ಭಾರತ ಹಿಂದೂಗಳ ದೇಶ : ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ

ಪುತ್ತೂರು: ಭಾರತದ ಇತಿಹಾಸ ಸಾವಿರಾರು ವರ್ಷ. ಈ ದೇಶ ಸುಮ್ಮನೆ ಬದುಕಿ ಬರಲಿಲ್ಲ. ಸಾಯುವವರನ್ನು ಬದುಕುವ ಹಾಗೆ ಮಾಡಿರುವ, ಜೀವನದ ದೃಷ್ಟಿ ನೀಡಿರುವ ದೇಶ ಭಾರತ, ಎಂದು ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಅವರು ಪುತ್ತಿಲ ಕೆರೆಮನೆ ಕಟ್ಟೆಯಲ್ಲಿ ನಡೆದ ಭಾರತ್ ಮಾತಾ ಪೂಜ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಮಾತನಾಡಿದರು,
ಈ ದೇಶ ನಮ್ಮ ಹಿಂದೂಗಳ ದೇಶ. ಹಿಂದುತ್ವವೇ ಮೂಲ ಚಿಂತನೆ ಎಂದು ಬೆಳೆದುಕೊಂಡು ಬಂದಿರುವ ಪಕ್ಷ. ಪಿಎಫ್‍ಐಯಂತಹ ದೇಶದ್ರೋಹದ ಸಂಘಟನೆಯನ್ನು ದಮನ ಮಾಡಲು ಮೇ 10ರಂದು ಒಳ್ಳೆಯ ಕಾಲ ಎಂದು ಹೇಳಿದ ಅವರು, ಪಕ್ಷ ಇಲ್ಲ, ಸಂಘಟನೆ ಇಲ್ಲ. ಅಂತಹವರು ಏನು ಮಾಡಬಹುದು. ಅರ್ಥ ಆಗ್ತಾ ಇಲ್ಲ. ಪಕ್ಷೇತರರಾಗಿ ನಿಂತವರು ಸ್ವಂತ ಸಾಮರ್ಥ್ಯದಿಂದ ಮತ ಕೇಳಲಿ. ಮೋದಿಜಿ, ಯೋಗಿಜಿ ಹೇಸರು ಹೇಳಿಕೊಂಡು ಮತ ಕೇಳುವುದು ಬೇಡ ಎಂದು ಅವರು ಹೇಳಿದರು.
ಸಭಾ ಕಾರ್ಯಕ್ರಮದ ಮೊದಲು ನೂರಾರು ಬಿಜೆಪಿ ಕಾರ್ಯಕರ್ತರು ಬೈಕ್ ರ್‍ಯಾಲಿ ಯಲ್ಲಿ ಸಭಾ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಇದೆ ಸಂದರ್ಭದಲ್ಲಿ ಹಿಂದೂ ಜಾಗರಣಾ ವೇದಿಕೆಯ ಡಾ.ಎಂ.ಕೆ.ಪ್ರಸಾದ್ ಭಂಡಾರಿ,ಇದರ ನೇತ್ರತ್ವ ವಹಿಸಿದ್ದ ಯುವ ಬಿಜೆಪಿ ಮುಖಂಡ ಕಿಶೋರ್ ಕುಮಾರ್ ಬೋಟ್ಯಾಡಿ, ಕೇಸರಿ ಶಾಲು ಹಾಕಿ ಬಂದ ಸಾವಿರಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.