ಪಡುಬಿದ್ರಿ: ಪಡುಬಿದ್ರಿ ಪೇಟೆ ಸಂಚಾರ ಅವ್ಯವಸ್ಥೆಗೆ ಯುವಕ ಬಲಿ

ರಾಷ್ಟ್ರೀಯ ಹೆದ್ದಾರಿಯಲ್ಲೇ ವಾಹನ ನಿಲುಗಡೆ ಪರಿಪಾಠ ಹೊಂದಿರುವ ಪಡುಬಿದ್ರಿ ಪೇಟೆ ಪ್ರದೇಶದಲ್ಲಿ ಟ್ಯಾಂಕರ್ ನಡಿಗೆ ಬಿದ್ದ ಯುವಕನೊರ್ವ ದಾರುಣವಾಗಿ ಮೃತಪಟ್ಟ ಘಟನೆ ಘಟಿಸಿದೆ.

ಮೃತ ಯುವಕ ಪಡುಬಿದ್ರಿ ಕಂಚಿನಡ್ಕ ನಿವಾಸಿ ರಮೇಶ್ ಪೂಜಾರಿ ಎಂಬವರ ಪುತ್ರ ಪ್ರಜ್ವಲ್ ಪೂಜಾರಿ (19) ಈತ ಎಲ್ಲೂರಿನಲ್ಲಿ ಐಟಿಐ ಕೋರ್ಸ್ ನಡೆಸುತ್ತಿದ್ದು, ಇವರ ಸಂಬಂಧಿಗಳು ಮೃತಪಟ್ಟ ಹಿನ್ನಲೆಯಲ್ಲಿ ಈತನ ಮನೆಮಂದಿ ಕಿನ್ನಿಗೋಳಿಯ ಅಂಗರಗುಡ್ಡೆಗೆ ಹೋದ ಕಾರಣ ಈತನೂ ಅಲ್ಲಿಗೆ ಹೊರಟು ಪಡುಬಿದ್ರಿ ಪೇಟೆಗೆ ಬಂದಾಗ ಹೆದ್ದಾರಿಯಲ್ಲೇ ನಿಂತಿದ್ದ ಖಾಸಗಿ ಟೋರಿಸ್ಟ್ ಬಸ್ಸಿಗೆ ಡಿಕ್ಕಿಯಾಗಿ ರಸ್ತೆ ಮಧ್ಯಕ್ಕೆ ಎಸೆಯಲ್ಪಟ್ಟ ಈತನ ತಲೆ ಮೇಲೆ ಟ್ಯಾಂಕರ್ ಹರಿದು ಛಿದ್ರಗೊಂಡ ಸ್ಥಿತಿಯಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದ, ಒಂದು ದಿನದ ಹಿಂದೆಯಷ್ಟೇ ತನ್ನ ಹುಟ್ಟು ಹಬ್ಬ ಆಚರಿಸಿಕೊಂಡ ಯುವಕ ಇಂದು ಇಹಲೋಕ ತ್ಯಜಿಸಿರುವುದು ದುರ್ಧೈವವೇ ಸರಿ. ಇಲ್ಲಿನ ಸಂಚಾರ ಅವ್ಯವಸ್ಥೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
