ನೆಲ್ಯಾಡಿ: ಶ್ರೀರಾಮ ವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ

ನೆಲ್ಯಾಡಿ: ಶ್ರೀರಾಮ ವಿದ್ಯಾಲಯ ಸೂರ್ಯ ನಗರ ನೆಲ್ಯಾಡಿಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ ಕಾರ್ಯಕ್ರಮವು ನಡೆಯಿತು.
ಮುಖ್ಯ ಅತಿಥಿಗಳಾಗಿ ಉಪ್ಪಿನಂಗಡಿ ಆರಕ್ಷಕ ಠಾಣೆಯ ಉಪನಿರೀಕ್ಷಕರಾದ ರಾಜೇಶ್ ಕೆ.ವಿ., ಅವರು ಆಗಮಿಸಿ ‘ನಾಗರಿಕ ಶಿಷ್ಟಾಚಾರ’ದ ಕುರಿತು ಮಾಹಿತಿಯನ್ನು ನೀಡಿದರು. ಇನ್ನೋರ್ವ ಮುಖ್ಯ ಅತಿಥಿಗಳಾಗಿ ಕಡಬ ತಾಲೂಕಿನ ವಕೀಲರಾದ ಶ್ರೀಮತಿ ರಶ್ಮಿ ಅಶೋಕ್ ಆಗಮಿಸಿ ‘ಕಾನೂನು ಅರಿವು’ ವಿಷಯಕ್ಕೆ ಸಂಬಂಧಪಟ್ಟಂತೆ ವಿದ್ಯಾರ್ಥಿಗಳಲ್ಲಿ ಅರಿವನ್ನು ಮೂಡಿಸಿದರು.ವಿವೇಕಾನಂದ ಜಯಂತಿಯ ಪ್ರಯುಕ್ತ ಸ್ವಾಮೀಜಿ ಬದುಕಿನ ಸ್ವಾರಸ್ಯಕರ ಘಟನೆಗಳು ಈ ವಿಷಯದ ಕುರಿತಾಗಿ ವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯ ಹಾಗೂ ಕೈಗಾರಿಕಾ ತರಬೇತಿ ಸಂಸ್ಥೆ ನೆಲ್ಯಾಡಿಯ ಅಧ್ಯಾಪಕರಾದ ಸುಬ್ರಾಯ ಪಣಚ ಇವರು ಮಾತನಾಡಿದರು.


ಅಧ್ಯಕ್ಷತೆಯನ್ನು ವಿದ್ಯಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿ ಮೂಲಚಂದ್ರ ಕಾಂಚನ ವಹಿಸಿದರು.ಮುಖ್ಯಗುರುಗಳಾದ ಶ್ರೀ ಗಣೇಶ್ ವಾಗ್ಲೆಯವರು ಸ್ವಾಗತಿಸಿ. ಕುಮಾರಿ ರೇಷ್ಮಾ ವಂದಿಸಿದರು. ಶ್ರೀಮತಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.

Related Posts

Leave a Reply

Your email address will not be published.