ಒಟ್ಟು 41 ಪುಟಾಣಿಗಳು UKG ಪದವಿ ಪಡೆದುಕೊಂಡು ಒಂದನೇ ತರಗತಿಗೆ ದಾಖಲಾಗಲು ಅರ್ಹತೆ ಪಡೆದುಕೊಂಡರು.
ಸಂಸ್ಥೆಯ ಆಡಳಿತ ಅಧಿಕಾರಿ ಜಾನ್ ಕೆ.ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಮೇಹಿ ಜಾರ್ಜ್,ಸೈಂಟ್ ಆಂಟನೀಸ್ ಪ್ರೌಢ ಶಾಲೆಯ ಮುಖ್ಯಗುರು ಶ್ರೀಧರ ಗೌಡ ,ಆಂಗ್ಲ ಮಾಧ್ಯಮ ವಿಭಾಗದ ಪ್ರಭಾರ ಮುಖ್ಯಗುರು ಯಶೋಧರ,ಕಿಂಡರ್ ಗಾರ್ಡನ್ ಮುಖ್ಯಸ್ಥೆ ಶ್ರೀಮತಿ ಪ್ರತೀಕ್ಷಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಎಲ್ಲಾ ಸಿಬ್ಬಂದಿ ವರ್ಗ ,ಪಾಲಕ ವೃಂದ,ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಶಿಕ್ಷಕಿ ಸೌಮ್ಯ ಸ್ವಾಗತಿಸಿ ,ವಿಲ್ಮಾ ಡಿಸೋಜ ಕಾರ್ಯಕ್ರಮ ನಿರೂಪಿಸಿ ,ನಿಶಾ ವಂದಿಸಿದರು.