ಮಂಗಳೂರು : ಮುಕುಂದ್ ಎಂಜಿಎಂ ರಿಯಾಲ್ಟಿ: ಕೇದಾರ್ ಹೈ ಲಿವಿಂಗ್ ಲಕ್ಷುರಿ ವಸತಿ ಸಮುಚ್ಚಯದಲ್ಲಿ ಮಾದರಿ ಫ್ಲ್ಯಾಟ್ ವೀಕ್ಷಣೆಗೆ ಸಿದ್ಧ
ಮುಕುಂದ್‌ಎಂಜಿಎಂರಿಯಾಲ್ಟಿಯವರಿಂದ ಮಂಗಳೂರಿನ ವಿಮಾನ ನಿಲ್ದಾಣ ರಸ್ತೆಯ ದೇರೇಬೈಲ್‌ನಲ್ಲಿ ನಿಮಾರ್ಣಗೊಳ್ಳುತ್ತಿರುವ ‘ಕೇದಾರ್-ಹೈ ಲಿವಿಂಗ್ ಲಕ್ಷುರಿ ಹೋಮ್ಸ್ ವಸತಿ ಸಮುಚ್ಚಯದಲ್ಲಿ ಗ್ರಾಹಕರ ವೀಕ್ಷಣೆಗೆ ಮಾದರಿ ಫ್ಲ್ಯಾಟ್ ಸಿದ್ಧವಾಗಿದ್ದು ಇಲ್ಲಿ ಹೈ ಲಿವಿಂಗ್ ಲಕ್ಷುರಿ ವೈಶಿಷ್ಟ್ಯಗಳಾದ ಇನ್ಫಿನಿಟಿ ಸ್ವಿಮ್ಮಿಂಗ್ ಪೂಲ್‌ಆನ್‌ರೂಫ್‌ಟಾಪ್, ಬ್ಯಾಡ್ಮಿಂಟನ್‌ಕೋರ್ಟ್, ವಿಶಾಲವಾದಡಬಲ್ ಹೈಟ್ ಹೋಂದಿರುವ ವಿಸಿಟರ್ಸ್ ಲೋಬಿ, ಸ್ನೇಕ್ಸ್‌ಆಂಡ್ ಲ್ಯಾಡರ್ಸ್ ಔಟ್‌ಡೋರ್‌ಗೇಮ್, ಓಪನ್‌ಏರ್‌ತಿಯೇಟರ್, ಔಟ್‌ಡೋರ್‌ಓಪನ್‌ಜಿಮ್ನಾಷಿಯಮ್, ಒಳಾಂಗಣ ಹಾಗೂ ಹೊರಾಂಗಣ ಆಟದತಾಣ, ಮಕ್ಕಳ ಆಟದ ತಾಣ, ಲೈಬ್ರೇರಿ, ಯೋಗಾ ಪೆವೀಲಿಯನ್, ಸೋಲಾರ್‌ಇಲೆಕ್ಟ್ರಿಕಲ್ ಪ್ಯಾನೆಲ್ಸ್, ಸಿಸಿ ಟಿವಿ ಕ್ಯಾಮರಾ, ಸ್ವಯಂಚಾಲಿತ ಲಿಫ್ಟ್, ಕಾರ್ ಪಾರ್ಕಿಂಗ್ ಮತ್ತು ಜನರೇಟರ್ ವ್ಯವಸ್ಥೆಗಳನ್ನು ಒದಗಿಸಿಕೊಡಲಾಗುವುದು. ಈ ವಸತಿ ಸಮುಚ್ಚಯದಲ್ಲಿ 16 ಅಂತಸ್ತುಗಳನ್ನು ಒಳಗೊಂಡ 78 ಮನೆಗಳು ನಿರ್ಮಾಣಗೊಳ್ಳುತ್ತಿವೆ. ಕೇದಾರ್ ವಸತಿ ಸಮುಚ್ಚಯದಲ್ಲಿ 2BHK ಪ್ಲಾಟ್‌ಗಳ ದರರೂ. 72ಲಕ್ಷ ಆಗಿದ್ದು ಇಲ್ಲಿ 3BHK ಹಾಗೂ 4BHK ಡ್ಯುಪ್ಲೆಕ್ಸ್ ಫ್ಲಾಟ್‌ಗಳೂ ಲಭ್ಯವಿವೆ.
ಈ ಹಿಂದೆರಾಜ್ಯ ಸರ್ಕಾರ “ಕರ್ನಾಟಕಡಿಜಿಟಲ್ ಇಕಾನಮಿ ಮಿಷನ್” ಕಾರ್ಯಕ್ರಮಯೋಜನೆಯನ್ನು ಸ್ಮಾರ್ಟ್ ಸಿಟಿ ಮಂಗಳೂರು ನಗರಕ್ಕೂ ವಿಸ್ತರಣೆ ಮಾಡುವಂತೆ ಘೋಷಿಸಿತ್ತು. ಕೊವಿಡ್‌ನಿಂದಾಗಿ ಹಲವಾರು ಕಾರ್ಪೋರೇಟ್ ಹಾಗೂ ಐಟಿ ಸಂಸ್ಥೆಗಳು ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಣೆ ಮಾಡುವ ಉದ್ದೇಶದಿಂದ ಮಂಗಳೂರಿಗೆ ಬರುವ ಯೋಜನೆಯನ್ನೂ ರೂಪಿಸಿತ್ತು. ಈ ಕಂಪನಿಗಳ ಬೇಡಿಕೆಯನ್ನು ಅಥೈಸಿಕೊಂಡ ಮುಕುಂದ್ ಎಂಜಿಎಂ ರಿಯಾಲ್ಟಿ ಸಂಸ್ಥೆ ಮಂಗಳೂರಿನಲ್ಲೇ ಪ್ರಪ್ರಥಮವಾಗಿ ಎಲ್ಲಾ ಸೌಲಭ್ಯಗಳನ್ನೊಳಗೊಂಡ ವರ್ಟೆಕ್ಸ್ ವರ್ಕ್‌ಸ್ಪೇಸ್ ಮತ್ತು ಅಜಂತಾ ಬುಸಿನೆಸ್ ಸೆಂಟರ್ ಎಂಬ ಹೊಸ ಪರಿಕಲ್ಪನೆಯನ್ನು ಪರಿಚಯಿಸಿ ಕಾರ್ಪೋರೇಟ್ ಹಾಗೂ ಐಟಿ ಸಂಸ್ಥೆಗಳ ಅಗತ್ಯ ಸೌಲಭ್ಯಗಳನ್ನು ಯಶಸ್ವಿಯಾಗಿ ಪೂರೈಸಿ ಹೆಸರುವಾಸಿಯಾಗಿತ್ತು.
ಕಾರ್ಪೋರೇಟ್ ಹಾಗೂ ಐಟಿ ಸಂಸ್ಥೆಗಳು ಅಗತ್ಯ ಸೌಲಭ್ಯಗಳನ್ನು ಹೊಂದಿರುವಂತಹ ಸ್ಥಳ ಹುಡುಕಾಟ ಮಾಡುವಂತ ಸಾಧ್ಯತೆ ಹೆಚ್ಚುತ್ತಿರುವುದರಿಂದಇಂತಹಕಾರ್ಯಕ್ಷೇತ್ರಕ್ಕೆ ಬೇಕಾದಎಲ್ಲ ಸೌಲಭ್ಯಗಳನ್ನು ನಿರಂತರವಾಗಿ ಒದಗಿಸಿಕೊಡುವ ಕೆಲಸ ‘ವರ್ಟೆಕ್ಸ್ ವರ್ಕ್‌ಸ್ಪೇಸ್’ ಪೂರೈಸಿತು ಹಾಗೂ ಇದರೊಂದಿಗೆ ಕಳೆದ 3 ವರ್ಷಗಳಲ್ಲಿ 27 ಕಾರ್ಪೋರೇಟ್ ಸಂಸ್ಥೆಗಳು ವರ್ಟೆಕ್ಸ್‌ನಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿದ್ದು 1200 ಕ್ಕೂ ಹಚ್ಚುವರಿ ಉದ್ಯೋಗವಕಾಶಗಳನ್ನು ಮಂಗಳೂರಿನಲ್ಲಿ ಸೃಷ್ಟಿಸಿವೆ. ಈ ಸಾಧನೆಗಾಗಿ ವರ್ಟೆಕ್ಸ್ ಸಂಸ್ಥೆಯು ಅಟಲ್ ಇನ್‌ಕ್ಯುಬೇಶನ್ ಸೆಂಟರ್, ನಿಟ್ಟೆ ಮತ್ತು ಕರ್ಣಾಟಕ ಬ್ಯಾಂಕ್ ವತಿಯಿಂದ 2022ರಲ್ಲಿ ನಡೆದ ಎಂಎಸ್‌ಎಂ ಇಕಾನ್‌ಕ್ಲೇವ್‌ನಲ್ಲಿ ಬೆಸ್ಟ್ ಇನ್ನೋವೇಟಿವ್ ಎಂಟರ್‌ಪ್ರೈಸ್ ಪ್ರಶಸ್ತಿಯನ್ನು ಪಡೆಯಿತು. ಇದೀಗ ಮಂಗಳೂರಿನಲ್ಲಿ ವರ್ಕ್‌ಸ್ಪೇಸ್ ಮಾದರಿಯ ಸ್ಥಳಕ್ಕಾಗಿ ಹಲವಾರುಕಾರ್ಪೋರೇಟ್ ಹಾಗೂ ಐಟಿ ಸಂಸ್ಥೆಗಳಿಂದ ಬೇಡಿಕೆ ಹೆಚ್ಚಾಗುತ್ತಿದ್ದು, ಮುಕುಂದ್ ಎಂಜಿಎಂ ರಿಯಾಲ್ಟಿ ಸಂಸ್ಥೆಯು ನಗರದ ಬಿಜೈ – ಕಾಪಿಕಾಡ್‌ನಲ್ಲಿತಮ್ಮ 3ನೇ ಯೋಜನೆಯಾದ ಅಶೋಕಾ ಬುಸಿನೆಸ್ ಸೆಂಟರ್‌ನ್ನು ನಿರ್ಮಿಸುತ್ತಿದೆ. ಇಲ್ಲಿ ಸಂಸ್ಥೆಗಳ ಕಾರ್ಯಾಚರಣೆಗೆ ಬೇಕಾದಂತಹಕಾನ್ಫರೆನ್ಸ್‌ರೂಮ್ಸ್, ಮೀಟಿಂಗ್ ರೂಮ್ಸ್, ಬ್ಯಾಕ್ವೆಟ್ ಹಾಲ್, ಆಡಿಟೋರಿಯಮ್, ಮನೋರಂಜನಾವಲಯ, ಗೇಮಿಂಗ್ ಝೋನ್, ಸೆಕ್ಯೂರ್‍ಡ್‌ಆಕ್ಸೆಸ್‌ಕಂಟ್ರೋಲ್, ಹೆಲ್ಪಡೆಸ್ಕ್ ವಿದ್ ವಿಸಿಟರ್ ಲಾಬಿ, ವಿಶಾಲವಾದ 3 ಲೆವೆಲ್‌ನಕಾರ್ ಪಾರ್ಕಿಂಗ್, Wi-Fi ಇಂಟರ್‌ನೆಟ್, ಕೆಫೆ ಮುಂತಾದ ಸೌಲಭ್ಯಗಳನ್ನೊಳಗೊಳ್ಳಲಿದೆ.
ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು ನಗರದ ಕಾಪಿಕಾಡನ ಸುಪ್ರಭಾತ್ ಬಿಲ್ಡಿಂಗ್‌ನಲ್ಲಿರುವ ಮುಕುಂದ್ ಎಂಜಿಎಂ ರಿಯಾಲ್ಟಿ ಸಂಸ್ಥೆಯ ಕಚೇರಿಯನ್ನು ಸಂಪರ್ಕಿಸಬಹುದು ಅಥವಾ www.mukundmgmrealty.com ನ್ನು ಸಂದರ್ಶಿಸಬಹುದು.