ಹೋರಾಟ ಮಾಡಿ ಉತ್ತರ ಕೊಡುವ ಶಕ್ತಿ ಬಿಜೆಪಿಗಿದೆ : ನಳಿನ್ ಕುಮಾರ್ ಕಟೀಲ್

ಪ್ರತೀ ನಾಗರಿಕನಿಗೂ ಅವನ ಧರ್ಮದ ಅನುಷ್ಠಾನದ ಹಕ್ಕಿದೆ. ಹತ್ತಾರು ವರ್ಷಗಳಿಂದ ಎಲ್ಲಾ ಇಲಾಖೆಗಳಲ್ಲೂ ಧಾರ್ಮಿಕ ಆಧಾರದಲ್ಲಿ ಪೂಜೆಗಳು ನಡೆಯುತ್ತಿದೆ. ಆಯುಧ ಪೂಜೆ, ಶಿಲಾನ್ಯಾಸಗಳ ಸಮಯದಲ್ಲಿ ಸಂಪ್ರದಾಯಬದ್ದವಾಗಿ ನಡೆದಿದೆ. ಇವತ್ತು ಇದನ್ನ ತಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದರು.

ಅವರು ಮಂಗಳೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದರು. ಕಾಂಗ್ರೆಸ್‍ನ ಹೀನಾ ರಾಜಕಾರಣ ಮತ್ತು ಸಿದ್ದರಾಮಯ್ಯ ಮಾನಸೀಕತೆ ಬಯಲಾಗಿದೆ. ಒಬ್ಬ ಮುಖ್ಯಮಂತ್ರಿ ಸಾಂವಿಧಾನಿಕವಾಗಿ ವ್ಯಕ್ತಿಯ ಧಾರ್ಮಿಕ ಆಚರಣೆಗೆ ಅಡ್ಡಿ ಬರೋದು ಸರಿಯಲ್ಲ. ಹಿಂದಿನಿಂದ ನಡೆದುಕೊಂಡು ಬಂದ ಪೂಜೆಗಳನ್ನ ಕೆಲವು ಇಲಾಖೆಗಳಲ್ಲಿ ಮಾಡುತ್ತಾರೆ. ನಂಬಿಕೆಗಳ ಆಧಾರದಲ್ಲಿ ಕೆಎಸ್ಸಾರ್ಟಿಸಿ, ಪೊಲೀಸ್ ಠಾಣೆಗಳಲ್ಲಿ ಆಯುಧ ಪೂಜೆ ಮಾಡುತ್ತಾರೆ. ಇಂಥ ಪೂಜೆಗಳನ್ನ ನಿಷೇಧಿಸುವ, ಬಹಿಷ್ಕಾರ ಹಾಕುವ ಕ್ರಮ ಸರಿಯಲ್ಲ ಎಂದರು.

ಪೂಜೆ ಮಾಡುವ ಪೆÇಲೀಸರನ್ನ ಒಂದು ಪಾರ್ಟಿಗೆ ಸೀಮಿತ ಮಾಡುವ ಹೀನ ರಾಜಕಾರಣ ಕಾಂಗ್ರೆಸ್‍ನಿಂದ ಆಗುತ್ತಿದೆ. ನೈತಿಕ ಪೆÇಲೀಸ್ ಗಿರಿ ವಿಚಾರದಲ್ಲಿ ಭಜರಂಗದಳ ನಿಷೇಧವನ್ನು ಉಲ್ಲೇಖ ಮಾಡುತ್ತಿದ್ದಾರೆ. ಇದು ಕಾಂಗ್ರೆಸ್ ಹಿಂದೂ ಸಮಾಜದ ಮೇಲೆ ಹೇಗೆ ಸವಾರಿ ಮಾಡುತ್ತೆ ಅನ್ನೋದನ್ನು ತೋರಿಸಿದೆ. ಇಂಥದ್ದರ ವಿರುದ್ದ ಹೋರಾಟ ಮಾಡಿ ಉತ್ತರ ಕೊಡುವ ಶಕ್ತಿ ಬಿಜೆಪಿಗಿದೆ ಎಂದು ಎಚ್ಚರಿಸಿದರು.

ಎಲ್ಲಾ ಇಲಾಖೆಗಳಲ್ಲೂ ರಾಜಕಾರಣ ಮಾಡುವ ಕೆಲಸಕ್ಕೆ ಕಾಂಗ್ರೆಸ್ ಕೈ ಹಾಕಿದೆ. ಅಧಿಕಾರಿಗಳನ್ನು ಕಂಟ್ರೋಲ್ ಮಾಡಿ ಕಾಂಗ್ರೆಸ್ ಅಜೆಂಡಾ ಹೇರುವ ಕೆಲಸ ಮಾಡ್ತಿದೆ. ಕಾಂಗ್ರೆಸ್ ತನ್ನ ಹಿಂದೂ ವಿರೋಧಿ ನೀತಿಯನ್ನ ಪ್ರಕಟಿಸಿಯೇ ಪ್ರಕಟಿಸುತ್ತೆ. ನಾವು ಹೋರಾಟದ ಮೂಲಕ ಕಾಂಗ್ರೆಸ್ ಗೆ ಉತ್ತರ ಕೊಡ್ತೇವೆ. ನಾವು ಹಿಂದೂಗಳ ಪರವಾಗಿದ್ದೇವೆ, ಗೋಹತ್ಯೆ ನಿಷೇಧ, ಮತಾಂತರ ನಿಷೇಧದ ಪರವಾಗಿದ್ದೇವೆ. ನಮ್ಮ 40% ಕಮಿಷನ್ ವಿರುದ್ದ ಇವರು ತನಿಖೆ ಮಾಡಲಿ.
ಜೊತೆಗೆ ಸಿದ್ದರಾಮಯ್ಯ ವಿರುದ್ದ ನಾವು ಲೋಕಾಯುಕ್ತಕ್ಕೆ ಕೊಟ್ಟ ದೂರಿನ ತನಿಖೆಯೂ ಆಗಲಿ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

Related Posts

Leave a Reply

Your email address will not be published.