ಅಯ್ಯಪ್ಪ ವೃತದಾರಿ ಹೃದಯಾಘಾತದಿಂದ ನಿಧನ

ಮೂಡುಬಿದಿರೆ: ಅಯ್ಯಪ್ಪ ವೃತದಾರಿ ಮೂಡುಬಿದಿರೆ ಮಿಜಾರು ಸಮೀಪದ ಕೊಪ್ಪದ ಕುಮೇರು ಶೇಖರ ಪೂಜಾರಿ (74) ಅವರು ಶಬರಿಮಲೆಗೆ ಹೋಗಿದ್ದ ವೇಳೆ ಹೃದಯಾಘಾತದಿಂದ ಭಾನುವಾರ ನಿಧನರಾಗಿದ್ದಾರೆ. ಶೇಖರ ಪೂಜಾರಿ ಅವರು ಕಳೆದ 48 ವರ್ಷಗಳಿಂದ ಅಯ್ಯಪ್ಪ ಮಾಲಾಧಾರಿಯಾಗಿ ಶಬರಿಮಲೆಗೆ ಯಾತ್ರೆ ಹೋಗುತ್ತಿದ್ದರು. ಮೂಡುಬಿದಿರೆ ಪರಿಸರದಲ್ಲಿ ಹಿರಿಯ ಮಾಲಾಧಾರಿಯಾಗಿದ್ದ ಅವರು ಈ ವರ್ಷ 48 ನೇ ವರ್ಷದ ಮಾಲಾಧಾರಿಯಾಗಿದ್ದರು. ಯಾತ್ರೆ ಕೈಗೊಂಡಿದ್ದ ಅವರು ಭಾನುವಾರ ಇರುಮುಡಿ ಹೊತ್ತು ಹೋಗುತ್ತಿರುವಾಗಲೇ ಶಬರಿಮಲೆ ಸಮೀಪದ ಪಂಪೆ ಎಂಬಲ್ಲಿ ಹೃದಯಾಘಾತಗೊಂಡು ನಿಧನರಾಗಿದ್ದಾರೆ. ಮೃತರು ಪತ್ನಿ, ನಾಲ್ವರು ಪುತ್ರರನ್ನು ಅಗಲಿದ್ದಾರೆ
