ಮಂಗಳೂರು: ಸೆ.29ರಂದು ಮುದ್ರ ಹೌಸ್‍ನ ಕಟ್ಟಡ ಲೋಕಾರ್ಪಣೆ
ಮುದ್ರಾ ಸಂಸ್ಥೆಯು ಪ್ರಿಂಟಿಂಗ್ ಕ್ಷೇತ್ರದಲ್ಲಿ ಕಳೆದ 28 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಇದೀಗ ಹೊಸತನದೊಂದಿಗೆ ಸಂಸ್ಥೆ ಆರಂಭಗೊಳ್ಳುತ್ತಿದೆ. ಮಂಗಳೂರಿನ ಅಳಕೆ ನಾಗಬ್ರಹ್ಮ ದೇವಸ್ಥಾನದ ಸಮೀಪದಲ್ಲಿ ಮುದ್ರ ಹೌಸ್‍ನ ಕಟ್ಟಡ ನಿರ್ಮಾಣಗೊಂಡಿದ್ದು, ಇದರ ಉದ್ಘಾಟನಾ ಸಮಾರಂಭವು ಸೆಪ್ಟಂಬರ್ 29ರಂದು ನಡೆಯಲಿದೆ.
ಅವರು ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಮುದ್ರಾ ಪ್ರಿಂಟಿಂಗ್ ಸಂಸ್ಥೆಯು ಕಳೆದ 28 ವರ್ಷಗಳಿಂದ ಗ್ರಾಹಕರ ಸೇವೆಯಲ್ಲಿದ್ದು, ಕೈಗೆಟಕುವ ಬೆಲೆಯಲ್ಲಿ ಉತ್ತಮ ದರ್ಜೆಯ ಸುಧಾರಿತ ತಂತ್ರಜ್ಞಾನವನ್ನು ಆದರಿಸಿ ಎಡ್ವಾನ್ಸ್‍ಡ್ ಸೇವೆಯನ್ನು ನೀಡುತ್ತಾ ಬಂದಿದ್ದೇವೆ. ಸ್ಪರ್ಧಾತ್ಮಕ ಬೆಲೆಯೊಂದಿಗೆ ವಾಣಿಜ್ಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತ ಇಂದು ಮುದ್ರಾ ಸಂಸ್ಥೆಯು ನೂತನ ಸ್ವಂತ ಕಟ್ಟಡ ಉದ್ಘಾಟನೆಗೆ ಸಜ್ಜಾಗಿ ನಿಂತಿದೆ. ಮಂಗಳೂರು ನಗರದ ಅಳಕೆ ನಾಗಬ್ರಹ್ಮ ದೇವಳದ ಸಮೀಪದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಮುದ್ರ ಹೌಸ್‍ನ ಕಟ್ಟಡದ ಉದ್ಘಾಟನಾ ಸಮಾರಂಭವು ಸೆಪ್ಟಂಬರ್ 29ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ.
ಮುದ್ರಾ ಪ್ರಿಂಟರ್ಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್, ಶಾಸಕರಾದ ವೇದವ್ಯಾಸ ಕಾಮತ್, ಡಾ. ವೈ ಭರತ್ ಶೆಟ್ಟಿ, ಎಕ್ಸ್‍ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ನರೇಂದ್ರ ಎಲ್ ನಾಯಕ್, ಸೈಂಟ್ ಜಾರ್ಜ್ ಹೋಮಿಯೋಪಥಿಯ ಮಾಲಕರಾದ ನೀಲ್ ಝಕಾರಿಯಾ, ಶ್ರೀನಿವಾಸ ನರ್ಸಿಂಗ್ ಹೋಮ್ ಮಾಜಿ ಪಾಲುದಾರ ಡಾ. ಗಣೇಶ್ ಭಟ್, ಕಾರ್ಪೋರೇಟರ್ ಜಯಶ್ರೀ ಕುಡ್ವ, ಅರ್ಕಿಟೆಕ್ಸ್ ಶ್ರೀ ಬಾಬಾ ಅಲಂಕಾರ್ ಮತ್ತು ಸಾಯಿಭಾಗ್ಯ ಬಿಲ್ಡರ್ಸ್ ಮಾಲಕರಾದ ಪ್ರಶಾಂತ್ ಕುಮಾರ್ ಭಾಗವಹಿಸಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸ್ಥೆಯಲ್ಲಿ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ವರ್ಗದವರನ್ನು ವಿಶೇಷ ನಗದು ಬಹುಮಾನ ನೀಡು ಗೌರವಿಸಲಾಗುವುದು ಎಂದರು.
ಮುದ್ರಾ ಸಂಸ್ಥೆಯು ಈಗಾಗಲೇ ವಿಶೇಷವಾಗಿ ಪ್ರಿಂಟಿಂಗ್ ಕ್ಷೇತ್ರದಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದ್ದು, ನವೀನ ಶೈಲಿಯ ಎಲ್ಲಾ ಮದುವೆ ಕಾಗದಗಳು, ಬ್ರೋಶರ್ಸ್, ಕರಪತ್ರಗಳು, ಬಿಲ್‍ಬುಕ್ಸ್, ಲೆಟರ್ ಹೆಡ್ಸ್, ವಿಸಿಟಿಂಗ್ ಕಾಡ್ರ್ಸ್, ಮೆನು ಕಾಡ್ರ್ಸ್, ಬ್ಯಾನರ್ಸ್, ಬೋಡ್ರ್ಸ್, ಡಿಜಿಟಲ್ ಇನ್ವೀಟೇಶನ್, ರಬ್ಬರ್ ಸ್ಟಾಂಪ್, ಎಲ್ಲಾ ರೀತಿಯ ಬಾಕ್ಸ್‍ಗಳು ಅಂದರೆ, ಮೆಡಿಸಿನ್, ಪಿಜಾ, ಬರ್ಗರ್, ಕೇಕ್ ಬಾಕ್ಸ್, ಇತ್ಯಾದಿ ಬಾಕ್ಸಗಳಿಗೆ ಎಲ್ಲಾ ರೀತಿಯ ಪ್ರಿಂಟ್ ಮಾಡಿಕೊಡುವುದಲ್ಲದೆ ಎಲ್ಲಾ ರೀತಿಯ ಆಫೀಸ್ ಮತ್ತು ಸ್ಕೂಲ್ ಸ್ಟೇಶನರೀಸ್‍ಗಳು ಕೂಡ ಹೋಲ್‍ಸೇಲ್ ದರದಲ್ಲಿ ಲಭ್ಯವಿದೆ.
ಅಂತೆಯೇ ಸ್ಟಾರ್ ಹೊಟೇಲ್‍ಗಳಿಗೆ ಬೇಕಾಗುವ ರೂಮ್ ಅಮೆನಿಟೀಸ್‍ಗಳಾದ ಡೆಂಟಲ್ ಕಿಟ್, ಶೇವಿಂಗ್ ಕಿಟ್, ಶ್ಯಾಂಪೂ, ಬಾಡಿ ಲೋಶನ್, ಕಂಡೀಶನರ್, ಶವರ್ ಜೆಲ್, ಸೋಪ್, ಕೋಂಬ್, ಇತ್ಯಾದಿಗಳಿಗಳನ್ನು ಅವರ ಬ್ರಾಂಡ್ ನೇಮ್‍ಗಳಲ್ಲಿ ಕ್ಲಪ್ತ ಸಮಯದಲ್ಲಿ ಕೈಗೆಟಕುವ ದರದಲ್ಲಿ ನೀಡುತ್ತಾ ಬಂದಿದ್ದು, ಇದೀಗ ಇನ್ನಷ್ಟು ಹೊಸತದೊಂದಿಗೆ ಸಂಸ್ಥೆ ಆರಂಭಗೊಳ್ಳುತ್ತಿದೆ ಎಂದರು.
ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಮಂಜುಳಾ, ನಿಹಾಲ್ ಕೆ, ಸಿಬ್ಬಂದಿ ವರ್ಗದವರಾದ ಸುಜಾತ, ಯೋಗೀಶ್ ಮತ್ತು ಪ್ರಸಾದ್ ಉಪಸ್ಥಿತರಿದ್ದರು.