21ನೇ ಒಡಿಯೂರು ಶ್ರೀಗುರುದೇವ ಸೇವಾ ಬಳಗ ಮುಂಬಯಿ ಘಟಕದ ವಾರ್ಷಿಕೋತ್ಸವ
ಸುಖ ದುಃಖಗಳನ್ನು ಸಮತೋಲನದಲ್ಲಿಡಲು ಆಧ್ಯಾತ್ಮಿಕತೆ ಬೇಕು .ಸುಖ ವೆಂದರೆ ಮನಸ್ಸಿನ ಸ್ಥಿತಿ ಯಾಗಿದೆ ಮನಸ್ಸನ್ನು ಏಕಾಗ್ರತೆಯಲ್ಲಿಟ್ಟು ಆಧ್ಯಾತ್ಮಿಕದ ವಿಚಾರಧಾರೆಗಳನ್ನು ನಮ್ಮಲ್ಲಿ ಇರಿಸಿಕೊಂಡಾಗ ಧರ್ಮದ ಕಡೆಗೆ ನಮ್ಮ ನಡೆಯಲು ಸಾಧ್ಯವಾಗುತ್ತದೆ ತಾಯಂದಿರು ಮಕ್ಕಳಿಗೆ ಜ್ಞಾನದ ಬೆಳಕಾಗಬೇಕು ಯುವ ಸಮುದಾಯ ಜಾಗೃತರದಾಗ ದೇಶ ಸದೃಡ ವಾಗುತ್ತದೆ ಎಂದುಒಡಿಯೂರು ಶ್ರೀ ಗುರು ದೇವಾನಂದ ಸ್ವಾಮೀಜಿ ಹೇಳಿದರು. ಶ್ರೀ ಗುರುದೇವದತ್ತ ಸಂಸ್ಥಾನಂ ಶ್ರೀಕ್ಷೇತ್ರ ಒಡಿಯೂರು ಇದರ ಶ್ರೀ ಗುರುದೇವ ಸೇವಾ ಬಳಗ ಮುಂಬಯಿ ಘಟಕದ 21ನೇ ವಾರ್ಷಿಕೋತ್ಸವ ಮತ್ತು ಗುರುಬಂಧುಗಳ ಸಮಾವೇಶವು ಕುರ್ಲಾದ ಬಂಟರ ಭವನ ದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಸೇವಾಕರ್ತರಿಗೆ ಗುರುದೇವ ಅನುಗ್ರಹ ಪ್ರಶಸ್ತಿಯನ್ನು ನೀಡಿ ಆಶೀರ್ವಾದ ನೀಡಿದರು.
ವಿಶೇಷ ಅತಿಥಿ ಬಂಟರ ಸಂಘ, ಮುಂಬೈ ಯ ಅಧ್ಯಕ್ಷರಾದ ಚಂಧ್ರಹಾಸ ಕೆ.ಶೆಟ್ಟಿ, ಸ್ವಾಮೀಜಿ ಅವರೊಂದಿಗೆ ಇದ್ದ ಒಡನಾಡಿನ ಅನುಭವಗಳನ್ನು ತಿಳಿಸುತ್ತಾ ಬಹಳ ವರ್ಷಗಳ ಹಿಂದೆ ಒಡಿಯೂರಿಗೆ ಹೋದಾಗ ಅಲ್ಲಿ ಶ್ರೀಗಳು ನನ್ನನ್ನು ವಿಶೇಷ ಪೂಜೆಯೆಲ್ಲೊಂದರಲ್ಲಿ ಭಾಗವಹಿಸುವುದಕ್ಕೆ ಅವಕಾಶ ಮಾಡಿಕೊಟ್ಟರು. ಅವರು ಚಿಂತನೆಗಳು ಸಮಾಜವನ್ನು ಬಲಿಷ್ಠ ಗೊಳಿಸಿದೆ ಎಂದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟ ಅಧ್ಯಕ್ಷರು ಐಕಳ ಹರೀಶ್ ಶೆಟ್ಟಿ ಮಾತನಾಡಿ, ಒಡೆಯೂರಿನ ಮಹಾರಾಷ್ಟ್ರ ಘಟಕದ ದಲ್ಲಿರುವ ಎಲ್ಲಾ ಸದಸ್ಯರು ಪ್ರೀತಿ ಮತ್ತು ಗೌರವನ್ನು ತುಂಬಿಕೊಂಡವರು. ಮುಂಬೈಯ ನಗರದಲ್ಲಿ ನಾವೆಲ್ಲರೂ ಜಾತಿ ಮತವನ್ನು ಮರೆತು ಒಳ್ಳೆಯ ಜೀವನವನ್ನು ನಡೆಸುತ್ತಾ ಬಂದಿದ್ದೇವೆ ನಮ್ಮೆಲ್ಲ ಬದುಕು ಯಶಸ್ವಿಯಾಗುವುದಕ್ಕೆ ಶ್ರೀಗಳು ಸದಾ ಅನುಗ್ರಹಿಸಲಿ ಎಂದು ನುಡಿದರು.
ಸಿ.ಎಂ.ಡಿ., ಹೇರಂಭ ಇಂಡಸ್ಟ್ರೀಸ್ ಲಿ.ಸದಾಶಿವ ಕೆ.ಶೆಟ್ಟಿ ಕೂಳೂರು ಕನ್ಯಾನ ಮಾತನಾಡುತ್ತಾ ನಾನಿಂದು ಸಮಾಜದಲ್ಲಿ ಗುರುತಿಸುವಂಥಾಗಲು ಐಕಳ ಹರೀಶ್ ಶೆಟ್ಟಿ ಎಂಥ ಸಾಧಕರು ಕಾರಣ ನಾನು ನನ್ನಿಂದ ನನ್ನಿಂದ ಆಗುತ್ತದೆ ಎಂಬುದು ಬರಿ ಶೂನ್ಯ ಎಂದರು.ಬಿ.ಎಸ್.ಕೆ.ಬಿ. ಅಸೋಸಿಯೇಷನ್, ಮುಂಬೈ ಅಧ್ಯಕ್ಷರು ಡಾ. ಸುರೇಶ್ ರಾವ್ ಮಾತನಾಡುತ್ತಾ ಎನ್ನುವುದನ್ನು ನಾನು ಅರಿತುಕೊಂಡವನು ಗೋಕುಲ ಬ್ರಹ್ಮಕಲಸ ಸಂದರ್ಭದಲ್ಲಿ ಮುಂಬೈಯ ತುಳು ಕನ್ನಡಿಗರು ಒಗ್ಗಟ್ಟಿನಲ್ಲಿ ಮಾಡಿರುವ ಸೇವೆ ಸದಾ ಗೋಕುಲದಲ್ಲಿ ಅವಿಸ್ಮರಣೆಯವಾಗಿ ಉಳಿದಿದೆ ಒಡೆಯುವರು ಶೀಗಳ ಮೃದು ಮಾತುಗಳು ಅವರ ಚಿಂತನೆಗಳು ಭಕ್ತರನ್ನು ಜಾಗ್ರತೆಗೊಳಿಸಿದೆ ಎಂದು ನುಡಿದರು.
ಮಹಿಳಾ ವಿಭಾಗ, ಬಂಟರ ಸಂಘ, ಮುಂಬೈ ಅಧ್ಯಕ್ಷೆ,ಉಮಾ ಕೃಷ್ಣ ಶೆಟ್ಟಿ ಮಾತನಾಡುತ್ತಾ ನಮ್ಮ ಗುರು ಸೇವೆಗಳು ಆಡಂಬರವಾಗಿರದೆ ಭಕ್ತಿಯಿಂದ ತುಂಬಿಕೊಂಡಾಗ ಗುರು ನಮ್ಮನ್ನು ಅನುಗ್ರಹಿಸುತ್ತಾರೆ ಎಂದರು. ಸಾಲಿಸಿಟರ್ ಎಡ್ವೊಕೇಟ್ ಸಜಿತ್ ಆರ್. ಸುವರ್ಣ ಮಾತನಾಡುತ್ತಾ ನಾನು ಈ ಎತ್ತರಕ್ಕೆ ಬೆಳೆದು ಬರುವುದಕ್ಕೆ ಶ್ರೀಗಳ ಆಶೀರ್ವಾದವೇ ಕಾರಣ ನಮಗೆ ಗುರುಗಳು ಆಶೀರ್ವದಿಸಿದ್ದಾರೆ ಅವರ ಆಶೀರ್ವಾದದ ನಡೆಯಲಿ ನಾವು ಬದುಕು ಕಟ್ಟುವ ಎಂದು ನುಡಿದರು ಒಡಿಯೂರು ಶ್ರೀಗುರುದೇವ ಸೇವಾ ಬಳಗ, ಮುಂಬಯಿ ಘಟಕದ ಉಪಾಧ್ಯಕ್ಷ ಗೋಲ್ನಾಡು ಗೊತ್ತು ಚಂದ್ರಹಾಸ ರೈ. ಮಾತನಾಡುತ್ತಾ ಭಕ್ತರು ನೀಡಿದ ಎಲ್ಲಾ ರೀತಿಯ ದೇನಿಗೆಗಳಿಂದಾಗಿ ಒಡೆಯೂರು ಅಭಿವೃದ್ದಿಯಾಗಿ ಬೆಳೆದಿದೆ ಅಪಾರ ರೀತಿಯ ಯೋಜನೆಗಳು ಅಲ್ಲಿ ರೂಪಗೊಂಡಿದೆ ಎಂದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾದ್ವಿ ಶ್ರೀ ಮಾತಾನಂದಮಯೀ ಅಮೃತವಚನ ನೀಡುತ್ತಾ ವ್ಯಾಯಾಮದಿಂದ ನಮ್ಮ ಆರೋಗ್ಯ ಉತ್ತಮವಾಗುತ್ತದೆ ಹಾಗೆ ಗುರು ಸೇವೆಯಿಂದ ಆತ್ಮ ಪರಿಶುದ್ಧವಾಗುತ್ತದೆ ಎಂದರು. ಇದೇ ವೇಳೆ ಗುರುದೇವಾನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಯಿತು. ವೇದಿಕೆಯಲ್ಲಿ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷ ರೇವತಿ ವಾಮಯ್ಯ ಶೆಟ್ಟಿ .ಒಡೆಯೂರು ಶ್ರೀಗಳ ಶತಾಬ್ದಿ ಕಾರ್ಯಕ್ರಮದ ಅಧ್ಯಕ್ಷ ವಾಮಯ್ಯ ಶೆಟ್ಟಿ .ಶ್ರೀಗುರುದೇವ ಸೇವಾ ಬಳಗ, ಮುಂಬಯಿ ಘಟಕದ ಉಪಾಧ್ಯಕ್ಷ ದಾಮೋದರ್ ಶೆಟ್ಟಿ ನವೀ ಮುಂಬಯಿ. ಗೌರವ ಪ್ರಧಾನ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿ ಗೌರವ ಕೋಶಧಿಕಾರಿ ರವೀಂದ್ರ ಶೆಟ್ಟಿ ಜೊತೆ ಕಾರ್ಯದರ್ಶಿ ಮೋಹನ್ ಹೆಗ್ಡೆ ಮತ್ತಿತರ ಪದಾಧಿಕಾರಿಗಳು ಉಪಸ್ಥಿರಿದ್ದರು. ಪ್ರಾರಂಭದಲ್ಲಿ ಪೇಟೆ ಮನೆ ಪ್ರಕಾಶ್ ಶೆಟ್ಟಿ ಸ್ವಾಗತಿಸಿದರು ಒಟ್ಟು ಕಾರ್ಯಕ್ರಮವನ್ನು ಪತ್ರಕರ್ತ ತುಳು ವಿದ್ವಾಂಸ ನವನೀತ್ ಶೆಟ್ಟಿ ಕದ್ರಿ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಯಕ್ಷ ಗಾನ – ನಾಟ್ಯ – ಹಾಸ್ಯ ವೈಭವ’ ನಡೆಯಿತು.